ನವದೆಹಲಿ: ಇತ್ತೀಚಿಗಷ್ಟೇ ಜಾಗತಿಕವಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ 100 ತಾರೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬಾಲಿವುಡ್ ನಟ ಅಕ್ಷಯ ಕುಮಾರ್ ರನ್ನು ಈಗ ಅವರ ಪತ್ನಿ ಟ್ವಿಂಕಲ್ ಖನ್ನಾ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಿದ್ದಾರೆ.



COMMERCIAL BREAK
SCROLL TO CONTINUE READING

ಇನ್ಸ್ಟಾಗ್ರಾಮ್ ನಲ್ಲಿ ಅಕ್ಷಯ್ ಕುಮಾರ್ ವೀಡಿಯೋವೊಂದನ್ನು ಪೋಸ್ಟ್ ಮಾಡಿರುವ ಟ್ವಿಂಕಲ್ ಖನ್ನಾ, ಈ ವೀಡಿಯೋದಲ್ಲಿ ವ್ಯಾಯಾಮ ಮಾಡುವ ರೀತಿಯಲ್ಲಿ ನೇತುಬಿದ್ದಿದ್ದಾರೆ ಇದಕ್ಕೆ ಅವರು ಪ್ರತಿಕ್ರಿಯಿಸಿ ' ಇಲ್ಲಿ ಸುಮ್ಮನೆ ನೇತು ಬಿದ್ದಿದ್ದಾರೆ- ಅವರಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದರು ಸಂತಸವಾಗಿಲ್ಲ, ಆದ್ದರಿಂದ ಅವರು ಈಗ ಬೇಗನೆ ಇಲ್ಲಿ 100 ಫೌಂಡ್ ಹಣವನ್ನು ಮಾಡಬೇಕಾಗಿದೆ ಎಂದು ಬರೆದುಕೊಂಡಿದ್ದಾರೆ.


ಈ ವಾರ್ಷಿಕವಾಗಿ ಅತಿ ಹೆಚ್ಚು ಹಣ ಗಳಿಸುವ ಸೆಲೆಬ್ರಿಟಿಗಳಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿರುವ ಅಕ್ಷಯ್ ಕುಮಾರ್ , ಸುಮಾರು 65 ಮಿಲಿಯನ್ ಡಾಲರ್ ಗಳಷ್ಟು ಹಣವನ್ನು ಗಳಿಸುತ್ತಾರೆ. ಈ ಹಿನ್ನಲೆಯಲ್ಲಿ ಅವರಿಗೆ ಜಾಗತಿಕ ಪಟ್ಟಿಯಲ್ಲಿ 33 ನೇ ಸ್ಥಾನವನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಅವರು ಸ್ಥಾನ ಪಡೆಯಲು ಪ್ರಮುಖವಾಗಿ ಅವರು ಒಂದು ಸಿನಿಮಾಗಾಗಿ ಮಾಡಿಕೊಳ್ಳುವ ಒಪ್ಪಂದಕ್ಕೆ ಅವರು ಕನಿಷ್ಠ 35 ರಿಂದ 70 ಕೋಟಿ ರೂ ಹಣವನ್ನು ಪಡೆಯುತ್ತಾರೆ ಎನ್ನಲಾಗಿದೆ.