Urfi Javed: ಉರ್ಫಿ ಜಾವೇದ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ, ಆಕೆ ಚಿಕ್ಕ ಬಟ್ಟೆ ಧರಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಿ ಕರೆದೊಯ್ದಿದ್ದಾರೆ ಎಂದು ನೆಟ್ಟಿಗರು  ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದೊಂದು ನಕಲಿ ಬಂಧನ ವಿಡಿಯೋ ಎಂಬುದು ಸ್ಪಷ್ಟವಾಗಿದ್ದು, ಈ ಬಗ್ಗೆ ಮುಂಬೈ ಪೊಲೀಸರು ಅಧಿಕೃತ ಹೇಳಿಕೆ ನೀಡಿದ್ದಾರೆ. ಇದಲ್ಲದೇ ಉರ್ಫಿ ಜಾವೇದ್ ಮತ್ತು ವೀಡಿಯೊಗೆ ಸಂಬಂಧಿಸಿದ ಜನರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ಸಹ ದಾಖಲಿಸಲಾಗಿದೆ.


COMMERCIAL BREAK
SCROLL TO CONTINUE READING

ಅಸಲಿಗೆ ಆಗಿದ್ದೇನು ಅಂತೀರಾ ಇಲ್ಲಿದೆ ಉತ್ತರ.. ಬೆಳಗ್ಗೆ ಕಾಫಿ ಕುಡಿಯಲು ಮನೆಯಿಂದ ಹೊರ ಬಂದಿದ್ದ ಉರ್ಫಿಯನ್ನು ಪೊಲೀಸ್ ಅಧಿಕಾರಿಗಳ ತಂಡ ಬಂಧಿಸಿ ಕರೆದೊಯ್ದಿದೆ. 


ಇದನ್ನೂ ಓದಿ-ನಟರನ್ನೂ ಮೀರಿಸಿದ ಕಿಸ್ ಬೆಡಗಿಯ ಸಂಭಾವನೆ, ಗಂಟೆಗೆ ಲಕ್ಷ ಲಕ್ಷ ಶುಲ್ಕ ಪಡೆಯುವ ಶ್ರೀಲೀಲಾ!


ವಿಡಿಯೋದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಾರೆ. ತನ್ನನ್ನು ಏಕೆ ಬಂಧಿಸಲಾಗುತ್ತಿದೆ ಎಂದು ಉರ್ಫಿ ಕೇಳಿದಾಗ, ಯಾರು ಅಂತಹ ತೆಳ್ಳಗಿನ ಬಟ್ಟೆಗಳನ್ನು ಧರಿಸುತ್ತಾರೆ? ಪೊಲೀಸ್ ಅಧಿಕಾರಿ ಪ್ರಶ್ನಿಸಿದ್ದಾರೆ.


ಉರ್ಫಿ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ನೆಟಿಜನ್‌ಗಳು ಅದರ ಹಿಂದಿನ ಸತ್ಯಾಂಶವನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಇದೀಗ ಮುಂಬೈ ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ವಿಡಿಯೋದಲ್ಲಿ ಕಾಣುವ ಪೊಲೀಸ್ ಅಧಿಕಾರಿಗಳು ನಿಜವಾಗಿ ಪೊಲೀಸ್ ನೌಕರರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಎಕ್ಸ್‌ನಲ್ಲಿ ಮುಂಬೈ ಪೊಲೀಸರು ಹಂಚಿಕೊಂಡ ಹೇಳಿಕೆಯಲ್ಲಿ,  "ಅಗ್ಗದ ಪ್ರಚಾರಕ್ಕಾಗಿ ಯಾರೂ ಕಾನೂನಿನೊಂದಿಗೆ ಆಟವಾಡಬಾರದು. ಮುಂಬೈ ಪೊಲೀಸರು ಚಿಕ್ಕ ಬಟ್ಟೆ ಧರಿಸಿದ್ದಕ್ಕಾಗಿ ಮಹಿಳೆಯನ್ನು ಬಂಧಿಸಿದ ವೈರಲ್ ವೀಡಿಯೊ ನಕಲಿಯಾಗಿದೆ. ಅಲ್ಲಿ ಪೊಲೀಸ್ ಸಮವಸ್ತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ".


ಇದನ್ನೂ ಓದಿ-BBK10: ʼವಿನಯ್‌ಗೆ ಪ್ರಶ್ನೆ ಮಾಡ.. ಪ್ಲೀಸ್‌ ಸುದೀಪ್‌ ಸರ್ʼ ಗಾಯಕಿಯ ಮನವಿ : ಐಶ್ವರ್ಯ ರಂಗರಾಜನ್


ಸದ್ಯ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಓಶಿವಾರಾ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 171, 419, 500 ಮತ್ತು 34 ರ ಅಡಿಯಲ್ಲಿ ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ. ಇದೀಗ ನಾವು ನಕಲಿ ಅಧಿಕಾರಿಯನ್ನು ಬಂಧಿಸಿ, ವಾಹನವನ್ನೂ ವಶಪಡಿಸಿಕೊಂಡಿದ್ದೇವೆ". ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. 


ಇತ್ತೀಚೆಗಷ್ಟೇ ಉರ್ಫಿ ಜಾವೇದ್ ತನ್ನ ಫ್ಯಾಷನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು ಗೊತ್ತೇ ಇದೆ. ಕಳೆದ ತಿಂಗಳು ಆಕೆಯ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನ್ನ ಫ್ಯಾಶನ್ ಸೆನ್ಸ್‌ಗಾಗಿ ಜನರಿಂದ ಟ್ರೋಲ್‌ ಕೂಡಾ ಆಗಿದ್ದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.