Director K Viswanath Passed Away: ತೆಲುಗು ಚಿತ್ರರಂಗಕ್ಕೆ ಮತ್ತೊಂದು ಆಘಾತವಾಗಿದೆ. ‘ಕಲಾ ತಪಸ್ವಿ’ ಬಿರುದಾಂಕಿತ ನಿರ್ದೇಶಕ ಕೆ. ವಿಶ್ವನಾಥನ್ ಇಹಲೋಕ ತ್ಯಜಿಸಿದ್ದಾರೆ. 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಕೆ. ವಿಶ್ವನಾಥನ್ ಇಂದು ವಿಧಿವಶರಾಗಿದ್ದಾರೆ. ಕೆ ವಿಶ್ವನಾಥನ್ ಕಳೆದ ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕುಟುಂಬಸ್ಥರು ಅವರನ್ನು ಅಪೋಲೋ ಆಸ್ಪತ್ರೆಗೆ ಸೇರಿಸಿದ್ದರು. 


COMMERCIAL BREAK
SCROLL TO CONTINUE READING

93 ವರ್ಷದ ಕೆ ವಿಶ್ವನಾಥನ್ ಅವರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ. ಅವರ ಕುಟುಂಬ ಸದಸ್ಯರು ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ತರುತ್ತಿದ್ದಾರೆ. ಕೆ ವಿಶ್ವನಾಥನ್ ಅವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.


ಇದನ್ನೂ ಓದಿ:  ʼಒಂದೇ ಹಾಡಿಗೆ 16 ಬಟ್ಟೆ ಬದಲಿಸಿದ ರಣಬೀರ್ ಮತ್ತು ಶ್ರದ್ಧಾ.ʼ. ಯಾಕೆ ಗೊತ್ತೇ..!


ಕೆ ವಿಶ್ವನಾಥನ್ ಅವರು ಚಲನಚಿತ್ರೋದ್ಯಮದಲ್ಲಿ ಅತ್ಯಂತ ಪ್ರತಿಷ್ಠಿತ ಎಂದು ಪರಿಗಣಿಸಲಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ನಿರ್ದೇಶಿಸಿ ಸೂಪರ್ ಹಿಟ್ ಆಗಿರುವ ಶಂಕರಾಭರಣಂ ಚಿತ್ರ ಬಿಡುಗಡೆಯಾಗಿ ಇಂದಿಗೆ 43 ವರ್ಷಗಳು ಕಳೆದಿವೆ, ಆದರೆ ಅದೇ ದಿನ ಅವರು ನಿಧನರಾಗಿರುವುದು ಅವರ ಅಭಿಮಾನಿಗಳಿಗೆ ಶಾಕ್ ಆಗಿದೆ. ಸೌಂಡ್ ರೆಕಾರ್ಡಿಸ್ಟ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟು ಸಹಾಯಕ ನಿರ್ದೇಶಕರಾಗಿ ನಂತರ ನಿರ್ದೇಶಕರಾಗಿ 50ಕ್ಕೂ ಹೆಚ್ಚು ಹಿಟ್ ಚಿತ್ರಗಳನ್ನು ನೀಡಿದ್ದಾರೆ.


ನಿರ್ದೇಶನ ಮಾತ್ರವಲ್ಲದೇ, ಕ್ಯಾಮೆರಾ ಮುಂದೆ ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ಅವರ ನಿರ್ದೇಶನದ ಮೊದಲ ಚಿತ್ರ ಆತ್ಮ ಗೌರವಂ ಮತ್ತು ಅವರ ಮೊದಲ ಚಿತ್ರಕ್ಕೆ ರಾಜ್ಯ ಸರ್ಕಾರದಿಂದ ನಂದಿ ಪ್ರಶಸ್ತಿ ನೀಡಲಾಯಿತು. ಇದಾದ ನಂತರ ಶಂಕರಾಭರಣಂ ಚಿತ್ರದ ಮೂಲಕ ಅವರ ಖ್ಯಾತು ಎಲ್ಲೆಡೆ ಹರಡಿತು. ಈ ಚಿತ್ರವು ದೊಡ್ಡ ಯಶಸ್ಸನ್ನು ಗಳಿಸಿತು ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು ಸಿರಿವೆನ್ನೆಲ್ಲಾ ಕೆ ವಿಶ್ವನಾಥನ್ ಅವರ ವೃತ್ತಿಜೀವನದ ಮೈಲಿಗಲ್ಲು ಚಿತ್ರಗಳಲ್ಲಿ ಒಂದಾಯಿತು. ಅಲ್ಲದೆ ತಮ್ಮ ವೃತ್ತಿ ಜೀವನದಲ್ಲಿ ಸಪ್ತಪದಿ, ಸ್ವಾತಿಮುತ್ಯಂ, ಸ್ವಯಂಕೃಷಿ, ಶುಭೋದಯಂ, ಶುಭಲೇಖ, ಆಪದ್ಭಾಂಧವುಡು, ಶುಭಸಂಕಲ್ಪಂ ಮುಂತಾದ ಅತ್ಯುತ್ತಮ ಚಿತ್ರಗಳನ್ನು ನಿರ್ಮಿಸಿ ಕಲಾತಪಸ್ವಿ ಎಂದೇ ಗುರುತಿಸಿಕೊಂಡರು.


ಇದನ್ನೂ ಓದಿ:  ಅದ್ಭುತವಾಗಿದೆ ʼಕಡಲತೀರದ ಭಾರ್ಗವʼ ಚಿತ್ರದ ʼಸಮಯವೇʼ ಸಾಂಗ್


ಸಿನಿಮಾ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ಕೆ ವಿಶ್ವನಾಥನ್ ಅವರಿಗೆ 2017 ರಲ್ಲಿ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿತು. ಈ ವರೆಗೆ ಒಟ್ಟು 5 ರಾಷ್ಟ್ರೀಯ ಫಿಲ್ಮ್‌ ಅವಾರ್ಡ್‌ಗಳನ್ನು ಪಡೆದುಕೊಂಡಿದ್ದರು. 7 ಬಾರಿ ನಂದಿ ಪ್ರಶಸ್ತಿ, 10 ಫಿಲಂ ಫೇರ್ ಅವಾರ್ಡ್‌ ಜೊತೆಗೆ ಹಿಂದಿ ಸಿನಿಮಾದಲ್ಲೂ ಒಂದು ಫಿಲ್ಮ್ ಫೇರ್ ಅವಾರ್ಡ್‌ ಪಡೆದಿದ್ದಾರೆ. ಕಲಾ ಕ್ಷೇತ್ರದಲ್ಲಿ ವಿಶ್ವನಾಥನ್ ಅವರ ಸಾಧನೆಯನ್ನು ಪರಿಗಣಿಸಿ ಭಾರತ ಸರ್ಕಾರ 1992ರಲ್ಲಿ ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.