Yash Toxic Updates: ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷೆಯ ʼಟಾಕ್ಸಿಕ್‌ʼ ಟೈಟಲ್‌ನಿಂದಲೇ ಭರ್ಜರಿ Thrill ಹುಟ್ಟುಹಾಕಿದೆ. ಆದರೆ ಬಹುನಿರೀಕ್ಷೆಯ ಈ ಸಿನಿಮಾಕ್ಕೆ ಕೊರತೆಯೊಂದು ಕಾಡಿದೆ. ಅರೇ ಇದೇನಪ್ಪ ಯಶ್‌ ನಟಿಸ್ತಿರೋ ಸಿನಿಮಾದಲ್ಲಿ ಏನದು ಕೊರತೆ ಅಂತ ಕೇಳ್ತೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.


COMMERCIAL BREAK
SCROLL TO CONTINUE READING

ಗೀತು ಮೋಹನ್‌ ದಾಸ್ ನಿರ್ದೇಶನದ ʼಟಾಕ್ಸಿಕ್' ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿಬರ್ತಿದೆ. ಅದರಲ್ಲೂ ಸ್ಟಾರ್‌ಕಾಸ್ಟ್ ಬಗ್ಗೆ ಬಹುದೊಡ್ಡ ಗೊಂದಲವಿದೆ. ಈ ಸಿನಿಮಾದ ಬಗ್ಗೆ ಬರೀ ಅಂತೆಕಂತೆ, ಊಹಾಪೋಹ ಸುದ್ದಿಗಳದ್ದೇ ಕಾರುಬಾರು. ಚಿತ್ರಕ್ಕೆ ಬಾಲಿವುಡ್‌ ನಟಿ ಕರೀನಾ ಕಪೂರ್ ಆಯ್ಕೆಯಾಗಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಬಳಿಕ ಅವರು ಹೊರ ಬಂದಿದ್ದಾರೆ ಎನ್ನಲಾಗ್ತಿದೆ. ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ನಾಯಕನ ಸಹೋದರಿ ಪಾತ್ರಕ್ಕೆ ಬಹಳ ಮಹತ್ವ ಇದೆ ಎನ್ನಲಾಗುತ್ತಿದೆ. ಹೀಗಾಗಿ ಆ ಪಾತ್ರ ಯಾರು ಮಾಡ್ತಾರೆ ಅನ್ನೋ ಕುತೂಹಲವಿದೆ. ಕರೀನಾ ಕಪೂರ್ ನಟಿಸೋಕೆ ಆಸಕ್ತಿ ತೋರಿದ್ದರಂತೆ, ಆದರೆ ಡೇಟ್ಸ್‌ ಸಮಸ್ಯೆಯಿಂದ ನೋ ಎಂದಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಸಂಭಾವನೆ ವಿಚಾರಕ್ಕೆ ಅವರು ಹಿಂದಡಿ ಇಟ್ಟಿದ್ದಾರೆ ಎನ್ನುವ ವಾದವೂ ಇದೆ.  


ಇದನ್ನೂ ಓದಿ: ಸಾವಿರ ಗುಂಗಲಿ ಒಲವಿನ ಸವಾರಿ ಹೊರಟ ನಟಿ ಬೃಂದಾ ಆಚಾರ್ಯ!


ಅಂದಹಾಗೆ ಈ ಪಾತ್ರಕ್ಕೆ ಮೊದಲು ಚಿತ್ರತಂಡ ಐಶ್ವರ್ಯ ರೈ ನಟಿಸಿದರೆ ಚೆನ್ನಾಗಿರುತ್ತದೆ ಎಂದುಕೊಂಡಿತ್ತಂತೆ. ಅದರಂತೆ ಅವರನ್ನು ಸಂಪರ್ಕಿಸಿದ್ದರಂತೆ. ಆದರೆ ಐಶ್ವರ್ಯಾ ರೈ ಸರಿಯಾಗಿ ಪ್ರತಿಕ್ರಿಯಿಸದ ಹಿನ್ನೆಲೆ ತಂಡವು ಕರೀನಾ ಕಪೂರ್ ಕಡೆ ಮುಖ ಮಾಡಿತ್ತು. ಕರೀನಾ ಕೂಡ ಸಾಧ್ಯವಿಲ್ಲವೆಂದ ಮೇಲೆ ತಮಿಳು ನಟಿ ನಯನತಾರಾ ಹೆಸರು ಚಾಲ್ತಿಗೆ ಬಂದಿತ್ತು. ಈಗಾಗಲೇ ಕನ್ನಡದ 'ಸೂಪರ್' ಚಿತ್ರದಲ್ಲಿ ನಟಿಸುವ ನಯನತಾರಾ ಮತ್ತೆ ಸ್ಯಾಂಡಲ್‌ವುಡ್‌ಗೆ ಬರ್ತಾರೆ ಎಂದು ಕೆಲವರು ಊಹಿಸಿದ್ದರು. ಇದೀಗ ಕರೀನಾ ಕಪೂರ್ ಮಾಡಬೇಕಿದ್ದ ಪಾತ್ರವನ್ನು ಮತ್ತೊಬ್ಬ ನಟಿ ಹುಮಾ ಖುರೇಷಿ ಮಾಡುವುದು ಖಚಿತ ಎನ್ನಲಾಗ್ತಿದೆ. ಬಾಲಿವುಡ್ ಮಾಧ್ಯಮಗಳಲ್ಲಿ ಈ ರೀತಿ ವರದಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಹುಟ್ಟುಹಾಕಿದೆ. 'Gangs of Wasseypur', 'D-DAY', 'Badhlapur', 'Highway', 'Kaala' ರೀತಿಯ ಹಿಟ್ ಸಿನಿಮಾಗಳಲ್ಲಿ ಹುಮಾ ನಟಿಸಿದ್ದಾರೆ. ಈಕೆ 'ಟಾಕ್ಸಿಕ್' ಚಿತ್ರದಲ್ಲಿ ನಟಿಸೋದು ಪಕ್ಕಾ ಎಂದು ಹೇಳಲಾಗುತ್ತಿದೆ.


ಹುಮಾ ಖುರೇಶಿ ಇನ್‌ಸ್ಟಾಗ್ರಾಮ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. ಇದೇ ಕಾರಣದಿಂದ ಇದೀಗ ಆಕೆ 'ಟಾಕ್ಸಿಕ್' ಚಿತ್ರದಲ್ಲಿ ನಟಿಸೋದು ಖಚಿತವೆಂದು ಅಭಿಮಾನಿಗಳು ವಾದಿಸುತ್ತಿದ್ದಾರೆ. ಇನ್ನು 'ಟಾಕ್ಸಿಕ್' ಚಿತ್ರದ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ನ್ಯೂಸ್ ಕೇಳಿಬರ್ತಿದೆ. ಸಾಮಾನ್ಯವಾಗಿ ಒಂದೇ ಕಥೆಯನ್ನು 2 ಭಾಗಗಳಾಗಿ ತೆರೆಗೆ ತರುವುದು ನೋಡಿದ್ದೇವೆ. ಆದರೆ ಒಂದೇ ಚಿತ್ರವನ್ನು ಬೇರೆ ಬೇರೆ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲು ಚಿತ್ರತಂಡ ಮುಂದಾಗಿದೆಯಂತೆ.


ಇದನ್ನೂ ಓದಿ: ‘ಇದು ನಮ್ ಶಾಲೆ’ ಸಿನಿಮಾ ಹಾಡು ಬಿಡುಗಡೆಗೊಳಿಸಿದ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್


'ಟಾಕ್ಸಿಕ್' ಬರೀ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ ಎಂದು ಹೇಳಲಾಗುತ್ತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಸಹ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಹೀಗಾಗಿ ಗ್ಲೋಬರ್ ಆಡಿಯನ್ಸ್‌ ಮನದಲ್ಲಿಟ್ಟುಕೊಂಡು 2 ಬೇರೆ ಬೇರೆ ವರ್ಷನ್‌ಗಳಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಭಾರತದ ಭಾಷೆಗಳಿಗೆ ಹಾಡುಗಳ ಜೊತೆಗೆ ಒಂದು ವರ್ಷನ್, ಅದೇ ರೀತಿ ವಿದೇಶದ ಭಾಷೆಗಳಿಗೆ ಮತ್ತೊಂದು ವರ್ಷನ್ ಸಿನಿಮಾ ಕಟ್ಟಿಕೊಡುತ್ತಾರೆ ಎನ್ನಲಾಗ್ತಿದೆ. 


ದಕ್ಷಿಣದ ಸಿನಿಮಾಗಳು ಈಗ ಬೇರೆ ದೇಶಗಳಲ್ಲಿ ಹೆಚ್ಚು ಹೆಚ್ಚು ಬಿಡುಗಡೆ ಆಗುತ್ತಿವೆ. ಜಪಾನ್, ಚೀನಾ ದೇಶಗಳಲ್ಲಿ ಕೂಡ ಕನ್ನಡ ಸಿನಿಮಾಗಳು ಸದ್ದು ಮಾಡ್ತಿವೆ. ಜಪಾನ್‌ನಲ್ಲಿ ಇತ್ತೀಚೆಗೆ 'KGF' ಸರಣಿ ಸಿನಿಮಾಗಳು ಬಿಡುಗಡೆ ಆಗಿದ್ದವು. ರಾಕಿಭಾಯ್ ಅಬ್ಬರಕ್ಕೆ ಜಪಾನೀಸ್ ಪ್ರೇಕ್ಷಕರು ಥ್ರಿಲ್ಲಾಗಿದ್ದರು. ಇದನ್ನೆಲ್ಲಾ ಮನದಲ್ಲಿಟ್ಟುಕೊಂಡು ಚಿತ್ರತಂಡ ಈ ಪ್ಲ್ಯಾನ್ ಮಾಡ್ತಿದೆ ಎನ್ನುವ ವಾದ ಕೆಲವರದ್ದು. ಹೀಗಾಗಿ ಒಂದು ಪ್ಯಾನ್ ಇಂಡಿಯಾ ಮತ್ತೊಂದು ಇಂಟರ್‌ನ್ಯಾಷನಲ್‌ ವರ್ಷನ್ ಸಿನಿಮಾ ಮಾಡುತ್ತಾರೆ ಎನ್ನಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.