ನವದೆಹಲಿ: ಇತ್ತೀಚಿಗಷ್ಟೇ ಸಂಸತ್ ನಲ್ಲಿ ಪಾಸಾದ ಕೃಷಿ ಕಾಯ್ದೆ ವಿಚಾರವಾಗಿ ಪ್ರತಿಭಟಿಸುತ್ತಿದ್ದ ರೈತರನ್ನು ಗುರಿಯಾಗಿಸಿಕೊಂಡು ಆರೋಪಿಸಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಅವರ ಟ್ವೀಟ್ ಕುರಿತು ತುಮಕೂರು ಜಿಲ್ಲೆಯ ಸ್ಥಳೀಯ ನ್ಯಾಯಾಲಯ ಶುಕ್ರವಾರ ಪೊಲೀಸರಿಗೆ ದೂರು ದಾಖಲಿಸುವಂತೆನಿರ್ದೇಶನ ನೀಡಿದೆ ಎಂದು ವರದಿಯೊಂದು ತಿಳಿಸಿದೆ.


COMMERCIAL BREAK
SCROLL TO CONTINUE READING

ನ್ಯಾಯವಾದಿ ಎಲ್ ರಮೇಶ್ ನಾಯಕ್ ಅವರ ದೂರಿನ ಆಧಾರದ ಮೇಲೆ ರನೌತ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ (ಜೆಎಂಎಫ್‌ಸಿ) ನ್ಯಾಯಾಲಯ ಕ್ಯಾಥಸಂದ್ರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ನಿರ್ದೇಶನ ನೀಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.


ನಾಯಕ್ ತನಿಖೆಗಾಗಿ ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 156 (3) ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ. "ಕ್ಯಾಥಸಂದ್ರ ಪೊಲೀಸ್ ಠಾಣೆಯ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್‌ಗೆ (ಎ) ವರದಿಯ ದೂರಿನ ಫೋಟೊಸ್ಟಾಟ್ ಪ್ರತಿ ಜೊತೆಗೆ ಮಾಹಿತಿ ನೀಡುವಂತೆ ಕಚೇರಿಗೆ ನಿರ್ದೇಶಿಸಲಾಗಿದೆ" ಎಂದು ಪಿಟಿಐ ತಿಳಿಸಿದೆ.ನಟಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ಮತ್ತು ವಿಚಾರಣೆ ನಡೆಸುವಂತೆ ನ್ಯಾಯಾಲಯವು ನ್ಯಾಯವ್ಯಾಪ್ತಿ ಪೊಲೀಸ್ ಠಾಣೆಗೆ ನಿರ್ದೇಶನ ನೀಡಿದೆ ಎಂದು ಕ್ಯಥಾಸಂದ್ರ ಮೂಲದ ನಾಯಕ್ ಹೇಳಿದ್ದಾರೆ.


"ಗಲಭೆಗೆ ಕಾರಣವಾದ ಸಿಎಎ ಬಗ್ಗೆ ತಪ್ಪು ಮಾಹಿತಿ ಮತ್ತು ವದಂತಿಗಳನ್ನು ಹರಡಿದ ಜನರು ಈಗ ರೈತರ ಮಸೂದೆಯ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ ಮತ್ತು ರಾಷ್ಟ್ರದಲ್ಲಿ ಭಯೋತ್ಪಾದನೆಯನ್ನು ಉಂಟುಮಾಡುತ್ತಿದ್ದಾರೆ, ಅವರು ಭಯೋತ್ಪಾದಕರು.”ಎಂದು ರನೌತ್ ಸೆಪ್ಟೆಂಬರ್ 21 ರಂದು ಟ್ವೀಟ್ ಮಾಡಿದ್ದಾರೆ. ರನೌತ್ ಅವರ ಟ್ವೀಟ್ ತನಗೆ ನೋವುಂಟು ಮಾಡಿದೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲು ಪ್ರೇರೇಪಿಸಿತು ಎಂದು ನಾಯಕ್ ಹೇಳಿದ್ದಾರೆ.