Upasana grand father car accident : ಅಪೋಲೋ ಆಸ್ಪತ್ರೆ ಅಧ್ಯಕ್ಷೆ, ನಟ ರಾಮ್‌ ಚರಣ್‌ ಪತ್ನಿ ಉಪಾಸನಾ ಕಾಮಿನೇನಿ ಅವರ ತಾತ ಪ್ರತಾಪ್ ರೆಡ್ಡಿ ಪ್ರಯಾಣಿಸುತ್ತಿದ್ದ ಕಾರು ಚೆನ್ನೈನಲ್ಲಿ ಅಪಘಾತಕ್ಕಿಡಾಗಿದೆ. ಚೆನ್ನೈನಲ್ಲಿ ಪ್ರತಾಪ್ ರೆಡ್ಡಿ ಅವರ ಕಾರಿಗೆ ವ್ಯಾನ್ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಈ ಅವಘಡದಲ್ಲಿ ಪ್ರತಾಪ್ ರೆಡ್ಡಿ ಅವರ ಪ್ರಾಣಕ್ಕೆ ಯಾವುದೇ ಹಾನಿಯಾಗಿಲ್ಲ.


COMMERCIAL BREAK
SCROLL TO CONTINUE READING

ಅಪೋಲೋ ಪ್ರತಾಪ್ ರೆಡ್ಡಿ ಉಪಾಸನಾ ಅವರ ತಾತ. ಉಪಾಸನಾ ಸದ್ಯ ಅಪೋಲೋ ಗ್ರೂಪ್‌ನ ಉಪಾಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದಾರೆ. ರಾಮ್ ಚರಣ್ ದಂಪತಿ ಕಳೆದ ವರ್ಷ ಕ್ಲೀಂಕಾರಗೆ ಜನ್ಮ ನೀಡಿದರು. ಆಕೆಯ ಜನನದ ನಂತರ, ಮೆಗಾ ಕುಟುಂಬ, ಒಂದರ ನಂತರ ಒಂದರಂತೆ ಸಂತೋಷವನ್ನು ಅನುಭವಿಸುತ್ತಿತ್ತು. ಚಿರು ಅವರಿಗೆ ಪದ್ಮವಿಭೂಷಣ, ರಾಮ್ ಚರಣ್‌ಗೆ ಡಾಕ್ಟರೇಟ್.. ಜನಸೇನೆಗೆ ಗೆಲುವು ಹೀಗೆ ಮೆಗಾ ಕುಟುಂಬ ಸಂಭ್ರಮದಲ್ಲಿ ಮುಳುಗಿತ್ತು. ಇದೀಗ ಪ್ರತಾಪ್‌ ರೆಡ್ಡಿ ಅಪಘಾತ ಕುಟುಂಬಕ್ಕೆ ಶಾಕ್‌ ನೀಡಿದೆ. 


ಇದನ್ನೂ ಓದಿ:ಡಿ ಬಾಸ್‌ ಅಭಿನಯದ 'ರಾಬರ್ಟ್‌' ಸಿನಿಮಾ ರೀ ರಿಲೀಸ್‌!


ರಾಮ್ ಚರಣ್ ಸದ್ಯಕ್ಕೆ 'ಗೇಮ್ ಚೇಂಜರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಶಂಕರ್ ನಿರ್ದೇಶನದ ಈ ಸಿನಿಮಾ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಈ ಪ್ರಾಜೆಕ್ಟ್‌ ನಂತರ ಚರಣ್‌ ಬುಚ್ಚಿಬಾಬು ಸನಾ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದು, ಜಾನ್ವಿ ಕಪೂರ್ ಮೆಗಾ ಪವರ್‌ ಸ್ಟಾರ್‌ಗೆ ನಾಯಕಿಯಾಗಿ ನಟಿಸಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.