Trisha Sent Legal Notice To AV Raju: ಇತ್ತೀಚೆಗೆ ಸೌತ್‌ ಇಂಡಿಯನ್‌ ಸ್ಟಾರ್ ನಟಿ ತ್ರಿಷಾ ಕೃಷ್ಣನ್‌ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಈಕೆಯ ಬಗ್ಗೆ ಈ ಹಿಂದೆ ಖಳನಟ ಮನ್ಸೂರ್‌ ಅಲಿ ಅಸಭ್ಯವಾಗಿ ಮಾತನಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರುಯಾಗಿದ್ದರು. ಇದೀಗ ನಟಿ ತ್ರಿಷಾರನ್ನು ತಮಿಳುನಾಡಿನ ಮಾಜಿ ಎಐಎಡಿಎಂಕೆ ಪಕ್ಷದ ನಾಯಕ ಎ ವಿ ರಾಜು  ಕೆಣಕಿ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ಎವಿ ರಾಜು ಸೇಲಂ ಪಶ್ಚಿಮ ಕ್ಷೇತ್ರದ ಶಾಸಕ ವೆಂಕಟಾಚಲಂ ಟೀಕಿಸುವಾಗ ನಟಿ ತ್ರಿಷಾ ಹೆಸರು ಎಳೆದಿದ್ದರು.


COMMERCIAL BREAK
SCROLL TO CONTINUE READING

ಮಾಜಿ ಎಐಎಡಿಎಂಕೆ ನಾಯಕ ಎವಿ ರಾಜು  "ಶಾಸಕರೊಬ್ಬರು ನಟಿ ತ್ರಿಶಾ ಮೇಲೆ ಮೋಹಗೊಂಡು 25 ಲಕ್ಷ ರೂ. ಕೊಟ್ಟು ರೆಸಾರ್ಟ್‌ಗೆ ಕರೆಸಿಕೊಂಡಿದ್ದರು" ಎಂದು ತ್ರಿಷಾ ಬಗ್ಗೆ ಕೊಟ್ಟ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ತೀವ್ರ  ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯ ಬಹುಭಾಷಾ ನಟಿ ತ್ರಿಷಾ ಅಸಭ್ಯವಾಗಿ ಮಾತನಾಡಿದ್ದಕ್ಕೆ ಎಐಡಿಎಂಕೆ ಪಕ್ಷದ ಮಾಜಿ ನಾಯಕ ಎವಿ ರಾಜುನ ವಿರುದ್ಧ ಮಾನಹಾನಿ ನೋಟಿಸ್ ಕಳುಹಿಸಿದ್ದಾರೆ.


Trisha Krishnan:ತಮಿಳುನಾಡಿನ ರಾಜಕಾರಣಿಯಿಂದ ತ್ರಿಷಾ ಬಗ್ಗೆ ಅಸಭ್ಯ ಹೇಳಿಕೆ: ನೆಟ್ಟಿಗರ ಆಕ್ರೋಶ!!


ಸೌತ್‌ ಸುಂದರಿ ತ್ರಿಷಾ ನೊಟೀಸ್‌ನ ಪ್ರತಿಯನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ನೋಟಿಸ್‌ನಲ್ಲಿ ಕೆಲವು  ಷರತ್ತುಗಳನ್ನು ಹಾಕಿದ್ದಾರೆ. ತ್ರಿಷಾ ಕಳುಹಿಸಿರುವ ನೋಟಿಸ್‌ ಪ್ರತಿಯಲ್ಲಿ ಎ ವಿ ರಾಜು ತಮ್ಮ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ಪರಿಹಾರ ನೀಡುವಂತೆಯೂ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ನಟಿ ತ್ರಿಷಾ ಎವಿ ರಾಜು ಕೊಟ್ಟಿರುವ ಹೇಳಿಕೆಗಳಿಂದ ತೀವ್ರ ಮಾನಸಿಕವಾಗಿ ನೊಂದಿರುವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲದೇ ಮಾಧ್ಯಮಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆಯೂ ತಿಳಿಸಿದ್ದಾರೆ. 


ಟಾಲಿವುಡ್‌ ಖ್ಯಾತಿಯ ನಟಿ ತ್ರಿಷಾ ಮತ್ತೆ ಎ ವಿ ರಾಜು ಮಾಡಿದ ಕಮೆಂಟ್‌ಗಳನ್ನು ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾಗಳಿಂದ ಸಂಪೂರ್ಣ ಡಿಲೀಟ್‌ ಮಾಡಬೇಕೆಂದು ಎಂದು ಹೇಳಿದ್ದಾರೆ. ಇದರೊಂದಿಗೆ ಈ ನೋಟಿಸ್ ಸ್ವೀಕರಿಸಿದ 24 ಗಂಟೆಗಳ ಒಳಗೆ ನಟಿ ತ್ರಿಶಾಗೆ ಎ ವಿ ರಾಜು  ಕ್ಷಮೆಯಾಚಿಸಬೇಕು. ಇಲ್ಲದೆ ಹೋದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಕ್ರಮ ತೆಗೆದುಕೊಳ್ಳಲು ಸಿದ್ಧ ಎಂದು ತ್ರಿಷಾ ಎಚ್ಚರಿಕೆ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.