South Actors: ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಹತ್ತಿರವಾಗಲು ಹೀರೋಗಳು ಸಾಮಾಜಿಕ ಮಾಧ್ಯಮದಲ್ಲಿಯೂ ಸಕ್ರಿಯರಾಗಿದ್ದಾರೆ. ಕೆಲವು ನಾಯಕರು ತುಂಬಾ ಕ್ರಿಯಾಶೀಲರಾಗಿ.. ಕಾಲಕಾಲಕ್ಕೆ ಪೋಸ್ಟ್ ಮಾಡುತ್ತಾರೆ. ಮತ್ತು ಅಂತಹ ಪೋಸ್ಟ್‌ಗಳು ವೈರಲ್‌ ಆಗುತ್ತಲೇ ಇರುತ್ತವೆ.. ಸಾಮಾನ್ಯ ಸೆಲೆಬ್ರಿಟಿಗಳು ಲಕ್ಷಾಂತರ ಫಾಲೋವರ್ಸ್‌ ಹೊಂದಿರುವಾಗ, ಹೀರೋಗಳು ಅದಕ್ಕಿಂತ ಹೆಚ್ಚಿನದನ್ನು ಹೊಂದಿರುತ್ತಾರೆ. 


COMMERCIAL BREAK
SCROLL TO CONTINUE READING

ಮೊದಲನೆಯದಾಗಿ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಇನ್‌ಸ್ಟಾಗ್ರಾಮ್‌ನಲ್ಲಿ 25 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ.. ಅವರು ಇತ್ತೀಚೆಗಷ್ಟೇ ಅವರು ಈ ರೆಕಾರ್ಡ್‌ ಮಾಡಿದ್ದು, ದಕ್ಷಿಣದಲ್ಲಿ ಅತಿ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ನಾಯಕನಾಗಿ ಹೊಸ ದಾಖಲೆ ಬರೆದಿದ್ದಾರೆ. ಅಂದರೆ ಸುಮಾರು ಎರಡೂವರೆ ಕೋಟಿ ಮಂದಿ ಅಲ್ಲು ಅರ್ಜುನ್‌ನನ್ನು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್‌ಗೆ ನಮ್ಮ ತೆಲುಗು ಹಾಗೂ ಕೇರಳದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಅದಲ್ಲದೆ ಪುಷ್ಪ ಚಿತ್ರದ ಮೂಲಕ ಉತ್ತರದಲ್ಲಿಯೂ ಉತ್ತಮ ಫಾಲೋಯಿಂಗ್ ಪಡೆದಿದ್ದರು.


ಇದನ್ನೂ ಓದಿ-Varun-Kareena: ಡ್ಯಾನ್ಸ್‌ ಮಾಡುವಾಗ ವರುಣ್‌ ಧವನ್‌ ಕರೀನಾ ಕಪೂರ್‌ನ ಬೀಳಿಸಿದ ವಿಡಿಯೋ ವೈರಲ್!


ಮತ್ತು ನಂತರದ ಎರಡನೇ ಸ್ಥಾನದಲ್ಲಿ ನಮ್ಮ ರೌಡಿ ಹೀರೋ ವಿಜಯ್ ದೇವರಕೊಂಡ 21.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅಂದರೆ ಸುಮಾರು ಎರಡು ಕೋಟಿ 14 ಲಕ್ಷ ಹಿಂಬಾಲಕರು ವಿಜಯ್ ದೇವರಕೊಂಡ ಅವರನ್ನು Instagram ನಲ್ಲಿ ಫಾಲೋ ಮಾಡುತ್ತಿದ್ದಾರೆ.. 


ಟಾಲಿವುಡ್‌ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ನಲ್ಲಿ ರಾಮ್ ಚರಣ್ ಮೂರನೇ ಸ್ಥಾನದಲ್ಲಿದ್ದಾರೆ. ಇವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 21.1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅಂದರೆ ಸುಮಾರು ಎರಡು ಕೋಟಿ 11 ಲಕ್ಷ ಜನ ಫಾಲೋ ಮಾಡುತ್ತಿದ್ದಾರೆ. RRR ಮೂಲಕ ಚರಣ್ ರಾಷ್ಟ್ರೀಯ ಮನ್ನಣೆ ಪಡೆದರು. ಗೇಮ್ ಚೇಂಜರ್ ಚಿತ್ರದ ಮೂಲಕ ಅವರು ಮತ್ತೊಮ್ಮೆ ಪ್ಯಾನ್ ಇಂಡಿಯಾ ವೈಡ್ ಅಬ್ಬರಿಸಲು ರೆಡಿಯಾಗುತ್ತಿದ್ದಾರೆ..


ಮಹೇಶ್ ಬಾಬು 13.3 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದು.. ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಂದರೆ ಸುಮಾರು ಒಂದು ಕೋಟಿ 33 ಲಕ್ಷ ಮಂದಿ ಮಹೇಶ್ ಬಾಬುವನ್ನು ಇನ್ ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದಾರೆ. ಆದರೆ ಮಹೇಶ್ ಇದುವರೆಗೆ ಎಲ್ಲಾ ಪ್ರಾದೇಶಿಕ ಚಿತ್ರಗಳನ್ನು ಮಾಡಿ ಟಾಲಿವುಡ್ ಗೆ ಮಾತ್ರ ಸೀಮಿತವಾಗಿದ್ದಾರೆ.. 


ಇದನ್ನೂ ಓದಿ-The Great Indian Kapil Show ಟ್ರೇಲರ್ ಬಿಡುಗಡೆ, ಷೋಗೆ ಗುಥ್ಥಿ ಪಾತ್ರದ ಮರುಪ್ರವೇಶ!


ಈ ಪಟ್ಟಿಯಲ್ಲಿ ಪ್ರಭಾಸ್ ಐದನೇ ಸ್ಥಾನದಲ್ಲಿದ್ದಾರೆ. ಪ್ರಭಾಸ್ ಇನ್‌ಸ್ಟಾಗ್ರಾಮ್‌ನಲ್ಲಿ 11.7 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅಂದರೆ ಸುಮಾರು ಒಂದು ಕೋಟಿ 17 ಲಕ್ಷ ಜನ. ಆದರೆ ಪ್ರಭಾಸ್ ಬಹಳ ತಡವಾಗಿ ಮತ್ತು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಿಗೆ ಎಂಟ್ರಕೊಟ್ಟಿದ್ದಾರೆ.. ಅಲ್ಲದೆ, ನಟ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿಲ್ಲ. ಹಾಗಾಗಿಯೇ ಪ್ರಭಾಸ್ ಗೆ ಪ್ಯಾನ್ ಇಂಡಿಯಾ ಕ್ರೇಜ್ ಇದೆ ಆದರೆ ಫಾಲೋವರ್ಸ್ ಕಡಿಮೆ, ಮುಂದಿನ ಸಿನಿಮಾ ಕಲ್ಕಿಯಿಂದ ಪಾನ್ ವರ್ಲ್ಡ್ ಪಾಪ್ಯುಲರ್ ಆಗ್ತಾರೆ, ಪ್ರಭಾಸ್ ಸೋಷಿಯಲ್ ಮೀಡಿಯಾದಲ್ಲಿ ಸ್ವಲ್ಪ ಆ್ಯಕ್ಟಿವ್ ಆಗಿದ್ದರೆ ಫಾಲೋವರ್ಸ್ ಹೆಚ್ಚಾಗ್ತಾರೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ.


ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ರಾಮ್ ಚರಣ್, ಮಹೇಶ್ ಬಾಬು ಮತ್ತು ಪ್ರಭಾಸ್ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಲಿವುಡ್‌ನ ಟಾಪ್ 5 ಹೀರೋಗಳು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ