TV Artists Cricket Tournament : ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ N1 ಕ್ರಿಕೆಟ್ ಅಕಾಡೆಮಿಯ ಬಿಆರ್ ಸುನಿಲ್ ಕುಮಾರ್ ಕಳೆದ ಎರಡು ವರ್ಷಗಳಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಸುತ್ತಾ ಬಂದಿದ್ದಾರೆ. ಈಗಾಗಲೇ ಯಶಸ್ವಿಯಾಗಿ 2 ಸೀಸನ್ ಮುಕ್ತಾಯಗೊಂಡಿದ್ದು, ಇದೀಗ ಟಿಪಿಎಲ್ ಮೂರನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿಗೆ ಸಾಕ್ಷಿಯಾಗಲಿದೆ. ಹುಬ್ಬಳ್ಳಿ ಕೆ.ಎಸ್.ಸಿ.ಎ ಮೈದಾನದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 3 ರವರೆಗೆ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯಲಿದೆ. ಕಿರುತೆರೆಯ ಕಲಾವಿದರು ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ. 


COMMERCIAL BREAK
SCROLL TO CONTINUE READING

ಹುಬ್ಬಳ್ಳಿಯ ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿವೆ. 12 ಓವರ್ಗಳ ಪಂದ್ಯದಲ್ಲಿ 10 ತಂಡಗಳು ಭಾಗವಹಿಸಲಿವೆ. ಐಪಿಎಲ್ ನಂತೆ ಬಿಡ್ಡಿಂಗ್ ಮಾಡಿ ಆಟಗಾರರ ಆಯ್ಕೆ ಮಾಡಲಾಗಿದೆ. ಟಿಪಿಎಲ್ ರಾಯಭಾರಿಯಾಗಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇದ್ದು, ಪ್ರಮುಖ ನಟರಾದ ಲೂಸ್ ಮಾದ ಯೋಗಿ, ರವಿಶಂಕರ್ ಗೌಡ ಟಿಪಿಎಲ್ 3 ನಲ್ಲಿ ಆಡುತ್ತಿರುವುದು ವಿಶೇಷ.. 


ಇದನ್ನೂ ಓದಿ:ಕೋಟಿಗಟ್ಟಲೇ ಸಂಭಾವನೆ ಪಡೆದ ಭಾರತದ ಮೊದಲ ನಟಿ ಇವರೇ.. ಬಾಲಿವುಡ್‌ನ ಲೇಡಿ ಸೂಪರ್‌ ಸ್ಟಾರ್!!‌ 


ಯಾವ ಯಾವ ತಂಡಗಳು ಭಾಗಿ?


ಅಶ್ವಸೂರ್ಯ ರೈಡರ್ಸ್, ಗೋಲ್ಡನ್ ಈಗಲ್, ಕೆಕೆಆರ್ ಮೀಡಿಯಾ ಹೌಸ್, ಬಯೋಟಾಪ್ ಲೈಫ್ ಸೆವಿಯರ್, AVR ಟಸ್ಕರ್ಸ್, ರಾಸು ವಾರಿಯರ್, ಭಜರಂಗಿ ಬಾಯ್ಸ್, ದಿ ಬುಲ್ ಸ್ಕ್ವಾಡ್, ಇನ್ಸೇನ್ ಕ್ರಿಕೆಟ್ ಟೀಂ, ಜಿಎಲ್ಆರ್ ವಾರಿಯರ್ಸ್ ಸೇರಿದಂತೆ ಒಟ್ಟು 10 ಟೀಮ್ ಗಳು ಭಾಗವಹಿಸಲಿದ್ದು, 170 ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ಕೊಡಲಿದ್ದಾರೆ. ಈ 10 ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್ಗಳಿರಲಿದ್ದಾರೆ. ಎವಿಆರ್ ಗ್ರೂಪ್ಸ್ನ ಹೆಚ್ ವೆಂಕಟೇಶ್ ರೆಡ್ಡಿ ಹಾಗೂ ಅರವಿಂದ್ ವೆಂಕಟೇಶ್ ರೆಡ್ಡಿ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ. 


ಅಶ್ವಸೂರ್ಯ ರೈಡರ್ಸ್ ತಂಡಕ್ಕೆ ಹರ್ಷ ಸಿಎಂ ಗೌಡ ನಾಯಕ. ರಂಜಿತ್ ಕುಮಾರ್ ಎಸ್ ಓನರ್, ಜಿಎಲ್ಆರ್ ವಾರಿಯರ್ಸ್ ಟೀಂಗೆ ಲೂಸ್ ಮಾದ ಯೋಗಿ ನಾಯಕನಾದರೆ ರಾಜೇಶ್ ಎಲ್ ಓನರ್, ಇನ್ಸೇನ್ ಕ್ರಿಕೆಟ್ ಟೀಂಗೆ ರವಿಶಂಕರ್ ಗೌಡ ನಾಯಕ-ಫೈಜಾನ್ ಖಾನ್ ಓನರ್, ದಿ ಬುಲ್ ಸ್ಕ್ವಾಡ್ ತಂಡಕ್ಕೆ ಶರತ್ ಪದ್ಮನಾಭ್ ನಾಯಕ-ಮೋನಿಶ್ ಓನರ್, ಭಜರಂಗಿ ಬಾಯ್ಸ್ ಟೀಂಗೆ ಸಾಗರ್ ಬಿಳಿಗೌಡ ನಾಯಕ- ಸ್ವಸ್ತಿಕ್ ಆರ್ಯ ಓನರ್, ರಾಸು ವಾರಿಯರ್ಸ್ ಟೀಂಗೆ ದೀಕ್ಷಿತ್ ಶೆಟ್ಟಿ ನಾಯಕ-ರಘು ಭಟ್ ಹಾಗೂ ಸುಗುಣ ಓನರ್, ಎವಿಆರ್ ಟಸ್ಕರ್ಸ್ಗೆ ಚೇತನ್ ಸೂರ್ಯ ನಾಯಕ - ಅರವಿಂದ್ ವೆಂಕಟ್ ರೆಡ್ಡಿ ಓನರ್, ಬಯೋಟಾಪ್ ಲೈಫ್ ಸೆವಿಯರ್ ಅಲಕಾ ನಂದ ಶ್ರೀನಿವಾಸ್ ನಾಯಕ-ವಿಶ್ವನಾಥ್, ಪ್ರಸನ್ನ ಓನರ್, ಕೆಕೆಆರ್ ಮೀಡಿಯಾ ಹೌಸ್ ಗೆ ಅರುಣ್ ರಾಮ್ ಗೌಡ ನಾಯಕ-ಲಕ್ಷ್ಮೀ ಕಾಂತ್ ರೆಡ್ಡಿ ಓನರ್, ಗೋಲ್ಡನ್ ಈಗಲ್ ವಿಹಾನ್ ನಾಯಕ-ಕುಶಾಲ್ ಗೌಡ ಒಡೆತನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.


ಇದನ್ನೂ ಓದಿ:Highest paid actor: ಸಲ್ಮಾನ್​, ಶಾರುಖ್​, ರಜನಿ ಅಲ್ಲ.. ಈ ಸ್ಟಾರ್​ ನಟ ಪ್ರತಿ ನಿಮಿಷದ ದೃಶ್ಯಕ್ಕೆ ಪಡೆದಿದ್ದು 4.5 ಕೋಟಿ ಸಂಭಾವನೆ.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.