ತ್ರಿಷಾ ನನ್ನ ಸಂಸಾರ ಹಾಳು ಮಾಡುತ್ತಿದ್ದರು: ಸಂಚಲನ ಸೃಷ್ಟಿಸಿದ ಸ್ಟಾರ್ ನಟನ ಆರೋಪ!
Trisha: ತ್ರಿಷಾ ದಕ್ಷಿಣ ಚಿತ್ರರಂಗದಲ್ಲಿ 25 ವರ್ಷಕ್ಕೂ ಹೆಚ್ಚು ಕಾಲದಿಂದ ಮಿಂಚುತ್ತಿರುವ ನಟಿ. ತಮಿಳಿನ ಜೊತೆಗೆ ತೆಲುಗು ಚಿತ್ರರಂಗದಲ್ಲೂ ಸ್ಟಾರ್ ಹೀರೋಗಳ ಎದುರು ನಟಿಸಿದ್ದಾರೆ.
Trisha Movies: ತ್ರಿಷಾ ದಕ್ಷಿಣ ಚಿತ್ರರಂಗದಲ್ಲಿ 25 ವರ್ಷಕ್ಕೂ ಹೆಚ್ಚು ಕಾಲದಿಂದ ಮಿಂಚುತ್ತಿರುವ ನಟಿ. ತಮಿಳಿನ ಜೊತೆಗೆ ತೆಲುಗು ಚಿತ್ರರಂಗದಲ್ಲೂ ಸ್ಟಾರ್ ಹೀರೋಗಳ ಎದುರು ನಟಿಸಿದ್ದಾರೆ. ಅಲ್ಲದೇ ಶ್ರೀಮಂತ ನಟಿಯರಲ್ಲಿ ತ್ರಿಷಾ ಕೂಡ ಒಬ್ಬರು. ಒಂದು ಚಿತ್ರದಲ್ಲಿ ನಟಿಸಲು 10 ಕೋಟಿಗೂ ಹೆಚ್ಚು ಬೇಡಿಕೆ ಇಡುತ್ತಿರುವ ಈ ಹಿರಿಯ ನಟಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.
2000ನೇ ಇಸವಿಯಲ್ಲಿ ಸಿನಿಮಾ ಜೀವನ ಆರಂಭಿಸಿದ ತ್ರಿಷಾ ತಮಿಳು, ತೆಲುಗಿನಲ್ಲಿ ಸಾಲು ಸಾಲು ಹಿಟ್ ಪಡೆದರು. ಆ ಬಳಿಕ ಕೊಂಚ ಬ್ರೇಕ್ ಪಡೆದ ತ್ರಿಷಾ ಪೊನ್ನಿಯನ್ ಸೆಲ್ವನ್ ಮೂಲಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ನಂತರ ವಿಜಯ್ ಗೆ ಜೋಡಿಯಾಗಿ ಲಿಯೋ ಚಿತ್ರದ ಮೂಲಕ ಸೂಪರ್ ಹಿಟ್ ಪಡೆದರು. ಬ್ಲಾಕ್ ಬಸ್ಟರ್ ಲಿಯೋ ಚಿತ್ರದಲ್ಲಿ ವಿಜಯ್ ಅವರ ಪತ್ನಿಯ ಪಾತ್ರವನ್ನು ತ್ರಿಶಾ ನಿರ್ವಹಿಸಿದ್ದಾರೆ.
ತ್ರಿಷಾಗೆ 40 ವರ್ಷವಾದರೂ ಮದುವೆಯಾಗದೆ ಬ್ಯಾಚುಲರ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ತ್ರಿಷಾ ತನ್ನ ದಾಂಪತ್ಯವನ್ನು ಹಾಳು ಮಾಡಿದಳು ಎಂದು ಸ್ಟಾರ್ ನಟರೊಬ್ಬರು ಹೇಳಿಕೆ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:
ತಮಿಳು ಮತ್ತು ತೆಲುಗು ಚಿತ್ರರಂಗದ ಜನಪ್ರಿಯ ನಟ ಶ್ರೀರಾಮ್ ಅಲಿಯಾಸ್ ಶ್ರೀಕಾಂತ್, ತ್ರಿಷಾ ಬಗ್ಗೆ ಈ ಹೇಳಿಕೆ ನೀಡಿದ್ದಾರೆ. ತನ್ನ ಹೆಂಡತಿ ವಂದನಾ ಬಳಿ ತ್ರಿಶಾ ವಂದನಾ ಕೆಟ್ಟದಾಗಿ ಹೇಳಿದ್ದಾರೆ ಎಂದು ಶ್ರೀಕಾಂತ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಕದ್ದು ಮುಚ್ಚಿ ರಾಮ್ ಚರಣ್ ಮನೆಯಲ್ಲಿದ್ದ ಗುಟ್ಟು ರಟ್ಟು ಮಾಡಿದ ಖ್ಯಾತ ನಟಿ !
ಶ್ರೀಕಾಂತ್ ವಿದ್ಯಾವಂತರಲ್ಲ, ಒಳ್ಳೆಯವರಲ್ಲ, ಇಂಗ್ಲಿಷ್ ಬರಲ್ಲ ಹೀಗೆ ತ್ರಿಷಾ ಅನೇಕ ವಿಚಾರಗಳನ್ನ ಹೇಳಿದ್ದಾರಂತೆ. ಆದರೆ ವಂದನಾ ಬಂದು ಶ್ರೀಕಾಂತ್‌ಗೆ ಇದನ್ನು ಹೇಳಿದಾಗ ಅವರು ಆಘಾತಕ್ಕೊಳಗಾದರು. ತ್ರಿಷಾ ಯಾಕೆ ಹೀಗೆ ಹೇಳಿದಳು ಎಂದು ಶ್ರೀಕಾಂತ್ ಶಾಕ್ ಆದರಂತೆ. ಆದರೆ ತ್ರಿಷಾ ಈ ರೀತಿ ಚೇಷ್ಟೆ ಮಾಡಿದ್ದರೆಂಬುದು ಬಳಿಕ ಶ್ರೀಕಾಂತ್ ಅವರಿಗೆ ಅರ್ಥವಾಯಿತಂತೆ.
ತ್ರಿಶಾ ಇಂಡಸ್ಟ್ರಿಯಲ್ಲಿ ಅನೇಕರಿಗೆ ಆತ್ಮೀಯರಾಗಿದ್ದಾರೆ. ಆಕೆ ತನ್ನ ಸಹ ನಟರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಟಾಲಿವುಡ್ ಹೀರೋ ಶ್ರೀರಾಮ್ ಜೊತೆಗೂ ಉತ್ತಮ ಗೆಳೆತನವನ್ನು ಕಾಪಾಡಿಕೊಂಡಿದ್ದಾರೆ. ಶ್ರೀರಾಮ್ ಮತ್ತು ತ್ರಿಷಾ ಮೊದಲ ಬಾರಿಗೆ 'ಮನಸೆಲಂ' ಚಿತ್ರದಲ್ಲಿ ಒಂದಾಗಿದ್ದರು. 2003 ರಲ್ಲಿ ಬಿಡುಗಡೆಯಾದ ಈ ಚಿತ್ರವು ಕಮರ್ಷಿಯಲ್ ಫ್ಲಾಪ್ ಆಗಿತ್ತು. ಆದರೆ ಈ ಸಿನಿಮಾದಲ್ಲಿ ಇವರಿಬ್ಬರು ಒಳ್ಳೆಯ ಸ್ನೇಹಿತರಾದರು.
ಇದನ್ನೂ ಓದಿ: ಅಂದು ಬ್ಯಾಕ್ ಗ್ರೌಂಡ್ ಡ್ಯಾನ್ಸರ್.. ಇಂದು ಕಿರುತೆರೆಯ ಸ್ಟಾರ್... ಇಂದಿಗೂ ಹೂ ಮಾರುತ್ತಾರೆ ಈ ಸೀರಿಯಲ್ ನಟಿಯ ಅಮ್ಮ !
ತ್ರಿಷಾ ತನ್ನ ಜೀವನವನ್ನು ಹಾಳು ಮಾಡಲು ಬಯಸಿದ್ದಳು ಎಂದು ಶ್ರೀರಾಮ್ ಕಾಮಿಡಿಯಾಗಿಯೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಶ್ರೀರಾಮ್ ವಂದನಾಳನ್ನು ಪ್ರೀತಿಸಿ 2008ರಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.