Katrina Kaif Pregnancy: ಬಾಲಿವುಡ್‌ನ ಮುದ್ದಾದ ಜೋಡಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಕಪಲ್  2021 ರಲ್ಲಿ ರಾಜಸ್ಥಾನದಲ್ಲಿ ಅತ್ಯಂತ ಐಷಾರಾಮಿ ಶೈಲಿಯಲ್ಲಿ  ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿನಿ ರಂಗದಲ್ಲಿ ಅತ್ಯಂತ ಹೆಸರಾಂತ ಕಲಾವಿದರಾಗಿರುವ ಈ ಜೋಡಿ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ ಎಂಬ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ ಇತ್ತೀಚೆಗೆ, ವಿಕ್ಕಿ ಕೌಶಲ್- ಕತ್ರಿನಾ ಕೈಫ್ (Vicky Kaushal- Katrina Kaif) ಲಂಡನ್ ಬೀದಿಗಳಲ್ಲಿ ಓಡಾಡುತ್ತಿರುವ ವಿಡಿಯೋ ತುಣುಕೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕತ್ರಿನಾ ಕೈಫ್ ಕಪ್ಪು ಬಣ್ಣದ ದೊಡ್ಡ ಬ್ಲೇಜರ್ ಧರಿಸಿದ್ದಾರೆ. ಈ ಉಡುಪಿನಲ್ಲಿ ಕತ್ರಿನಾ ನಡೆಯುವಾಗ ಅವರ ಹೊಟ್ಟೆಯ ಭಾಗ ಕೊಂಚ ಉಬ್ಬಿದಂತೆ ಕಾಣುತ್ತದೆ. ಈ ವಿಡಿಯೋದಲ್ಲಿ ಕ್ಯಾಟ್ ಜೊತೆಯಲ್ಲಿ ವಿಕ್ಕಿ ಕೂಡ ಕಾಣಿಸಿಕೊಂಡಿದ್ದಾರೆ.  ಇದನ್ನು ಕಂಡ ಅಭಿಮಾನಿಗಳು ಕತ್ರಿನಾ ಕೈಫ್ ತಾಯಿಯಗಲಿದ್ದಾರೆಯೇ (Katrina Kaif Pregnancy) ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು ಕತ್ರಿನಾ ಕೈಫ್ ಗರ್ಭಿಣಿ ಎಂದು ತಾವೇ ನಿರ್ಧರಿಸಿ ವಿಕ್ಕಿ ಕೌಶಲ್ ಮನೆಯಲ್ಲಿ ಈ ವರ್ಷ ನಗುವಿನ ಮಂದಹಾಸ ಮೂಡಲಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 


 


ಚೈನೀಸ್ ಹೋಟೆಲ್ ಹುಡುಗರ "ಚಿಲ್ಲಿ ಚಿಕನ್" ಟೀಸರ್ ಬಿಡುಗಡೆ


ಕತ್ರಿನಾ ಕೈಫ್  ನಿಜವಾಗಿಯೂ ಗರ್ಭಿಣಿಯೇ? 
ಪ್ರಸ್ತುತ, ಲಂಡನ್‌ನಲ್ಲಿ ತಮ್ಮ ಪತಿ ವಿಕ್ಕಿ ಕೌಶಲ್ ( Vicky Kaushal) ಜೊತೆಗೆ ರಜಾ ದಿನಗಳನ್ನು ಆನಂದಿಸುತ್ತಿರುವ ನಟಿ ಕತ್ರಿನಾ ಕೈಫ್ ಗರ್ಭಿಣಿಯಾಗಿಲ್ಲ ಎಂದು ನಟಿಯ ಪಿ‌ಆರ್ ತಂಡ ಖಚಿತಪಡಿಸಿದೆ. 


ಇದನ್ನೂ ಓದಿ- RC16 ಸಿನಿಮಾದಲ್ಲಿ ರಾಮ್ ಚರಣ್ ತಾಯಿಯಾಗಿ ಹಿರಿಯ ಸ್ಟಾರ್ ನಟಿ


ಕತ್ರಿನಾ ಕೈಫ್ ಪ್ರೆಗ್ನೆನ್ಸಿ ನ್ಯೂಸ್: 
ಅಂದಹಾಗೆ, ಕತ್ರಿನಾ ಕೈಫ್ ಪ್ರೆಗ್ನೆನ್ಸಿ ಸುದ್ದಿ ಈ ರೀತಿ ವದಂತಿಯಾಗಿರುವುದು ಇದೇ ಮೊದಲೇನಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಗಾಗ್ಗೆ ಭಾರೀ ಚರ್ಚೆಯಾಗುತ್ತಲೇ ಇರುತ್ತದೆ. ಅದರಲ್ಲೂ, ದೀಪಿಕಾ ಪಡುಕೋಣೆ ಮತ್ತು ರಿಚಾ ಚಡ್ಡಾ ನಂತರ ಕತ್ರಿನಾ ಕೈಫ್ ಕೂಡ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ  ಮತ್ತೆ ಮುನ್ನಲೆಗೆ ಬಂದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.