ಬೆಂಗಳೂರು : ಕನ್ನಡಿಗರೆಲ್ಲಾ ಉಸಿರು ಬಿಗಿಹಿಡಿದು ಕಾಯುತ್ತಿರುವ ಜೇಮ್ಸ್‌ ಸಿನಿಮಾದ ರಿಲೀಸ್‌ಗೆ (James film release) ಕೌಂಟ್‌ಡೌನ್‌ ಶುರುವಾಗಿದೆ. ಈಗಾಗಲೇ ಫಸ್ಟ್‌ ಲುಕ್‌ ಮೂಲಕ ಧೂಳ್‌ ಎಬ್ಬಿಸಿರುವ ಅಪ್ಪು ಅಭಿನಯದ ಕೊನೇ ಚಿತ್ರ, ಇದೀಗ ಟೀಸರ್‌ (James teaser) ಮೂಲಕ ದೇಶಾದ್ಯಂತ ಸಂಚಲನ ಮೂಡಿಸಲು ಸಜ್ಜಾಗಿದೆ.


COMMERCIAL BREAK
SCROLL TO CONTINUE READING

'ಜೇಮ್ಸ್‌' (James kannada film) ಬರೀ ಸಿನಿಮಾ ಅಲ್ಲ, ಅದೊಂದು ಹಬ್ಬವೇ ಸರಿ. ಯಾಕಂದ್ರೆ ಅಪ್ಪು ಅಭಿನಯದ ಕೊನೇ ಚಿತ್ರವನ್ನು ಅ‌ದ್ಧೂರಿಯಾಗಿ ಬರಮಾಡಿಕೊಳ್ಳಲು ಇಡೀ ದೇಶವೇ ಕಾಯುತ್ತಿದೆ. ಜನವರಿ 26ರ ಗಣರಾಜ್ಯೋತ್ಸವದ ದಿನ ಜೇಮ್ಸ್‌ ಫಸ್ಟ್‌ ಲುಕ್‌ ರಿಲೀಸ್‌ ಆಗಿತ್ತು. ಇದೀಗ ನಾಳೆ ಚಿತ್ರದ ಟೀಸರ್‌ ರಿಲೀಸ್‌ (James teaser release) ಆಗಲಿದೆ.


ಇದನ್ನೂ ಓದಿ : Darshan : 'ಡಿ' ಬಾಸ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್!‌ ರೀ ರಿಲೀಸ್‌ ಆಗಲಿದೆ 'ಮೆಜೆಸ್ಟಿಕ್'


 ಕೌಂಟ್‌ಡೌನ್‌ ಶುರು :
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneetrh Rajkumar) ಅಭಿನಯದ ಕೊನೇ ಸಿನಿಮಾ 'ಜೇಮ್ಸ್' ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಮಾರ್ಚ್ 17ರಂದು ಅಂದರೆ  ಅಪ್ಪು ಹುಟ್ಟಹಬ್ಬದಂದು ಜೇಮ್ಸ್‌ ಜಗತ್ತಿನಾದ್ಯಂತ ರಿಲೀಸ್‌ ಆಗಲಿದೆ (James release date). ನಾಳೆ ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ ಪಿಆರ್‌ಕೆ ಆಡಿಯೋದಲ್ಲಿ ಜೇಮ್ಸ್ ಟೀಸರ್ ರಿಲೀಸ್‌ ಆಗಲಿದೆ.


 ಫ್ಯಾನ್ಸ್ ಸಂಭ್ರಮ :
ಜೇಮ್ಸ್‌ ಪೋಸ್ಟರ್‌ ರಿಲೀಸ್‌ ಆಗಿದ್ದೇ ತಡ ಇಡೀ ಭಾರತೀಯ ಚಿತ್ರರಂಗ ಅಪ್ಪು ಅವರ ಕೊನೆಯ ಸಿನಿಮಾವನ್ನ ಕಣ್ತುಂಬಿಕೊಳ್ಳಲು ಕಾದು ಕುಳಿತಿದೆ (Puneeth Rajkumar last film). ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಕೊನೆಯ ಚಿತ್ರಕ್ಕಾಗಿ ಅಪ್ಪು ಅಭಿಮಾನಿ ಬಳಗ ಕಾತರದಿಂದ ಕಾಯುತ್ತಿದೆ. ಈ ಮಧ್ಯೆ ಜೇಮ್ಸ್‌ ಟೀಸರ್‌ ಕೂಡ ರಿಲೀಸ್‌ ಆಗುತ್ತಿದ್ದು, ಫ್ಯಾನ್ಸ್‌ ಸಂಭ್ರಮ ಮುಗಿಲು ಮುಟ್ಟಿದೆ.‌


ಶಿವಣ್ಣ ವಾಯ್ಸ್ :
'ಜೇಮ್ಸ್' ಚಿತ್ರವನ್ನು ಕನ್ನಡ ಭಾಷೆಯ ಜೊತೆಗೆ ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲೂ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. 'ಜೇಮ್ಸ್‌'ಗೆ ಅಪ್ಪು ಡಬ್ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅಪ್ಪುಗೆ ಅವರ ಸಹೋದರ ಶಿವರಾಜ್‌ಕುಮಾರ್ (Shivraj Kumar) ಧ್ವನಿ ನೀಡಿದ್ದಾರೆ. ಇತ್ತೀಚೆಗೆ ಈ ಕುರಿತು ಮಾತನಾಡಿದ್ದ ನಟ ಶಿವಣ್ಣ, ಭಾವುಕರಾಗಿದ್ದರು.


ಇದನ್ನೂ ಓದಿ : Jogi Prem: ಮಲ್ಟಿಪ್ಲೆಕ್ಸ್‌ಗಳಿಂದ ಕನ್ನಡ ಚಿತ್ರಗಳಿಗೆ ಅನ್ಯಾಯ..? ಸಿಡಿದೆದ್ದ ಡೈರೆಕ್ಟರ್‌ ಜೋಗಿ ಪ್ರೇಮ್..!


ಒಟ್ಟಿನಲ್ಲಿ ಬೆಟ್ಟದಷ್ಟು ನಿರೀಕ್ಷೆ ಹೊತ್ತು ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಲು ಜೇಮ್ಸ್‌ ಸಜ್ಜಾಗಿದೆ. ಅಪ್ಪು ಮೇಲಿನ ಅಭಿಮಾನ ಸಾಗರದಂತೆ ಭೋರ್ಗರೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮೂವಿ ಕೂಡ ತೆರೆಗೆ ಬರಲಿದ್ದು, ಇದೀಗ ಟೀಸರ್‌ ಸಂಭ್ರಮ ಶುರುವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.