ಎನ್ಸಿಸಿ ಡ್ರೆಸ್ನಲ್ಲಿರುವ ಈ ಹುಡುಗ ಈಗ ಸ್ಟಾರ್ ಹೀರೋ..! ಯಾರು ಅಂತ ಗೆಸ್ ಮಾಡಿ ನೋಡೋಣ..?
Director Upendra : ಊಹೆಗೂ ನಿಲುಕದ ಹೊಸ ಹೊಸ ವಿಷಯಗಳು ಮತ್ತು ಪರಿಕಲ್ಪನೆಗಳನ್ನು ಹೊಂದಿರುವ ಚಿತ್ರಗಳನ್ನು ಪರಿಚಯಿಸುವ ಮೂಲಕ ಭಾರತೀಯ ಸಿನಿರಂಗದಲ್ಲಿ ಇವರು ಹೊಸ ಛಾಪು ಮೂಡಿಸಿದ್ದಾರೆ. ಕನ್ನಡವಷ್ಟೇ ಅಲ್ಲ, ಟಾಲಿವುಡ್ನಲ್ಲಿಯೂ ಇವರು ಸಖತ್ ಫೇಮಸ್.. ಹಾಗಿದ್ರೆ ಈ ನಟ, ನಿರ್ದೇಶಕ ಯಾರು..? ಬನ್ನಿ ತಿಳಿಯೋಣ..
Upendra childhood photo : ಮೆಗಾ ಫೋನ್ ಹಿಡಿದು ದಿಗ್ಗಜ ನಟರಿಗೆ ಆಕ್ಷನ್, ಕಟ್ ಹೇಳುವ ಈ ನಟ ಕಮ್ ನಿರ್ದೇಶಕನ ಸಿನಿಮಾಗಳು ಯಾವಾಗ್ಲೂ ಹೊಸ ಪರಿಕಲ್ಪನೆಗಳನ್ನು ಹೊಂದಿರುತ್ತವೆ.. ಕೆಲವು ಸಿನಿಮಾಗಳಂತೂ ಪ್ರೇಕ್ಷಕರು ಚಿತ್ರಮಂದಿರದಿಂದ ಹೊರ ಬಂದರೂ ಸಹ ಅವರಿಗೆ ಗುಂಗು ಹಿಡಿಯುವಂತೆ ಮಾಡಿವೆ.. ಇನ್ನೂ ನಿಮಗೆ ಈ ಬಾಲಕ ಯಾರು ಅಂತ ಗೊತ್ತಾಗ್ಲಿಲ್ವಾ.. ? ಬನ್ನಿ ನಾವು ನಿಮಗೆ ಹೇಳ್ತೀವಿ..
ಆ ಹುಡುಗ ಬೇರೆ ಯಾರೂ ಅಲ್ಲ ಸ್ಯಾಂಡಲ್‌ವುಡ್ ಸ್ಟಾರ್ ಹೀರೋ ಕಮ್ ಡೈರೆಕ್ಟರ್ ಉಪೇಂದ್ರ ಅಲಿಯಾಸ್ ಉಪ್ಪಿ. ಈ ಹಿಂದೆ ಅವರು ನಟಿಸಿದ ಕ್ಲಾಸಿಕ್ ಚಿತ್ರಗಳೆಲ್ಲ ಸೂಪರ್ ಹಿಟ್ ಆಗಿವೆ. ಇತ್ತೀಚೆಗಷ್ಟೇ ಇದೀಗ ಉಪೇಂದ್ರ ಅಭಿನಯದ ಮತ್ತೊಂದು ಕ್ಲಾಸಿಕ್ ಸಿನಿಮಾ 'UI' ತೆರೆಗೆ ಬರಲು ರೆಡಿಯಾಗಿದೆ..
ಇದನ್ನೂ ಓದಿ: ʼದಾಸನʼ ಹಳೆ ಕೇಸ್‌ಗಳ ಪರಿಶೀಲನೆ..! ನಟ ದರ್ಶನ್ ಮೇಲೆ ಓಪನ್ ಆಗುತ್ತಾ ರೌಡಿ ಶೀಟರ್..?
ಉಪೇಂದ್ರ ಅವರು ಈ ಹಿಂದೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಆ ಸಿನಿಮಾಗಳೆಲ್ಲ ಬ್ಲಾಕ್ ಬಸ್ಟರ್ ಆಗಿವೆ. ಈಗ ಹಲವು ವರ್ಷಗಳ ನಂತರ ಬಹುಮುಖ ನಟನಿಗೆ ಮತ್ತೆ ಮೆಗಾ ಫೋನ್ ಸಿಗುತ್ತಿದೆ. ಯುಐ ಹೆಸರಿನ ಸಿನಿಮಾ ಕೂಡ ತಯಾರಾಗುತ್ತಿದೆ. 'ಇದು ಎಐ ಜಗತ್ತು ಅಲ್ಲ.. ಯುಐ ಪ್ರಪಂಚ'. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿಸಿದೆ.
ಅದರಲ್ಲೂ ಟೀಸರ್‌ನಲ್ಲಿರುವ ಸ್ಪೆಷಲ್ ಎಫೆಕ್ಟ್‌ಗಳು ಮತ್ತು ಸ್ಟಂಟ್‌ಗಳು ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿವೆ. 100 ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ ಎಂದು ವರದಿಯಾಗಿದೆ. ಮನೋಹರನ್-ಶ್ರೀಕಾಂತ್ ಕೆಪಿ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಉಪೇಂದ್ರಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸುತ್ತಿದ್ದಾರೆ.. ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ