Urfi Javed Unique Look: ಉರ್ಫಿ ಜಾವೇದ್ ಸದಾ ತಮ್ಮ ವಿಚಿತ್ರ ಉಡುಪಿನ ಶೈಲಿಯಿಂದ ಟ್ರೋಲ್‌ ಆಗುತ್ತಾರೆ. ಬಗೆಬಗೆಯ ಬಟ್ಟೆಗಳನ್ನು ತಯಾರಿಸಿರುವ ಉರ್ಫಿ ಈ ಬಾರಿ ಬೇರು, ಪೊದೆ, ಎಲೆಗಳಿಂದ ಡ್ರೆಸ್ ತಯಾರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದೆ. ಉರ್ಫಿ ಅವರ ಹೊಸ ಲುಕ್ ತುಂಬಾ ವೈರಲ್ ಆಗುತ್ತಿದೆ. ಇದರಲ್ಲಿ ಅವರು ನಿಜವಾಗಿಯೂ ಬೇರುಗಳು, ಹುಲ್ಲು ಮತ್ತು ಎಲೆಗಳಿಂದ ಮಾಡಿದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಕಲ್ಪನೆಯು ಉರ್ಫಿಯದ್ದಲ್ಲ.


COMMERCIAL BREAK
SCROLL TO CONTINUE READING

ಉರ್ಫಿ ಜಾವೇದ್‌ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ನೀಲ್ ರನೌತ್ ಅವರ ಸಹಯೋಗದಲ್ಲಿ ಈ ಉಡುಪನ್ನು ಮಾಡಿರುವುದಾಗಿ ಹೇಳಿದ್ದಾರೆ. ಯಾವುದೇ ಹಣವನ್ನು ಖರ್ಚು ಮಾಡದೆ ಈ ವಿಶಿಷ್ಟ ಬಟ್ಟೆಯನ್ನು ತಯಾರಿಸಲಾಗಿದೆ. 


ಇದನ್ನೂ ಓದಿ: ಹಸಿರ ನಿಸರ್ಗ ಮಡಿಲಲ್ಲಿ ʼಕನ್ನಡತಿʼ ನಟಿ ರಂಜನಿ ರಾಘವನ್; ಫೋಟೊಸ್‌ ನೋಡಿ


ಗೆಡ್ಡೆ-ಬೇರಿನಿಂದ ಉಡುಪನ್ನು ತಯಾರಿಸಿದ ಈ ವಿನ್ಯಾಸಕ ಮತ್ತು ಅದನ್ನು ಧರಿಸಿದ ಉರ್ಫಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೋ ವೈರಲ್ ಆದ ತಕ್ಷಣ ಜನ ಅನೇಕ ರೀತಿಯ ಕಾಮೆಂಟ್ ಮಾಡಿದ್ದಾರೆ. ಕೆಲವರು ಉರ್ಫಿಯನ್ನು ಹುಚ್ಚಿ ಎಂದು ಕರೆಯುತ್ತಿದ್ದಾರೆ ಮತ್ತು ಕೆಲವರು ಅವಳ ಕೆಂಪು ಬಣ್ಣದ ಕೂದಲಿಗೆ ಹಸಿರು ಬಣ್ಣ ಬಳಿಯುವಂತೆ ಸಲಹೆ ನೀಡುತ್ತಿದ್ದಾರೆ. 


 


 

 

 

 



 

 

 

 

 

 

 

 

 

 

 

A post shared by Uorfi Javed (@urf7i)


 


ಅಂದಹಾಗೆ, ಇದಕ್ಕೂ ಮೊದಲು, ಕೆಲವು ಸಮಯದ ಹಿಂದೆ ಉರ್ಫಿಯ ವೀಡಿಯೊ ವೈರಲ್ ಆಗಿತ್ತು, ಅದರಲ್ಲಿ ಅವರು ಮರದ ತೊಗಟೆಯನ್ನು ಧರಿಸಿದ್ದರು. ಉರ್ಫಿಯ ಈ ಶೈಲಿಯನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. ಉರ್ಫಿ ಜಾವೇದ್ ಇಂದು ರೆಸ್ಟೋರೆಂಟ್‌ನ ಹೊರಗೆ ಕಾಣಿಸಿಕೊಂಡರು, ಅಲ್ಲಿ ಅವರ ವಿಭಿನ್ನ ನೋಟ ವೈರಲ್ ಆಗುತ್ತಿದೆ. ಉರ್ಫಿ ಹಸಿರು ಬಣ್ಣದ ಥಾಯ್ ಸ್ಲೀಟ್ ಗೌನ್ ಧರಿಸಿ ತುಂಬಾ ಬೋಲ್ಡ್ ಶೈಲಿಯಲ್ಲಿ ಆಗಮಿಸಿದ್ದರು.


ಇದನ್ನೂ ಓದಿ: ಅಭಿಷೇಕ್ ಬಚ್ಚನ್ ಪತ್ನಿಯಾಗಬೇಕಿತ್ತು ಕರಿಷ್ಮಾ, ನಿಶ್ಚಿತಾರ್ಥ ಮುರಿದುಬಿದ್ದಿದ್ದು ಯಾಕೆ ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.