ಕಿರುತೆರೆ ನಟಿ ನೀರೂ ಅಗರವಾಲ್ ನಿಧನ
ಏಕ್ತಾ ಕಪೂರ್ ಅವರ ಧಾರಾವಾಹಿ `ಯೇ ಹೈ ಮೊಹಬ್ಬತ್ತಿನ್`ನಲ್ಲಿ ಕಾಣಿಸಿಕೊಂಡಿದ್ದ ಜನಪ್ರಿಯ ಕಿರುತೆರೆ ನಟಿ ನೀರೂ ಅಗರ್ವಾಲ್ ಅವರು ಅಕ್ಟೋಬರ್ 2, 2018 ರಂದು ಕೊನೆಯುಸಿರೆಳೆದರು. ಇವರ ನಿಧನಕ್ಕೆ ಸಹ ನಟರು ಹಾಗೂ ಚಿತ್ರರಂಗ ಕಂಬನಿ ಮಿಡಿದಿದೆ
ನವದೆಹಲಿ: ಏಕ್ತಾ ಕಪೂರ್ ಅವರ ಧಾರಾವಾಹಿ 'ಯೇ ಹೈ ಮೊಹಬ್ಬತ್ತಿನ್'ನಲ್ಲಿ ಕಾಣಿಸಿಕೊಂಡಿದ್ದ ಜನಪ್ರಿಯ ಕಿರುತೆರೆ ನಟಿ ನೀರೂ ಅಗರ್ವಾಲ್ ಅವರು ಅಕ್ಟೋಬರ್ 2, 2018 ರಂದು ಕೊನೆಯುಸಿರೆಳೆದರು. ಇವರ ನಿಧನಕ್ಕೆ ಸಹ ನಟರು ಹಾಗೂ ಚಿತ್ರರಂಗ ಕಂಬನಿ ಮಿಡಿದಿದೆ
ಬಾಲಿವುಡ್ ಲೈಫ್.ಕಾಮ್ ವರದಿಯ ಪ್ರಕಾರ, ನೀರೂ ಕಳೆದ ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಮತ್ತು ಅಕ್ಟೋಬರ್ 2 ರ ಬೆಳಗ್ಗೆ ಬಾತ್ರೂಮ್ನಲ್ಲಿ ಕುಸಿದು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ನಿಧನರಾದರು ಎಂದು ತಿಳಿದು ಬಂದಿದೆ.
ನೀರೂ ಅಗರವಾಲ್ ಅವರ ನಿಧಾನಕ್ಕೆ ಅವರ ಸಹ ನಟರಾದ ದಿವಾಂಗ ತ್ರಿಪಾಠಿ ಮತ್ತು ಆಲಿ ಗೊನಿ ತಮ್ಮ ಇನ್ಸ್ಟಾಗ್ರ್ಯಾಮ್ ಖಾತೆಯಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.