ಬೆಂಗಳೂರು: ರಿಷಭ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಚಿತ್ರವು ಕನ್ನಡವಲ್ಲದೆ ಹಿಂದಿ ಮತ್ತು ತೆಲುಗಿನಲ್ಲೂ ಬಿಡುಗಡೆಯಾಗಿ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮಧ್ಯೆ ನಿರ್ಮಾಪಕ ವಿಜಯ್ ಕುಮಾರ್ ಕಿರಗಂದೂರು ಮತ್ತು ಹೊಂಬಾಳೆ ತಂಡದವರು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿ ಹಲವು ಮಹತ್ವದ ವಿಷಯಗಳನ್ನು ಚರ್ಚಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಟ್ವೀಟ್ ಮಾಡಿರುವ ಅನುರಾಗ್ ಠಾಕೂರ್, ‘ಹೊಂಬಾಳೆ ಫಿಲಂಸ್ ತಂಡದವರನ್ನು ಭೇಟಿ ಮಾಡಿ, ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದೇನೆ. ಭಾರತವನ್ನು ಜಗತ್ತಿನ ಸಿನಿಮಾ ಹಬ್ ಮಾಡುವ ಹೊಂಬಾಳೆ ಫಿಲಂಸ್‍ನವರ ಯೋಜನೆಗಳನ್ನು ಕೇಳಿ ಸಂತೋಷವಾಗಿದೆ’ ಎಂದು ಹೇಳಿದ್ದಾರೆ.


XXX Web Series: 'ಯುವ ಪೀಳಿಗೆಯ ತಲೆ ಹಾಳು ಮಾಡುತ್ತಿರುವಿರಿ', ಏಕ್ತಾ ಕಪೂರ್ ಗೆ ಸುಪ್ರೀಂ ಛೀಮಾರಿ


ಸಭೆಯ ನಂತರ ತಮ್ಮ ಅನಿಸಿಕೆ ಹಂಚಿಕೊಂಡಿರುವ ವಿಜಯ್ ಕುಮಾರ್ ಕಿರಗಂದೂರು, ‘ಕೇಂದ್ರ ಸಚಿವ ಅನುರಾಗ ಠಾಕೂರ್ ಅವರೊಂದಿಗೆ ಬಹಳ ಅದ್ಭುತವಾದ ಮೀಟಿಂಗ್‍ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ನಮ್ಮ ಸಂಸ್ಕೃತಿಯನ್ನು ಸಿನಿಮಾಗಳ ಮೂಲಕ ಸಾರುವ ಮತ್ತು ಭಾರತವನ್ನು ವಿಶ್ವದ ಸಿನಿಮಾ ಹಬ್ ಮಾಡುವ ವಿಷಯಗಳೂ ಸೇರಿದಂತೆ ಸಾಕಷ್ಟು ಚರ್ಚಿಸಲಾಯಿತು’ ಎಂದು ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಚೆಲುವೇಗೌಡ ಹಾಗೂ ಕಾರ್ತಿಕ್ಗೌಡ ಸಹ ಹಾಜರಿದ್ದರು.


‘ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರ ದಂಡಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಸೆಪ್ಟೆಂಬರ್ 30ರಂದು ರಿಲೀಸ್ ಆಗಿದ್ದ ಚಿತ್ರ ಇಂದಿಗೂ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ.


ಇದನ್ನೂ ಓದಿ: Harry Potter: ‘ಹ್ಯಾರಿ ಪಾಟರ್’ ಸಿನಿಮಾ ಖ್ಯಾತಿಯ ನಟ ರಾಬಿ ಕೋಲ್ಟ್ರೇನ್ ವಿಧಿವಶ


ಬಾಕ್ಸ್ ಆಫೀಸ್‍ನಲ್ಲಿ ಧೂಳಿಪಟ ಮಾಡಿರುವ ತುಳುನಾಡ ಸಂಸ್ಕೃತಿಯ ‘ಕಾಂತಾರ’ ಶೀಘ್ರವೇ 100 ಕೋಟಿ ರೂ. ಕ್ಲಬ್ ಸೇರಲಿದೆ. ಹಿಂದೆ ಭಾಷೆಯಲ್ಲಿ 2500ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಬಿಡುಗಡೆಯಾಗಿರುವ ‘ಕಾಂತಾರ’ ಸಿನಿಪ್ರೇಮಿಗಳ ಹೃದಯ ಗೆದ್ದಿದೆ. ‘ಕಾಂತಾರ’ ಚಿತ್ರದ ಆರ್ಭಟಕ್ಕೆ ಬಾಲಿವುಡ್ ಮಂದಿ ನಡುಗಿಹೋಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.