Triptii Dimri: ಇತ್ತೀಚಿಗೆ ಬಿಡುಗಡೆಯಾಗಿದ್ದ ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ ಸಿನಿಮಾದಲ್ಲಿ ತಮ್ಮ ಲಿಫ್ಟ್ ಟು ಲಿಪ್ ಕಿಸ್ಸಿಂಗ್ ಸಿನ್ ಗಳ ಮೂಲಕ ಕಮಾಲ್ ಮಾಡಿದ್ದ ತ್ರಿಪ್ತಿ ಡಿಮ್ರಿ ಜನಪ್ರಿಯತೆಯಲ್ಲಿ ಈಗ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರಿಂದ ಹಿಡಿದು ಹಲವಾರು ಸೂಪರ್ ಸ್ಟಾರ್, ಸೆಕ್ಸಿಯೆಸ್ಟ್ ಸ್ಟಾರ್ ಗಳೆನ್ನೆಲ್ಲಾ ಹಿಂದಿಕ್ಕಿದ್ದಾರೆ. 


COMMERCIAL BREAK
SCROLL TO CONTINUE READING

ಜನ ಯಾವಾಗಾ ಯಾರನ್ನು ಯಾವ ಕಾರಣಕ್ಕೆ ಇಷ್ಟ ಪಡುತ್ತಾರೆ ಎನ್ನುವುದನ್ನು ಅಂದಾಜು ಮಾಡೋಕೆ ಸಾಧ್ಯ ಇಲ್ಲ. ಅದರಲ್ಲೂ ಚಿತ್ರರಂಗದಂತಹ ಬಣ್ಣದ ಲೋಕದಲ್ಲಿ ಯಾರು, ಯಾವಾಗ ಮಿರಿ ಮಿರಿ ಮಿಂಚುತ್ತಾರೆ, ಯಾರು ಯಾವಾಗ ಕಮರಿ ಹೋಗುತ್ತಾರೆ ಅಂತಾನೂ ಗೆಸ್ ಮಾಡೋಕೆ ಆಗಲ್ಲ. ಏಳೆಂಟು ವರ್ಷಗಳಿಂದ ಎಂಟೊಬ್ಬತ್ತು ಸಿನಿಮಾ ಮಾಡಿದ್ರು ತ್ರಿಪ್ತಿ ಡಿಮ್ರಿಯ ಇಮೇಜು-ರೇಂಜುಗಳು ಆರಕ್ಕೇರಿರಲಿಲ್ಲ, ಮೂರಕ್ಕೆ ಇಳಿದಿರಲಿಲ್ಲ. ಆದರೆ ‘ಅನಿಮಲ್’ ಸಿನಿಮಾ ಬಂದಿದ್ದೆ ಬಂದಿದ್ದು, ತ್ರಿಪ್ತಿ ಡಿಮ್ರಿ ಗ್ರಾಫು ಸರ್ರನೆ ಏರಿಬಿಟ್ಟಿದೆ. ಈಗ ಆಕೆ ಜನಪ್ರಿಯತೆಯಲ್ಲಿ ನಂಬರ್ 1 ಅಂತೆ. 


ಇದನ್ನೂ ಓದಿ- Pushpa 2 Box Office Collection: ಮೊದಲ ದಿನವೇ ಭರ್ಜರಿ ಕಮಾಯಿ..! ಎಲ್ಲಾ ದಾಖಲೆಗಳನ್ನು ಪುಡಿ-ಪುಡಿ ಮಾಡಿದ ಪುಷ್ಪ-2


ಬಾಲಿವುಡ್ ಎನ್ನುವ ಬೃಹತ್ ಪರದೆಯ ಮೇಲೆ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ, ಟಾಪ್ ಹೀರೋಯಿನ್ ದೀಪಿಕಾ ಪಡುಕೋಣೆ, ಬಾದಷಾ ಶಾರುಖ್ ಖಾನ್, ಸಮಂತಾ ರುತ್ ಪ್ರಭು, ಆಲಿಯಾ ಭಟ್, ‘ಬಾಹುಬಲಿ’ ಹೀರೋ ಪ್ರಭಾಸ್ ಅವರಂಥ ಘಟಾನುಘಟಿಗಳು ಇದ್ದರೂ ಜನಪ್ರಿಯತೆಯಲ್ಲಿ ಅವರೆಲ್ಲರನ್ನು ಮೀರಿಸಿ ತ್ರಿಪ್ತಿ ಡಿಮ್ರಿ ಟಾಪಲ್ಲಿದ್ದಾರಂತೆ. ಅಂದಹಾಗೆ ಇದು ಇಂಟರ್ನೆಟ್ ಮೂವಿ ಡೇಟಾಬೇಸ್- IMDb (Internet Movie Database) ಮಾಡಿರುವ ಸಮೀಕ್ಷೆ.


ಇಂಟರ್ನೆಟ್ ಮೂವಿ ಡೇಟಾಬೇಸ್- IMDb ಸಿನಿಮಾ, ಟಿವಿ ಮತ್ತು ಮನೋರಂಜನಾ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಜನಪ್ರಿಯತೆ ಬಗ್ಗೆ ಅಧ್ಯಯನ ನಡೆಸುವ ಮತ್ತು ರೇಟಿಂಗ್ ಕೊಡುವ ಸಂಸ್ಥೆಯಾಗಿದೆ. 2024ರಲ್ಲಿ IMDb ಬಾಲಿವುಡ್ ನ ಟಾಪ್ 10 ಜನಪ್ರಿಯ ತಾರೆಗಳ  ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ  ತ್ರಿಪ್ತಿ ಡಿಮ್ರಿ ಮೊದಲ ಸ್ಥಾನದಲ್ಲಿದ್ದಾರೆ. IMDb ಜಗತ್ತಿನಾದ್ಯಂತ ಸುಮಾರು 250 ಮಿಲಿಯನ್ ಗಿಂತಲೂ ಹೆಚ್ಚು ಜನ ಮಾಸಿಕ ಸಂದರ್ಶಕರನ್ನು ಹೊಂದಿರುವ ಸೈಟ್ ಆಗಿದೆ. 


2024ರ ಇಂಟರ್ನೆಟ್ ಮೂವಿ ಡೇಟಾಬೇಸ್- IMDb ಶ್ರೇಯಾಂಕದಲ್ಲಿ ಮೊದಲ ಸ್ಥಾನ ಗಿಟ್ಟಿಸಿರುವ ಬಗ್ಗೆ ತ್ರಿಪ್ತಿ ಡಿಮ್ರಿ ಪ್ರತಿಕ್ರಿಯಿಸಿದ್ದು, ‘ಅತ್ಯಂತ ಜನಪ್ರಿಯ ಭಾರತೀಯ ತಾರೆಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಪಡೆದಿರುವುದು ನಿಜಕ್ಕೂ ನನ್ನ ಪಾಲಿಗೆ ದೊಡ್ಡ ಗೌರವ. ಇದು ನನಗೆ ಅತ್ಯಂತ ಸ್ಮರಣೀಯ ವರ್ಷವಾಗಿದೆ. ನಾನು ಇನ್ನಷ್ಟು ಸ್ಫೂರ್ತಿದಾಯಿಯಾಗಿ ಮುಂದುವರೆಯಲು ನನಗೆ ಇದು ಸಹಕಾರ ನೀಡಿದೆ’ ಎಂದು ಹೇಳಿದ್ದಾರೆ. 


ಇದನ್ನೂ ಓದಿ- 50 ವರ್ಷದ ನಟನೊಂದಿಗೆ ಮದುವೆ.. ಸದ್ಯ ಬೆಡ್‌ರೂಮ್‌ ರೊಮ್ಯಾನ್ಸ್‌ ವಿಡಿಯೋ ಹಂಚಿಕೊಂಡ ಖ್ಯಾತ ಸಿರೀಯಲ್‌ ನಟಿ!!


2024ರ ಇಂಟರ್ನೆಟ್ ಮೂವಿ ಡೇಟಾಬೇಸ್- IMDb ಶ್ರೇಯಾಂಕದ ಪ್ರಕಾರ ಅತ್ಯಂತ ಜನಪ್ರಿಯ ಇರುವ ಭಾರತೀಯ ತಾರೆಗಳ ಪಟ್ಟಿ ಈ ಕೆಳಕಂಡಂತಿದೆ. ಈ ಪಟ್ಟಿಯ ಇನ್ನೊಂದು ವಿಶೇಷ ಏನೆಂದರೆ ತೆಲುಗು ನಟ ನಾಗಚೈತನ್ಯ ಅವರ ಮಾಜಿ ಮಡದಿ ಸಮಂತಾ ರುತು ಪ್ರಭು ಮತ್ತು ಹಾಲಿ ಹೆಂಡತಿ ಸೋಭಿತಾ ಧೂಳಿಪಾಲ ಇಬ್ಬರೂ ಇದ್ದಾರೆ.


1. ತ್ರಿಪ್ತಿ ಡಿಮ್ರಿ 
2. ದೀಪಿಕಾ ಪಡುಕೋಣೆ
3. ಇಶಾನ್ ಕಟ್ಟರ್
4. ಶಾರುಖ್ ಖಾನ್
5. ಸೋಭಿತಾ ಧುಳಿಪಾಲಾ
6. ಶಾರ್ವರಿ
7. ಐಶ್ವರ್ಯ ರೈ ಬಚ್ಚನ್
8. ಸಮಂತಾ ರುತು ಪ್ರಭು
9. ಅಲಿಯಾ ಭಟ್
10. ಪ್ರಭಾಸ್


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.