Kari haida Koragajja movie : ʼಕಾಂತಾರʼ ವಿಶ್ವದಾದ್ಯಂತ ಗಮನ ಸೆಳೆದ ಕನ್ನಡದ ಹೆಮ್ಮೆ ಸಿನಿಮಾ. ತುಳುನಾಡು, ಮಲೆನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಈ ಚಿತ್ರ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದೆ. ಇದೀಗ ಖ್ಯಾತ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ನಿರ್ಮಾಣದ ತುಳುನಾಡಿನ ಮತ್ತೊಂದು ಪ್ರಸಿದ್ಧ ದೈವ “ಕರಿಹೈದ ಕೊರಗಜ್ಜ” ಸಿನಿಮಾ ಸದ್ದು ಮಾಡಲು ರೆಡಿಯಾಗಿದೆ.


COMMERCIAL BREAK
SCROLL TO CONTINUE READING

ತುಳುನಾಡಿನ ಪ್ರಸಿದ್ಧ ದೈವಗಳ ಪೈಕಿ ಕೊರಗಜ್ಜ ಕೂಡ ಒಂದು. ಹಿಂದಿನಿಂದಲೂ ಅಜ್ಜನ ಸನ್ನಿಧಿಯಲ್ಲಿ ಅನೇಕ ಪವಾಡಗಳು ನಡೆಯುತ್ತ ಬಂದಿದ್ದು, ಇತ್ತೀಚೆಗೆ ಆ ಭಾಗದ ಜನರಷ್ಟೇ ಅಲ್ಲದೇ, ರಾಜ್ಯ, ಹೊರ ರಾಜ್ಯ, ವಿದೇಶಗಳಿಂದಲೂ ಹಲವರು ತಮ್ಮ ಕಷ್ಟ ಪರಿಹರಿಸುವಂತೆ ಕೊರಗಜ್ಜನಿಗೆ ಹರಕೆ ಹೊತ್ತು, ಅಜ್ಜ ನೆಲೆ ನಿಂತ ಸ್ಥಾನಕ್ಕೆ ಭೇಟಿ ಕೊಡುತ್ತಾರೆ.


ಇದನ್ನೂ ಓದಿ: Urvashi: ಇವರೇ ನೋಡಿ ನಟಿ ಊರ್ವಶಿ ಮಗಳು.. ಸಿನಿರಂಗಕ್ಕೆ ತೇಜಲಕ್ಷ್ಮಿ ಎಂಟ್ರಿ ಯಾವಾಗ?


ಇಂಥಹ ಶಕ್ತಿ ಹೊಂದಿರುವ ಕೊರಗಜ್ಜನ ನಿಖರವಾದ ಕಥೆಯ ಸಿನಿಮಾ ಕೂಡ ತಯಾರಾಗಿದ್ದು, ಇದರಲ್ಲಿ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಅವರ ಶ್ರಮ ದೊಡ್ಡದಿದೆ. ಒಂದಷ್ಟು ಬಿಡುವಿನ ನಂತರ ತ್ರಿವಿಕ್ರಮ ಸಾಫಲ್ಯ ನಿರ್ಮಾಣ ಮಾಡಿದ “ಕರಿಹೈದ ಕೊರಗಜ್ಜ” ಚಿತ್ರವನ್ನು ಸುಧೀರ್ ಅತ್ತಾವರ ನಿರ್ದೇಶನ ಮಾಡಿದ್ದು, ಚಿತ್ರ ಕೊರಗಜ್ಜನ ರೋಚಕ ಜೀವನಗಾಥೆಯನ್ನೊಳಗೊಂಡಿದೆ. ಕೊರಗ ಸಮುದಾಯದ ಒಪ್ಪಿಗೆ ಪಡೆದೇ, ಕೊರಗಜ್ಜನ ಅಧಿಕೃತ ಕಥೆಗೆ ಸಿನಿಮಾ ಫ್ರೇಮು ತೊಡಿಸಲಾಗಿದೆಯಂತೆ.


ಈ ಚಿತ್ರದಲ್ಲಿ ಘಟಾನುಘಟಿ ಕಲಾವಿದರ ದಂಡೇ ಇದೆ. ಬಾಲಿವುಡ್ನ ಖ್ಯಾತ ನಟ ಕಬೀರ್ ಬೇಡಿ ರಾಜನಾಗಿ, ಖ್ಯಾತ ಕೊರಿಗ್ರಾಫರ್ ಸೋಫಾರ್ಕರ್ ಗುಳಿಗನ ಪಾತ್ರದಲ್ಲಿಅಭಿನಯಿಸಿದ್ದಾರೆ. ಪ್ರತಿಭಾವಂತ ಯುವ ನಟ ಭರತ್ ಕೊರಗಜ್ಜನಾಗಿ ಕಾಣಿಸಿಕೊಂಡಿದ್ದು, ನಟಿ ಭವ್ಯ, ಶ್ರುತಿ ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. 


ಇದನ್ನೂ ಓದಿ: ಎರಡನೇ ಬಾರಿಗೆ ತಂದೆಯಾದ ಪ್ರಭುದೇವ..! ಹೆಣ್ಣು ಮಗುವನ್ನು ಸ್ವಾಗತಿಸಿದ ನಟ


ಯಶಸ್ವಿ ಉದ್ಯಮಿಯಾಗಿರುವ ತ್ರಿವಿಕ್ರಮ ಕನ್ನಡ ಚಿತ್ರರಂಗಕ್ಕೆ ಹೊಸಬರೇನಲ್ಲ, ದಶಕಗಳಷ್ಟು ಕಾಲದಿಂದ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. 2012ರಲ್ಲಿ ತ್ರಿವಿಕ್ರಮ ನಿರ್ದೇಶನದಲ್ಲಿ ಮೂಡಿಬಂದ ಪರಿ ಸಿನಿಮಾ ಒಂದು ಮಟ್ಟಿಗೆ ಗೆಲುವು ದಾಖಲಿಸಿತ್ತು. ಬಳಿಕ ಚಿರಂಜೀವಿ ಸರ್ಜಾ ನಾಯಕ ನಟನಾಗಿ, ರವಿಚಂದ್ರನ್ ಮತ್ತು ಪ್ರಕಾಶ್ ರಾಜ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡ 'ಸೀಜರ್' ಚಿತ್ರ ಸುಮಾರು 200  ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ದೊಡ್ಡ ಮಟ್ಟದ ಗೆಲುವಿನ ಜೊತೆಗೆ ಬೆಸ್ಟ್ ಆಕ್ಷನ್ ಚಿತ್ರವಾಗಿ ಅಧಿಕ ಮೊತ್ತಕ್ಕೆ ಮಾರಾಟವಾಗಿತ್ತು.


ನಿರ್ಮಾಪಕ ತ್ರಿವಿಕ್ರಮ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ  ಬೆಳ್ತಂಗಡಿಯವರು. ಕಷ್ಟದಲ್ಲಿ ಬೆಳೆದು ಬಂದ ಇವರ ಗುರಿ, ಛಲ, ಯಶಸ್ಸಿನ ಕಥೆ ಎಲ್ಲರಿಗೂ ಸ್ಫೂರ್ತಿಯಾಗುವಂತಿದೆ. ಟ್ರಾನ್ಸ್ಫರ್ಮೆರ್ ತಯಾರಿಸುವ ಬಹು ದೊಡ್ಡ ಉದ್ದಿಮೆ ನಡೆಸುವ ತ್ರಿವಿಕ್ರಮ್, ಸಿನಿಮಾ ರಂಗದಲ್ಲಿ ನಿರ್ಮಾಪಕರಾಗಿಯೂ ಹೆಸರು ಗಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.