UI Movie Meaning: ಸ್ಯಾಂಡಲ್‌ವುಡ್‌ ನಟ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಚಿತ್ರಗಳ ಸೀಕ್ರೆಟ್ ಬಿಟ್ಟುಕೊಡದವರು, ಸದ್ಯ UI ಚಿತ್ರದ ಅರ್ಥ ಏನೂ ಅನ್ನೋದೇ ತಿಳಿದಿಲ್ಲ. ಇತ್ತೀಚೆಗೆ ಈ ನಟ ಕಾಲೇಜ್ ಫಂಕ್ಷನ್ ಒಂದರಲ್ಲಿ UI ಸಿನಿಮಾದ ರಿಯಲ್ ಅರ್ಥ ಏನೂ ಅನ್ನೋದನ್ನ ರಿವೀಲ್ ಮಾಡುವುದರ ಜೊತೆಗೆ  ವಿದ್ಯಾರ್ಥಿಗಳ ಮನಸ್ಥಿತಿಯನ್ನ ಅರ್ಥ ಮಾಡಿಕೊಂಡು ಒಂದಷ್ಟು ಮೋಟಿವೇಷನಲ್ ಸ್ಪೀಚ್ ನೀಡಿ ಬುದ್ದಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನಟ ಉಪೇಂದ್ರ ತುಂಬಾ ಚೆನ್ನಾಗಿಯೇ ಮೋಟಿವೇಟ್ ಮಾಡುತ್ತಾ, ಅವರು ಹೋಗಿದ್ದ ಕಾಲೇಜಿನಲ್ಲಿ UI ಸಿನಿಮಾ ವಿಡಿಯೋ ಕೂಡ ಪ್ರದರ್ಶನ ಮಾಡಲಾಯಿತು. ವಿದ್ಯಾರ್ಥಿಗಳ ಜೊತೆಗೆ ಕುಳಿತು ಇದನ್ನ ನೋಡಿದ ಉಪ್ಪಿಗೆ ವೇದಿಕೆ ಮೇಲೆ ಸನ್ಮಾನ ಕೂಡ ನಡೆದಿದ್ದು, ಬಳಿಕ ಡಯಾಸ್‌ಗೆ ಬಂದ್ರು ನೋಡಿ, ಆಗ ಇಲ್ಲಿ ಸಿಕ್ಕಾಪಟ್ಟೆ ಸಿಳ್ಳೆ-ಕೇಕೆ ಬಂದವು. ಅದಾದ್ಮೇಲೆ ಉಪ್ಪಿ ಮಾತನಾಡುತ್ತಾ "ನಿಮ್ಮ ಏಜ್ ಎಂತಹದ್ದು ಗೊತ್ತೇ? ನಿಮ್ಮ ಈ ಏಜ್‌ಗೆ ಒಂದು ಶಕ್ತಿ ಇದೆ. ಏನೇ ಕೇಳಿದ್ರು ಯಸ್ ಅನ್ನುವ ಗುಣ ನಿಮಗೆ ಈಗ ಇರುತ್ತದೆ." ಎಂದು ಹೇಳಿದರು.


ಇದನ್ನು ಓದಿ: ದೀಪಾವಳಿ ಹಬ್ಬಕ್ಕೆ ಬಂತು ಡಂಕಿ ಹೊಸ ಪೋಸ್ಟರ್....!


"ಸಿಗರೇಟು ಸೇದೋಣವೇ ಎಂದು ಕೇಳಿದ್ರೆ ಯಸ್ ಅಂತ ಹೇಳ್ತೀರಾ? ಎಣ್ಣೆ ಹೊಡೆಯೋಕೆ ಹೋಗೋಣವೇ ? ಹೀಗೆ ಕೇಳಿದ್ರು ಕೂಡ ಯಸ್ ಅಂತೀರಾ. ಅಂತಹ ಈ ಯಸ್ ಅನ್ನುವ ಏಜ್‌ನಲ್ಲಿಯೇ ಯಾರು ನೋ ಅಂತಾರೋ ಅವನೇ ಗ್ರೇಟ್.  ನೀವೆಲ್ಲ AI ಯುಗದಲ್ಲಿಯೇ ಇದ್ದೀರಾ. ಹಾಗಾಗಿಯೇ ನಿಮಗಾಗಿಯೇ UI ಸಿನಿಮಾ ಮಾಡಿದ್ದೇನೆ. UI ಅಂದ್ರೆ ಯುನಿವರ್ಸಲ್ ಇಂಟೆಲಿಜೆನ್ಸ್" ಅಂತಲೇ ತಮ್ಮ ಚಿತ್ರ ಅರ್ಥ ಹೇಳುತ್ತಾ ತಮ್ಮ ಸಿನಿಮಾದ ಹೊಸ ಮ್ಯಾಟರನ್ನ ರಿಯಲ್ ಸ್ಟಾರ್ ಹಂಚಿಕೊಂಡಿದ್ದಾರೆ.


ಸಾಮಾನ್ಯವಾಗಿ ಉಪ್ಪಿ ಸಿನಿಮಾದಲ್ಲಿ ಇನ್ನೂ ಬೇರೆ ಬೇರೆ ವಿಷಯಗಳು ಇರುತ್ತಿದ್ದು, ಹಾಗಂತ ಈ ಚಿತ್ರದ ಟೈಟಲ್ ಮೀನಿಂಗ್ ಹೇಳೋ ಮೂಲಕ ಎಲ್ಲವನ್ನು ಬಿಟ್ಟುಕೊಟ್ಟಿದ್ದಾರೆ ಅಂತ ಅಲ್ಲ. UI ಸಿನಿಮಾದಲ್ಲಿ ಇನ್ನು ಬೇರೆ ಸೀಕ್ರೆಟ್ಸ್ ಇದ್ದು,  ಅದನ್ನ ತೆರೆ ಮೇಲೆ ನೋಡಲಿ ಅಂತಲೇ ಸದ್ಯಕ್ಕೆಇನ್ನೂ ಏನೂ ಬಿಟ್ಟುಕೊಟ್ಟಿಲ್ಲ.ಇನ್ನುಳಿದಂತೆ ತಮ್ಮ UI ಸಿನಿಮಾದ ಟೈಟಲ್‌ಗೆ ಇದೀಗ ಇನ್ನೂ ಒಂದು ಅರ್ಥ ಕೊಟ್ಟಿ, ಅದನ್ನ ನೀವೆಲ್ಲ ತೆಲೆ ಎತ್ತಿ ತೆರೆ ಮೇಲೆಯೇ ನೋಡಿ ಅಂತಲೇ ಉಪ್ಪಿ ಈಗಾಗಲೇ ಹೇಳಿದ್ದಾರೆ. ಹಾಗೇನೆ ತಮ್ಮ ಈ ಚಿತ್ರದ ಸೀಕ್ರೆಟ್‌ ಅನ್ನ ಸೀಕ್ರೆಟ್ ಆಗಿಯೇ ಉಳಿಸಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm 
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.