200 ಯಶಸ್ವಿ ಸಂಚಿಕೆಗಳನ್ನು ಪೂರೈಸಿದ `ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ`...!
Udho Udho Sri Renuka Yellamma : ಕನ್ನಡ ಕಿರುತೆರೆ ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕತೆಗಳನ್ನು ನೀಡುತ್ತಾ ಬಂದಿರುವ ಕನ್ನಡದ ಜನಪ್ರಿಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ` ಧಾರಾವಾಹಿಗೆ ಇದೀಗ 200 ಸಂಚಿಕೆಗಳ ಸಂಭ್ರಮ.
Kannada Serial : ಅಪ್ಪಟ ಕನ್ನಡ ಮಣ್ಣಿನ ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಶುರುವಾದ ಈ ಧಾರಾವಾಹಿ ಆರಂಭದಿಂದಲೂ ಕಿರುತೆರೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ಖಾಸಗಿ ವಾಹಿನಿಯ ಇತಿಹಾಸದಲ್ಲಿ ಆರಂಭದಿಂದಲೇ ಅತೀ ಹೆಚ್ಚು ರೇಟಿಂಗ್ ಪಡೆದು ಮುನ್ನುಗ್ಗುತ್ತಿರುವ ಹೆಗ್ಗಳಿಕೆಗೆ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿ ಪಾತ್ರವಾಗಿದೆ.
ಇನ್ನು ರೇಣುಕಾ ದೇವಿಯ ಪವಾಡಗಳನ್ನು ತಿಳಿಯುವ ಸಲುವಾಗಿ ಸಾವಿರಾರು ಜನರು ಪ್ರತಿದಿನ ಈ ಧಾರಾವಾಹಿಯನ್ನು ಮಿಸ್ ಮಾಡದೇ ನೋಡುತ್ತಿದ್ದರೆ. ಈ ಧಾರಾವಾಹಿಯು ಹಲವು ರೀತಿಯಲ್ಲಿ ವಿಶೇಷವಾಗಿದ್ದು ಕನ್ನಡ ಕಿರುತೆರೆಯಲ್ಲಿ ಮೊದಲ ಬಾರಿಗೆ ಪೌರಾಣಿಕ ಧಾರಾವಾಹಿಯೊಂದು ಸಂಪೂರ್ಣವಾಗಿ ಕರ್ನಾಟಕದಲ್ಲಿ ಚಿತ್ರೀಕರಣಗೊಂಡಿರುವುದು.
ಇದನ್ನೂ ಓದಿ-Kaatera: 'ಕಾಟೇರನಿ'ಗೆ ದಾರಿಬಿಡಿ...! ಡಿ ಬಾಸ್ ಅಭಿಮಾನಿಗಳು ಕಾಯುತ್ತಿರುವ ಆ ಟೈಮ್ ಬಂದೇಬಿಡ್ತು
ಎಷ್ಟೋ ಜನರ ಪರಿಶ್ರಮದಿಂದ ಎಲ್ಲಾ ರೀತಿಯಲ್ಲಿ ಸಂಶೋಧನೆ ನಡೆಸಿ ವಿಶೇಷವಾದ ಸೆಟ್ ಗಳನ್ನು ಬೆಂಗಳೂರಿನಲ್ಲಿ ಹಾಕಲಾಗಿದೆ. ಧಾರಾವಾಹಿಯು ಅದ್ಭುತವಾಗಿ ಕಾಣಿಸಲು ವಿಶಿಷ್ಟ ರೀತಿಯಲ್ಲಿ ವಸ್ತ್ರವಿನ್ಯಾಸ ಹಾಗು ವಸ್ತ್ರಾಭರಣ ಮಾಡಲಾಗಿದ್ದು ನೋಡುಗರಿಗೆ ಮನೋಲ್ಲಾಸ ನೀಡುತ್ತಿದೆ.
ರೇಣುಕಾ ಹಾಗು ಎಲ್ಲಮ್ಮ ಪಾತ್ರಕ್ಕೆ ಜೀವ ತುಂಬಿದ ಮಕ್ಕಳು ಅದ್ಭುತವಾಗಿ ನಟಿಸಿ ಜನಾಭಿಮಾನಿಗಳ ಮನಗೆದ್ದು ಮನೆಮಾತಾಗಿದ್ದಾರೆ. ಕನ್ನಡ ಮಣ್ಣಿನ ಕತೆಯನ್ನು ಪ್ರೇಕ್ಷಕರು ಈ ಮಟ್ಟಿಗೆ ಯಶಸ್ಸುಗೊಳಿಸಿರುವುದು ಇತಿಹಾಸ ಅಂತಾನೆ ಹೇಳಬಹುದು. ಇದೀಗ ಧಾರಾವಾಹಿಯು 200 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಪ್ರೇಕ್ಷಕರ ಮನಗೆದ್ದು ಮನೆಮಾತಾಗಿ ಮುನ್ನುಗ್ಗುತ್ತಿದೆ.
ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತಾ ತಪ್ಪದೇ ವೀಕ್ಷಿಸಿ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಸೋಮ-ಶನಿ ರಾತ್ರಿ 8.30ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ.
ಇದನ್ನೂ ಓದಿ-"ಉಸಿರೇ ಉಸಿರೇ" ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ