ಪ್ರೇಮಂ 2 ಪ್ರೀತಿಯ ಕಥೆಯಲ್ಲಿ ಏರಿಳಿತಗಳು..!
Premam 2 Movie: ಈ ಹಿಂದೆ ಗಂಡುಲಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ವಿನಯ್ ರತ್ನಸಿದ್ದಿ ಈಗ ಮತ್ತೊಂದು ಪ್ರೇಮಕಥೆ ಹಿಡಿದುಕೊಂಡು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
Premam 2: ಇದೇ ತಿಂಗಳಲ್ಲಿ ತೆರೆಗೆ ಬರಲು ಸಿದ್ದವಾಗಿರುವ ಪ್ರೇಮಂ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ವಿನಯ್ ರತ್ನಸಿದ್ದಿ ಅವರೇ ಚಿತ್ರದ ನಾಯಕನಾಗಿ ನಟಿಸುವುದರ ಜೊತೆಗೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ. ಶಕುಂತಲಾ, ವೈಷ್ಣವಿ, ಸುಶ್ಮಿತಾ, ಮಂಜುಶ್ರೀ, ಕಾವೇರಿ ಹಾಗೂ ಪ್ರಿಯಾಂಕಾ ಸೇರಿ ೬ ಜನ ನಾಯಕಿಯರು ಚಿತ್ರದಲ್ಲಿದ್ದಾರೆ. ರತ್ನಸಿದ್ದಿ ಫಿಲಂಸ್ ಮೂಲಕ ಚಂದನ, ಅಮರೇಂದ್ರ ವರದ ಹಾಗೂ ಪ್ರಸಾದ್ ಬಿಜಿ, ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಈ ಸಂದರ್ಭದಲ್ಲಿ ನಾಯಕ ವಿನಯ್ ರತ್ನಸಿದ್ದಿ ಮಾತನಾಡಿ ಪರಿಶುದ್ದವಾದ ಪ್ರೇಮಕ್ಕೆ ಎಂದೂ ಸಾವಿಲ್ಲ ಎಂದು ಹೇಳುವ ಕಥೆ ನಮ್ಮ ಪ್ರೇಮಂ ಟುಟು ಚಿತ್ರದಲ್ಲಿದೆ. ಫಸ್ಟ್ ಲಾಕ್‌ಡೌನ್‌ನಲ್ಲಿ ೨ ಪಾತ್ರಗಳನ್ನಿಟ್ಟುಕೊಂಡು ಈ ಚಿತ್ರವನ್ನು ಪ್ರಾರಂಭಿಸಿದ್ದೆವು. ಅದೀಗ ೨೦೦ ಪಾತ್ರಗಳಾಗಿದೆ. ಟುಟು ಎಂದರೆ ೨ ವಿಕ್ಟರಿ, ೨ ಥಿಂಕಿಂಗ್ ಏನಾದರೂ ಆಗಬಹುದು. ಚಿತ್ರದಲ್ಲಿ ಎರಡು ರೀತಿಯ ಆಲೋಚನೆಗಳ ಬಗ್ಗೆ ಹೇಳಿದ್ದೇವೆ, ಬುದ್ದಿನಂತನಲ್ಲದ, ಹೆಡ್ಡನಂತಿರುವ ನಾಯಕನ ಜೀವನದಲ್ಲಿ ಬರುವ ತಿರುವುಗಳು, ಆತನಗಾಗುವ ಪ್ರೀತಿ, ಆ ಪ್ರೀತಿಯಿಂದಾಗುವ ತೊಳಲಾಟಗಳು, ಅದರಿಂದ ಆತ ಹೇಗೆ ಹೊರಬರುತ್ತಾನೆ ಎನ್ನುವುದೇ ಪ್ರೇಮಂ ಟು ಕಥೆ.
ಇದನ್ನೂ ಓದಿ-80-90ರ ದಶಕದಲ್ಲಿ ಖ್ಯಾತಿ ಗಳಿಸಿದ ಭಾರತದ ಟಾಪ್ ಬಾಲಿವುಡ್ ನಟಿ ರೇಖಾ ಆಸ್ತಿ ಇಷ್ಟು ಕೋಟಿಯೇ?
ಚಿತ್ರದಲ್ಲಿ ಬಿಟ್ ಸೇರಿ ೪ ಹಾಡುಗಳು, ೪ ಫೈಟ್‌ಗಳಿವೆ. ನಾಯಕನ ಜೀವನದಲ್ಲಿ ಆರು ಜನ ನಾಯಕಿಯರು ಒಂದೊದು ಹಂತದಲ್ಲಿ ಬಂದು ಪ್ರೀತಿಯ ಅನುಭವ ತೋರಿಸುತ್ತಾರೆ. ಅವರಲ್ಲಿ ಯಾರದು ಪರಿಶುದ್ದವಾದ ಪ್ರೀತಿ, ಅದು ಆತನಿಗೆ ಸಿಗುತ್ತೋ ಇಲ್ಲವೋ ಎನ್ನುವುದು ಚಿತ್ರದ ಕೊನೆಯಲ್ಲಿ ಗೊತ್ತಾಗುತ್ತದೆ, ಈ ಹಂತದಲ್ಲಿ ಉಂಟಾಗುವ ಗೊಂದಲಗಳು ಆತನ ಬದುಕುವ ರೀತಿಯನ್ನೇ ಬದಲಾಯಿಸುತ್ತವೆ. ಈ ೬ ಜನ ನಾಯಕಿಯರು ಕಥೆಗೆ ಪೂರಕವಾಗಿಯೇ ಬರುತ್ತಾರೆ, ತುಮಕೂರು ಬಳಿಯ ಹೊನ್ನುಡಿಕೆಯಲ್ಲಿ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಉಳಿದಂತೆ ಬೆಂಗಳೂರು, ವಿಮಾನ ನಿಲ್ದಾಣ ಸೇರಿ ೭೦ ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಒಂದಷ್ಟು ಜನರಿಗೆ ಪ್ರೀಮಿಯರ್ ಹಾಕಿದಾಗ ಒಳ್ಳೇಚಿತ್ರ ಎಂಬ ಅಭಿಪ್ರಾಯ ಬಂತು. ಒಳ್ಳೇ ರೇಟಿಗೆ ಡಬ್ಬಿಂಗ್ ರೈಟ್ಸ್ ಕೇಳ್ತಿದ್ದಾರೆ ಎಂದು ಹೇಳಿದರು.
ನಂತರ ನಿರ್ಮಾಪಕರಾದ ತಿಪಟೂರು ಮೂಲದ ಪ್ರಸಾದ್ ಮಾತನಾಡಿ ನಾನು ಪ್ರೈವೇಟ್ ಸೆಕ್ಟರ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಟ್ರೈಲರ್ ನೋಡಿದಾಗ ಇಷ್ಟವಾಯ್ತು, ತುಂಬಾ ಎಫರ್ಟ್ ಹಾಕಿ ಸಿನಿಮಾ ಮಾಡಿದ್ದಾರೆ ಎಂದರು. ಮತ್ತೊಬ್ಬ ನಿರ್ಮಾಪಕ ಅಮರೇಂದ್ರ ವರದ ಮಾತನಾಡಿ ವಿನಯ್ ಜೊತೆ ೨೦೧೭ರಿಂದಲೂ ನಾನಿದ್ದೇನೆ. ಇಬ್ಬರೂ ಸೇರಿ ಇಂಜಿನಿಯರ್, ಗಂಡುಲಿ ನಂತರ ಈ ಚಿತ್ರವನ್ನು ಮಾಡಿದ್ದೆವು ಎಂದರು. ಇನ್ನು ಈ ಚಿತ್ರಕ್ಕೆ ಲಂಡನ್‌ನಲ್ಲಿರುವ ಲೋಕೇಶ್ ರಾಜಣ್ಣ ಕೂಡ ಬಂಡವಾಳ ಹಾಕಿದ್ದು ಚಿಕ್ಕದೊಂದು ಪಾತ್ರವನ್ನೂ ಮಾಡಿದ್ದಾರೆ.
ಇದನ್ನೂ ಓದಿ-ಆ ಒಂದು ಡೈಲಾಗ್ ನಿಂದಾಗಿ ʼಲಿಯೋʼ ಗೆ ಹೊಸ ಸಮಸ್ಯೆ...! ಚಿತ್ರತಂಡದ ವಿರುದ್ಧ ದೂರು ದಾಖಲು
ನಾಯಕಿಯರಲ್ಲೊಬ್ಬಳಾದ ಮಂಜುಶ್ರೀ ಮಾತನಾಡಿ ನಾನು ಮೂಲತಃ ಮಾಡೆಲ್, ಈಗಾಗಲೇ ೨ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈ ಚಿತ್ರದಲ್ಲಿ ನಾಯಕಿಪಾತ್ರ ಮಾಡಿದ್ದೇನೆ ಎಂದರು. ಇನ್ನು ಈ ಚಿತ್ರದ ಹಾಡುಗಳಿಗೆ ಅಜಯ್ ಶ್ರೀನಿವಾಸಮೂರ್ತಿ ಅವರ ಸಂಗೀತ ಸಂಯೋಜನೆಯಿದ್ದು, ಆನಂದ್ ಇಳಯರಾಜಾ, ಅರುಣ್ ಮತ್ತು ಮನು ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ, ಅಲ್ಲದೆ ಈ ಚಿತ್ರಕ್ಕೆ ವಿನಯ್ ಅವರ ಸಂಕಲನ, ನಾಗರಾಜ ಹುಲಿವಾನ್ ಅವರ ಡಿಟಿಎಸ್, ಯೇಷನ್ ಅವರ ವಿಎಫ್‌ಎಕ್ಸ್ ಕೆಲಸವಿದೆ. ಚಂದ್ರಪ್ರಭ, ಲೋಕೆಶ್ ರಾಜಣ್ಣ,ಉಮೇಶ್ ಕಿನ್ನಾಳ, ಶಿವಮೊಗ್ಗ ರಾಮಣ್ಣ ಮುಂತಾದವರ ತಾರಬಳಗವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.