ಮುಂಬೈ: ಸೆನ್ಸಾರ್ ಮಂಡಳಿ ವಯಸ್ಕ ಪ್ರಮಾಣಪತ್ರವನ್ನು ನೀಡಿದೆ ಎಂದು ಅನಿಮಲ್ ಬಗ್ಗೆ ಈಗಾಗಲೇ ಸ್ಪಷ್ಟವಾಗಿದೆ. ಟ್ರೇಲರ್ ನಂತರ ಚಿತ್ರದಲ್ಲಿ ಸಾಕಷ್ಟು ಹಿಂಸೆಯ ಬಗ್ಗೆ ಚರ್ಚೆಗಳು ನೆಡೆದಿದ್ದವು, ಆದರೆ ಚಿತ್ರಪ್ರೇಮಿಗಳನ್ನು ನಿಬ್ಬೆರಗಾಗಿಸಿದ್ದು ಅನಿಮಲ್ ನಟಿ ತೃಪ್ತಿ ದಿಮ್ರಿ ಪಾತ್ರ. ಚಿತ್ರದಲ್ಲಿ, ಅವಳು ದ್ವಿತೀಯಾರ್ಧದಲ್ಲಿ ಸ್ವಲ್ಪ ಸಮಯದವರೆಗೆ ಬಂದು ಕಥೆಯಲ್ಲಿ ದೊಡ್ಡ ಟ್ವಿಸ್ಟ್ ನೀಡುತ್ತಾಳೆ. ಆದರೆ ಈ ಟ್ವಿಸ್ಟ್ ಸಮಯದಲ್ಲಿ, ಆಕೆ  ರಣಬೀರ್ ಕಪೂರ್ ಅವರೊಂದಿಗೆ ಲವ್ ಮೇಕಿಂಗ್ ದೃಶ್ಯವನ್ನು ಮಾಡಿದ್ದಾರೆ, ಇದರಲ್ಲಿ ತೃಪ್ತಿ ಮತ್ತು ನಾಯಕ ಇಬ್ಬರೂ ಬೆಡ್‌ನಲ್ಲಿ ನಗ್ನರಾಗಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಚಿತ್ರದ ಈ ದೃಶ್ಯದ ಕ್ಲಿಪ್ಪಿಂಗ್ ವೈರಲ್ ಆಗಿದ್ದು, ಇದೀಗ ತೃಪ್ತಿ ದಿಮ್ರಿ ಯಾರು ಎಂದು ನೆಟಿಜನ್ ಗಳು ಹುಡುಕಾಡುತ್ತಿದ್ದಾರೆ. (Viral News In Kannada)


COMMERCIAL BREAK
SCROLL TO CONTINUE READING

ಇದನ್ನೂ ಓದಿ-ವಿಮಾನದಲ್ಲಿ ಸುಂದರ ಗಗನಸಖಿಯ ಡಾನ್ಸ್ ವೈರಲ್... ವಿಮಾನ ಹೊತ್ತಿ ಉರಿಯುತ್ತೇ ಬೇಡ ಎಂದ ನೆಟ್ಟಿಗರು!


ಹೇಗೆ ಶುರುವಾಯ್ತು ಜರ್ನಿ
ರಣಬೀರ್ ಜೊತೆಗಿನ ಈ ಇಂಟಿಮೇಟ್ ದೃಶ್ಯವು ತೃಪ್ತಿಯನ್ನು ರಾತ್ರೋರಾತ್ರಿ ಎಷ್ಟು ಫೇಮಸ್ ಮಾಡಿದೆ ಎಂದರೆ ಜನರು ಆಕೆಯ ಹಿಂದಿನ ಚಿತ್ರಗಳ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಬರೀ ಮಸಾಲಾ ಚಿತ್ರಗಳನ್ನೇ ಫಾಲೋ ಮಾಡುತ್ತಿದ್ದರೆ ಅನಿಮಲ್ ಚಿತ್ರದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಸಣ್ಣ ಪಾತ್ರ ಮಾಡಿದ್ದ ತೃಪ್ತಿ ಈ ಹಿಂದೆ ನಾಲ್ಕು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು ಗೊತ್ತಾದ್ರೆ ಅಚ್ಚರಿಯಾಗುತ್ತೆ. ಆಕೆಯ ವೃತ್ತಿಜೀವನವು ಆರು-ಏಳು ವರ್ಷ ಹಳೆಯದಾಗಿದೆ. ಆಕೆ ಮೊದಲು ಶ್ರೀದೇವಿಯವರ ಕೊನೆಯ ಚಿತ್ರ ಮಾಮ್‌ನಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು. ನಂತರ ಆಕೆ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಮತ್ತು ಶ್ರೇಯಸ್ ತಲ್ಪಡೆ ಅವರ ಪೋಸ್ಟರ್ ಬಾಯ್ಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಆದರೆ ನಿರ್ದೇಶಕ ಇಮ್ತಿಯಾಜ್ ಅಲಿ ಅವರು ತಮ್ಮ ಲೈಲಾ-ಮಜ್ನೂನ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನೀಡಿದಾಗ ಆಕೆಯ ವೃತ್ತಿಜೀವನಕ್ಕೆ ಬಿಗ್ ಬ್ರೇಕ್ ಸಿಕ್ಕಿತು. ಆದರೆ, ಆಕೆಯ ಈ ಎಲ್ಲಾ ಚಿತ್ರಗಳು ಫ್ಲಾಪ್ ಪಟ್ಟಿಗೆ ಸೇರುತ್ತವೆ. 


ಇದನ್ನೂ ಓದಿ-ವಿವಾಹದ ವೇಳೆ ವಧುವಿಗೆ ಸಿಹಿ ತಿನ್ನಿಸಲು ಮುಂದಾದ ವರ, ನಿರಾಕರಿಸಿದ ವಧು, ನಂತರ ನಡೆದಿದ್ದು ಮಹಾಭಾರತ!


ಕ್ಲಿಪ್ ವೈರಲ್
ಇದರ ನಂತರ, ಒಟಿಟಿಯಲ್ಲಿ ಬಿಡುಗಡೆಯಾದ ಎರಡು ಚಿತ್ರಗಳಾದ ಬುಲ್ಬುಲ್ (2020) ಮತ್ತು ಕಾಲಾ (2022) ನಲ್ಲಿ ತೃಪ್ತಿ ಪ್ರಧಾನ  ಪಾತ್ರವನ್ನು ನಿರ್ವಹಿಸಿದ್ದಾರೆ. ಎರಡೂ ಕಥೆಗಳು ಅವರ ಸುತ್ತ ಸುತ್ತುತ್ತವೆ. ಎರಡೂ ಚಿತ್ರಗಳಲ್ಲಿನ ಅವರ ಕೆಲಸವು ಹೆಚ್ಚು ಮೆಚ್ಚುಗೆ ಪಾತ್ರವಾಗಿದೆ, ಆದರೆ ಮುಖ್ಯವಾಹಿನಿಯ ಬಾಲಿವುಡ್ ಚಲನಚಿತ್ರಗಳ ಪ್ರೇಕ್ಷಕರಲ್ಲಿ ಅವರನ್ನು ಗುರುತಿಸಲಾಗಲಿಲ್ಲ. ಆದರೆ ಅನಿಮಲ್ ಒಂದೇ ಏಟಿನಲ್ಲಿ ಎಲ್ಲವನ್ನೂ ಬದಲಾಯಿಸಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆಗಿನ ಲವ್ ಮೇಕಿಂಗ್ ದೃಶ್ಯದಲ್ಲಿ ಆಕೆ ನಗ್ನವಾಗಿ ಕಾಣಿಸಿಕೊಂಡಿದ್ದು ಸುದ್ದಿಯಾಗಿದೆ. ತೃಪ್ತಿ ಅವರ ದೃಶ್ಯದ ಕ್ಲಿಪ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಜನರು ಸರ್ಚ್ ಇಂಜಿನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತೃಪ್ತಿ ದಿಮ್ರಿಗಾಗಿ ಹುಡುಕುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ