Urofi Javed :  ಪ್ರತಿ ಬಾರಿಯೂ ತನ್ನ ಡ್ರೆಸ್ಸಿಂಗ್‌ ಸೆನ್ಸ್‌ನಿಂದ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್‌. ಇದೀಗ ನಟಿ ತನ್ನನ್ನು ಕೆಣಕಿದ ಅಪರಿಚಿತ ವ್ಯಕ್ತಿಗೆ ಕೆಂಡಾಮಂಡಲವಾಗಿ ಉತ್ತರ ನೀಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಸೋಮವಾರ (ಜುಲೈ 24) ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಉರ್ಫಿ ಜಾವೇದ್​ ಹಸಿರು ಬಣ್ಣದ ಬ್ಯಾಕ್​ಲೆಸ್​ ಗೌನ್​ ಧರಿಸಿದ್ದರು. ನಟಿ ವಿಮಾನ ನಿಲ್ದಾಣದಿಂದ ಹೊರಬರುವ ವೇಳೆ ಎದುರು ಬಂದ ಅಪರಿಚಿತ ವ್ಯಕ್ತಿಯೊಬ್ಬರು ಇಂಡಿಯಾ ಕಾ ನಾಮ್ ಖರಾಬ್ ಮತ್ ಕರೋ (ಭಾರತದ ಹೆಸರನ್ನು ಹಾಳು ಮಾಡಬೇಡಿ) ಎಂದಿದ್ದಾರೆ.



ಇದನ್ನೂ ಓದಿ-Sakshi Dhoni: ಕೂಲ್ ಕ್ಯಾಪ್ಟನ್ ಧೋನಿ ಪತ್ನಿ ಸಾಕ್ಷಿ ಈ ಸೂಪರ್ ಸ್ಟಾರ್ ನಟನ ಬಿಗ್‌ ಫ್ಯಾನ್..!


ಇದರಿಂದ ಕೋಪಗೊಂಡ ಉರ್ಫಿ, "ಆಪ್ಕೇ ಬಾಪ್ ಕಾ ಕುಚ್ ಜಾ ರಹಾ ಹೈಂ? ನಹೀ ಜಾ ರಹಾ ಹೈ ನ ಆಪ್ಕೇ ಬಾಪ್ ಕಾ? ಜಾವೋ ಅಪ್ನಾ ಕಾಮ್ ಕರೋ" (ನಿಮ್ಮ ಅಪ್ಪಂದು ಏನಾದ್ರೂ ಗಂಟು ಹೋಯ್ತಾ ನನ್ನಿಂದ..ನಿಮ್‌ ಕೆಲಸ ಎಷ್ಟು ಇದೆಯೋ ಅಷ್ಟು ನೋಡಿಕೊಳ್ಳಿ) ಎಂದು ಗುಡುಗಿದ್ದಾರೆ. ಈ ಸಂದರ್ಭದಲ್ಲಿ ಉರ್ಫಿ ಜೊತೆಯಿದ್ದ ಅವರ ಸ್ನೇಹಿತೆ ಪರಿಸ್ಥಿತಿ ನಿಯಂತ್ರಿಸಿದ್ದಾರೆ. 


ಇನ್ನು ನಟಿ ಉರ್ಫಿ ನಿನ್ನೆಯಷ್ಟೇ ಹೊಸ ಮೇಕಪ್‌ ಐಟಂ ಬಳಸಿ ಮುಖದ ಅಂದವನ್ನು ಹಾಳು ಮಾಡಿಕೊಂಡಿದ್ದೇನೆ ಎಂದು ಸೋಷಿಯಲ್‌ ಮಿಟಿಯಾದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ವಿಚಾರವಾಗಿಯೂ ನಟಿ ಸುದ್ದಿಯಲ್ಲಿದ್ದರು. 


ಇದನ್ನೂ ಓದಿ-ಪ್ರಭುದೇವನಿಗಾಗಿ ಸಸ್ಯಾಹಾರಿಯಾಗಿದ್ದೆ..ಆತನನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದೆ-ನಟಿ ವನಿತಾ ವಿಜಯಕುಮಾರ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.