ಬೆಂಗಳೂರು: ಸೂಪರ್ ಸ್ಟಾರ್, ರಿಯಲ್ ಸ್ಟಾರ್, ಬುದ್ದಿವಂತ, ಅಭಿಮಾನಿಗಳ ಚಕ್ರವರ್ತಿ ಎಂದು ಕರೆಸಿಕೊಳ್ಳುವ ನಟ, ನಿರ್ದೇಶಕ ಮತ್ತು ನಿರ್ಮಾಪಕ ಉಪೇಂದ್ರ(Upendra) ಯಾವಾಗ ಮತ್ತೆ ನಿರ್ದೇಶನ ಮಾಡುತ್ತಾರೆ ಅನ್ನೋ ಪ್ರಶ್ನೆ ಗಾಂಧಿನಗರದಲ್ಲಿ ಹಲವು ದಿನಗಳಿಂದ ಕೇಳಿಬರುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಹಲವು ಕಥೆಗಳನ್ನು ಮಾಡಿದ್ದೇನೆ. ಎಲ್ಲರಿಗೂ ಈ ಕಥೆಗಳು ಥ್ರಿಲ್ ಕೊಡುತ್ತವೆ. ಸದ್ಯದಲೇ ನನ್ನ ನಿರ್ದೇಶನದ ಹೊಸ ಸಿನಿಮಾ ಅನೌನ್ಸ್​​ ಮಾಡುತ್ತೇನೆ ಎಂದು ಈ ಹಿಂದೆ ಉಪೇಂದ್ರ ಹೇಳಿಕೊಂಡಿದ್ದರು.


COMMERCIAL BREAK
SCROLL TO CONTINUE READING

ವಿಭಿನ್ನ ಮತ್ತು ವಿಶೇಷ ರೀತಿಯ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ಉಪೇಂದ್ರ(Upendra) ನಿರ್ದೇಶನ ಮಾಡಿ ಬಹುದಿನಗಳೇ ಆಯಿತು. ಅವರ ಲಕ್ಷಾಂತರ ಅಭಿಮಾನಿಗಳು ಉಪೇಂದ್ರ ಮತ್ತೆ ಯಾವಾಗ ನಿರ್ದೇಶಕರ ಕ್ಯಾಪ್ ತೊಡುತ್ತಾರೆ ಅಂತಾ ಕಾಯುತ್ತಿದ್ದಾರೆ. ರಿಯಲ್ ಸ್ಟಾರ್ ಕನ್ನಡ ಚಲನಚಿತ್ರೋದ್ಯಮ(Kannada Film Industry) ಕ್ಕೆ ಅನೇಕ ಸ್ಮರಣೀಯ ಮತ್ತು ವಿಭಿನ್ನ ಚಿತ್ರಗಳನ್ನು ನೀಡಿದ್ದಾರೆ. ಅವರ ಮುಂದಿನ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಆದರೆ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತಮ್ಮ ನಿರ್ದೇಶನದ ಸಿನಿಮಾ ಸ್ವಲ್ಪ ತಡವಾಗಬಹುದು ಎಂದು ಉಪೇಂದ್ರ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: 55ನೇ ಚಿತ್ರದಲ್ಲಿ ‘ಕ್ರಾಂತಿ’ ಮಾಡಲು ಸಜ್ಜಾದ ಚಾಲೆಂಜಿಗ್ ಸ್ಟಾರ್ ದರ್ಶನ್..!


2015 ರಲ್ಲಿ ತೆರೆಕಂಡ ‘ಉಪ್ಪಿ 2’(Uppi 2) ಉಪೇಂದ್ರ ನಿರ್ದೇಶನದ ಕೊನೆಯ ಸಿನಿಮಾವಾಗಿತ್ತು. 6 ವರ್ಷಗಳು ಕಳೆದರೂ ಅವರು ನಿರ್ದೇಶನದತ್ತ ಮನಸ್ಸು ಮಾಡಿಲ್ಲವೆಂದು ಅಭಿಮಾನಿಗಳು ಬೇಸರಪಟ್ಟುಕೊಂಡಿದ್ದಾರೆ. ಸದ್ಯ ಕೊರೊನಾ ಸಾಂಕ್ರಾಮಿಕ ಇರುವುದರಿಂದ ಉಪೇಂದ್ರ ಆಕ್ಷನ್ ಕಟ್ ಹೇಳಲು ಮನಸ್ಸು ಮಾಡಿಲ್ಲವೆಂದು ತಿಳಿದುಬಂದಿದೆ. ಕೋವಿಡ್-19(COVID-19) ಪರಿಸ್ಥಿತಿ ಸಂಪೂರ್ಣವಾಗಿ  ಸುಧಾರಿಸಿದ ಬಳಿಕವೇ ತಾವು ಸಿನಿಮಾ ನಿರ್ದೇಶನ ಮಾಡುವುದಾಗಿ ಉಪೇಂದ್ರ ಹೇಳಿಕೊಂಡಿದ್ದಾರೆ. ‘ಕೊರೊನಾ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಲಿ. ಎಲ್ಲವೂ ಸರಿಯಾದ ಮೇಲೆಯೇ ನಾನು ನಿರ್ದೇಶನದ ಸಾಹಸವನ್ನು ಮಾಡುತ್ತೇನೆ’ ಅಂತಾ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಹೇಳಿದ್ದಾರೆ.  


ಈ ಮಧ್ಯೆ ಲಾಕ್‌ಡೌನ್(Lockdown) ಸಮಯದಲ್ಲಿ ಉಪೇಂದ್ರ ಕೆಲವು ಚಿತ್ರಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆರ್.ಚಂದ್ರು ನಿರ್ದೇಶನದ ‘ಕಬ್ಜಾ’, ಕೆ.ಮಾದೇಶ್ ನಿರ್ದೇಶನದ ‘ಲಗಾಮು’ ಮತ್ತು ಓಂ ಪ್ರಕಾಶ್ ರಾವ್ ನಿರ್ದೇಶನದ ‘ವೇದವ್ಯಾಸ’ ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ತಮ್ಮ ನಿರ್ದೇಶನದ ಹೊಸ ಸಿನಿಮಾ ಘೋಷಿಸುವವರೆಗೂ ತಾವು ಕೆಲವು ಸಿನಿಮಾಗಳಲ್ಲಿ ನಟನೆ ಮುಂದುವರೆಸುವುದಾಗಿ ಅವರು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: 'ಉದಯ್ ಚೋಪ್ರಾ ಮತ್ತು ನಾನು 5 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದೇವೆ'


ಇದೇ ಸೆಪ್ಟೆಂಬರ್ 18ರಂದು ಉಪೇಂದ್ರ ಅವರ ಹುಟ್ಟುಹಬ್ಬವಿದೆ. ತಮ್ಮ ನೆಚ್ಚಿನ ನಟ, ನಿರ್ದೇಶಕ ಉಪೇಂದ್ರರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ತಮ್ಮ ಹುಟ್ಟುಹಬ್ಬದಂದು ರಿಯಲ್ ಸ್ಟಾರ್ ಬೆಂಗಳೂರಿನಲ್ಲಿ ಇರುವುದಿಲ್ಲವೆಂದು ಹೇಳಿಕೊಂಡಿದ್ದಾರೆ. ತಾನು ನಗರದಿಂದ ದೂರವಿರುತ್ತೇನೆ, ಕೊರೊನಾ(CoronaVirus) ಪರಿಸ್ಥಿತಿ ಇರುವುದರಿಂದ ಅಭಿಮಾನಿಗಳು ಸಹಕರಿಸಬೇಕು. ಕೇವಲ ಕುಟುಂಬ ಸದಸ್ಯರ ಜೊತೆ ಸರಳವಾಗಿ ಹುಟ್ಟಹಬ್ಬ ಆಚರಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೇನೆ ಅಂತಾ ಅವರು ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.