ಉಪ್ಪಿ ಅಭಿಮಾನಿಗಳಿಗೆ ಗುಡ್ ನ್ಯೂಸ್..! ಶೀರ್ಘದಲ್ಲೇ ʼAʼ ಭಾಗ 2 ಅನೌನ್ಸ್
Upendra A part 2 : ಇತ್ತೀಚಿಗೆ ರೀ ರಿಲೀಸ್ ಅದ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ A ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ. 26 ವರ್ಷಗಳ ನಂತರ ಮರಳಿ ತೆರೆಕಂಡ ಸಿನಿಮಾ ಜನರ ಮನ ಗೆಲ್ಲುತ್ತಿದೆ. ಇತ್ತೀಚಿಗೆ ಚಿತ್ರತಂಡ ಈ ಕುರಿತು ಸುದ್ದಿಗೋಷ್ಠಿ ಕರೆದು ಸಂತಸ ಹಂಚಿಕೊಂಡಿತು. ಇದೇ ವೇಳೆ ಈ ಸಿನಿಮಾದ ಭಾಗ 2 ಬಗ್ಗೆ A ಟೀಂ ಹೇಳಿಕೊಂಡಿದೆ.
A Kannada Movie : 26 ವರ್ಷಗಳ ಹಿಂದೆ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ ಚಿತ್ರ ಉಪೇಂದ್ರ ನಿರ್ದೇಶನದ ʼAʼ. ಇತ್ತೀಚಿಗೆ ಈ ಚಿತ್ರ ರೀ ರಿಲೀಸ್ ಆಗಿತ್ತು. ಫಸ್ಟ್ ಡೇ ಫಸ್ಟ್ ಶೋ ನೋಡುವಂತೆ ಉಪ್ಪಿ ಅಭಿಮಾನಿಗಳು ಈ ಸಿನಿಮಾವನ್ನು ವಿಕ್ಷೀಸಿ ಸಂಭ್ರಮಿಸಿದರು.
ಸಿನಿಮಾದ ಯಶಸ್ಸಿನ ಬಗ್ಗೆ ಮಾತನಾಡಿ ನಾಯಕಿ ಚಾಂದಿನಿ, ಈ ಚಿತ್ರ ರೀ ರಿಲೀಸ್ ಆಗಿ ಯಶಸ್ಚಿ ಪ್ರದರ್ಶನ ಕಾಣುತ್ತಿರುವುದು ಬಹಳ ಸಂತೋಷ ತಂದಿದೆ. ನಿಜವಾಗಲೂ ಉಪೇಂದ್ರ ಅವರು ಬರೀ ಕರ್ನಾಟಕ ಅಷ್ಟೇ ಅಲ್ಲ. ಇಡೀ ದೇಶ ಕಂಡ ಅತ್ಯಂತ ಪ್ರತಿಭಾವಂತ ನಿರ್ದೇಶಕ. ಅವರಿಂದ ಮೊದಲ ಚಿತ್ರದಲ್ಲೇ ನಾನು ಸಾಕಷ್ಟು ಕಲಿತಿದ್ದೇನೆ ಎಂದರು.
ಇದನ್ನೂ ಓದಿ:ಸಮಂತಾ ಅಲ್ಲ, ಜಾನ್ವಿ ಅಲ್ಲವೇ ಅಲ್ಲ, ಪುಷ್ಪಾ 2 ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ಸುಂದರಿ..!
ಅಲ್ಲದೆ, ಮೊದಲ ಚಿತ್ರದ ಚಿತ್ರೀಕರಣದ ಅನುಭವ ಈಗಲೂ ಕಣ್ಣ ಮುಂದೆ ಇದೆ. ನಾನು "A" ಚಿತ್ರದ ನಂತರ ಕನ್ನಡ ಸೇರಿದಂತೆ ದೇಶದ ವಿವಿಧ ಭಾಷೆಗಳ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ನನ್ನನ್ನು ಎಲ್ಲರೂ ಗುರುತಿಸುವುದು "A" ಚಿತ್ರದ ನಾಯಕಿ ಅಂತ ಎಂದು ಚಾಂದಿನಿ ಹೇಳಿದರು.
ಇನ್ನೂ ಇದೇ ವೇಳೆ ಅವರು, ಮತ್ತೊಂದು ಮುಖ್ಯವಾದ ವಿಷಯವೆಂದರೆ ಈ ಜನಪ್ರಿಯ ಚಿತ್ರವನ್ನು ಇನ್ನಷ್ಟು ಮುಂದುವರೆಸುವುದು ನನ್ನ ಹಂಬಲ. ಹಾಗಾಗಿ ‘A’ ಚಿತ್ರದ ಮುಂದುವರೆದ ಭಾಗ ಮಾಡುವುದಕ್ಕೆ ತೀರ್ಮಾನ ಮಾಡಿದ್ದೇನೆ. ಕಥೆ ಮತ್ತು ಚಿತ್ರಕಥೆಯನ್ನು ನಾನೇ ಬರದಿದ್ದೇನೆ. ನಿರ್ಮಾಪಕ ಮಂಜುನಾಥ್, ಸಂಗೀತ ನಿರ್ದೇಶಕ ಗುರುಕಿರಣ್ ಮುಂತಾದವರು ಜೊತೆಗಿದ್ದಾರೆ.
ಇದನ್ನೂ ಓದಿ:ರಕ್ಷಿತ್ ಶೆಟ್ಟಿ ಜೊತೆ ಮದುವೆಯಾಗ್ತಾರಾ ಅನುಷ್ಕಾ ಶೆಟ್ಟಿ!?
ನಾವೆಲ್ಲರೂ ಹೋಗಿ ಉಪೇಂದ್ರ ಅವರ ಬಳಿ ಈ ಚಿತ್ರವನ್ನು ನೀವೇ ನಿರ್ದೇಶಿಸಬೇಕು ಹಾಗೂ ನಾಯಕರಾಗೂ ನಟಿಸಬೇಕು ಎಂದು ಮನವಿ ಮಾಡಲಿದ್ದೇವೆ.. ಸದ್ಯದಲ್ಲೇ ಅವರನ್ನು ಭೇಟಿ ಮಾಡುತ್ತೇವೆ. ಅವರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಸಿನಿಮಾ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ ಎಂದು ಹೇಳಿಕೊಂಡರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.