Trisha: ವಯಸ್ಸು ನಲವತ್ತರಲ್ಲೂ ಅಷ್ಟೊಂದು ಸುಂದರವಾಗಿರುವ ಹೀರೋಯಿನ್ ತ್ರಿಶಾ.. ಪೊನ್ನಿಯನ್ ಸೆಲ್ವನ್ ಚಿತ್ರದಿಂದ ರೀ ಎಂಟ್ರಿ ಕೊಟ್ಟು ನಾಯಕಿಯಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ... ಜೊತೆಗೆ ಸರಣಿ ಆಫರ್‌ಗಳನ್ನು ಪಡೆಯುತ್ತಿದ್ದಾರೆ.. 


COMMERCIAL BREAK
SCROLL TO CONTINUE READING

ಹೌದು ಈ ಸುಂದರಿ ಈಗಾಗಲೇ ಲಿಯೋ ಚಿತ್ರದಲ್ಲಿ ವಿಜಯ್ ಎದುರು ನಾಯಕಿಯಾಗಿ ನಟಿಸಿ.. ತಮಿಳಿನ ಜೊತೆಗೆ ತೆಲುಗಿನಲ್ಲೂ ಅಚ್ಚಳಿಯದ ಯಶಸ್ಸನ್ನು ಸಾಧಿಸುವ ಮೂಲಕ ತನ್ನ ಫಾರ್ಮ್ ಅನ್ನು ಮರಳಿ ಪಡೆದಿದ್ದಾಳೆ... ಅಷ್ಟೇ ಅಲ್ಲ, ತಮಿಳಿನಲ್ಲಿ ಅಜಿತ್ ಎದುರು ಮತ್ತೊಂದು ಸಿನಿಮಾ ಮಾಡುತ್ತಿರುವ ತ್ರಿಷಾಗೆ ಟಾಲಿವುಡ್ ನಲ್ಲೂ ಸೀನಿಯರ್ ಮೀರೋ ಚಿತ್ರಗಳಲ್ಲಿ ಅವಕಾಶಗಳು ಸಿಗುತ್ತಿವೆ.. ಇದೀಗ ಮತ್ತೊಂದು ಲೇಟೆಸ್ಟ್ ವಿಷಯ ಏನಪ್ಪಾ ಅಂದ್ರೆ ಈ ಚೆಲುವೆ ಬಾಲಿವುಡ್‌ಗೆ ರೀ ಎಂಟ್ರಿ ಕೊಡಲಿದ್ದಾರೆ. 


ಇದನ್ನೂ ಓದಿ-ಪ್ರಭಾಸ್ ಸೇರಿದಂತೆ.. 2023ರಲ್ಲಿ ಗ್ರ್ಯಾಂಡ್ ಕಮ್ ಬ್ಯಾಕ್ ಕೊಟ್ಟ ಮೂವರು ಸ್ಟಾರ್ ಹೀರೋಗಳಿವರು..!


ಹೌದು ಅಸಲಿ ವಿಷಯ ಏನಪ್ಪಾ ಅಂದ್ರೆ.. ತ್ರಿಷಾಗೆ ಬಾಲಿವುಡ್ ನಿಂದ ಒಳ್ಳೆ ಆಫರ್ ಬಂದಿದ್ದು.. ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಗೆ ಜೋಡಿಯಾಗಿ ನಟಿಸುವ ಅವಕಾಶ ಸಿಕ್ಕಿದೆ ಎಂದು ವರದಿಯಾಗಿದೆ.. 


ಇದನ್ನೂ ಓದಿ-ಬಾಕ್ಸಾಫೀಸ್ ನಲ್ಲಿ 'ಡಂಕಿ' ಧಮಾಕ...7 ದಿನದಲ್ಲಿ 305 ಕೋಟಿ ಬಾಚಿದ ಕಿಂಗ್ ಖಾನ್ ಸಿನಿಮಾ


ಅದ್ಧೂರಿ ಆ್ಯಕ್ಷನ್ ಎಂಟರ್‌ಟೈನರ್ ಆಗಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ನಿರ್ಮಾಪಕರು ತ್ರಿಷಾ ಅವರನ್ನು ಬಹುತೇಕ ಫಿಕ್ಸ್ ಮಾಡಿದ್ದಾರೆ.. ಆದರೆ ನಾಯಕಿಯಾಗಿ ಒಳ್ಳೆಯ ಫಾರ್ಮ್ ನಲ್ಲಿರುವಾಗಲೇ ತ್ರಿಶಾ ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.. 


ಸದ್ಯ ಸಾಲು ಸಾಲು ಯಶಸ್ಸಿನ ಮೇಲೆ ಸವಾರಿ ಮಾಡುತ್ತಿರುವ ತ್ರಿಶಾ, ಬಾಲಿವುಡ್‌ನಲ್ಲೂ ತಮ್ಮ ಶಕ್ತಿ ಪ್ರದರ್ಶಿಸುವ ಯೋಚನೆಯಲ್ಲಿದ್ದಾರೆ. ಸಲ್ಮಾನ್ ಜೊತೆ ತ್ರಿಷಾ ಸಿನಿಮಾವನ್ನು ಕರಣ್ ಜೋಹರ್ ನಿರ್ಮಿಸುತ್ತಿದ್ದು.. ಈ ಸುದ್ದಿ ತಿಳಿದ ತ್ರಿಷಾ ಅಭಿಮಾನಿಗಳು ಖುಷಿಯಾಗಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.