ನವದೆಹಲಿ: ಬಾಲಿವುಡ್ ನಲ್ಲಿ ಸ್ಟೈಲ್ ಐಕಾನ್ ಎಂದೇ ಖ್ಯಾತ ನಟಿ, ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಎಂದಿಗೂ ಕೂಡ ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸುವುದಿಲ್ಲ. ಅವರ ಅಭಿನಯಿಸುತ್ತಿರುವ ಚಿತ್ರವಾಗಲಿ ಅಥವಾ ತಮ್ಮ ಜೊತೆಗೆ ಫೋಟೋ ಕ್ಲಿಕ್ಕಿಸಲು ಮುಂದಾಗುವ ಅಭಿಮಾನಿಗಳೇ ಆಗಲಿ, ದೀಪಿಕಾ ಅವರ ಯತ್ನಗಳನ್ನು ಸಫಲಗೊಳಿಸುವಲ್ಲಿ ಸಹಕರಿಸುತ್ತಾರೆ. ಕೆಲ ದಿನಗಳ ಹಿಂದೆ ಇಂತಹುದೆ ಒಂದು ಘಟನೆ ಸಂಭವಿಸಿದ್ದು, ದೀಪಿಕಾ ಓರ್ವ ಮಾಧ್ಯಮ ಛಾಯಾಗ್ರಾಹಕನಿಗೆ ಆತ ತನ್ನ ಫೋನ್ ಗೆ ಬಳಸಿದ ಬ್ಯಾಕ್ ಕವರ್ ಕೇಳಿದ್ದಾರೆ. ಹೌದು, ತಮ್ಮ ಮುಂಬರುವ ಚಿತ್ರ 'ಛಪಾಕ್' ನ ಪ್ರಮೋಶನ್ ಇವೆಂಟ್ ವೇಳೆ ದೀಪಿಕಾ ತುಂಬಾ ಮುಗ್ಧವಾಗಿ ಹಾಗೂ ವಿನಯದಿಂದ ಛಾಯಾಗ್ರಾಹಕನಿಗೆ ಆತನ ಫೋನ್ ಗೆ ಹಾಕಿದ್ದ ಬ್ಯಾಕ್ ಕವರ್ ನೋಡಲು ಕೇಳಿದ್ದಾರೆ. ಅಷ್ಟೇ ಅಲ್ಲ ನಂತರ ತಾವು ಇದನ್ನು ಬಳಸಬಹುದಾ ಎಂದು ಪ್ರಶ್ನಿಸಿದ್ದಾರೆ. ಇದನ್ನು ಗಮನಿಸಿದ ಅಲ್ಲಿ ನೆರೆದ ಜನರು ನಕ್ಕು ನಲಿದಿದ್ದಾರೆ.



COMMERCIAL BREAK
SCROLL TO CONTINUE READING

ಪ್ರೀತಿಯಿಂದ ತುಂಬಿದ ಈ ಅದ್ಭುತ ಕ್ಷಣವನ್ನು ದೀಪಿಕಾ ಅವರ ಹಲವಾರು ಅಭಿಮಾನಿಗಳು ಶೇರ್ ಮಾಡಿದ್ದು, ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದೆ. ದೀಪಿಕಾ ಅವರ ಇಂತಹ ವಿಡಿಯೋ ಮುಂದೆ ಬಂದಿರುವುದು ಇದು ಮೊದಲನೇ ಬಾರಿ ಅಲ್ಲ. ಇತ್ತೀಚೆಗಷ್ಟೇ ಏರ್ ಪೋರ್ಟ್ ನಿಂದ ಹೊರಬಂದ ದೀಪಿಕಾ ತಮ್ಮ ವಾಹನದತ್ತ ತೆರಳುತ್ತಿದ್ದ ವೇಳೆ ಛಾಯಾಗ್ರಾಹಕರೊಬ್ಬರು ಅವರನ್ನು 'ದೀಪುಜೀ' ಎಂದು ಸಂಬೋಧಿಸಿದ್ದಾರೆ. ಇದನ್ನು ಕೇಳಿದ ದೀಪಿಕಾ ಮುಗುಳ್ನಕ್ಕು ಛಾಯಾಗ್ರಾಹಕನ  ಹೆಸರು ಕೇಳಿದ್ದಾರೆ. ಈ ವೇಳೆ ಛಾಯಾಗ್ರಾಹಕ ತನ್ನ ಹೆಸರು ಪಾಂಡೆ ಎಂದು ಹೇಳಿದ್ದಾರೆ. ಮತ್ತೆ ಮುಗುಳ್ನಕ್ಕ ದೀಪಿಕಾ ತಮ್ಮ ವಾಹನ ಏರಿದ್ದಾರೆ. ದೀಪಿಕಾ ಅವರ ಈ ಸ್ಟೈಲ್ ಗೂ ಕೂಡ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು.


ಸದ್ಯ ದೀಪಿಕಾ ತಮ್ಮ ಮುಂಬರುವ 'ಛಪಾಕ್' ಚಿತ್ರದ ಪ್ರಮೋಶನ್ ನಲ್ಲಿ ವ್ಯಸ್ತರಾಗಿದ್ದಾರೆ. ದೀಪಿಕಾ ಅವರ ಈ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಟ್ರೈಲರ್ ಮೆಚ್ಚಿಕೊಂಡ ಅವರ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಓರ್ವ ಆಸಿಡ್ ಅಟ್ಯಾಕ್ ಗೆ ಒಳಗಾದ ಸಂತ್ರಸ್ತೆಯ ಭೂಮಿಕೆಯಲ್ಲಿ ಕಂಡುಬರುತ್ತಿದ್ದಾರೆ.