Urfi Javed Engagement Rumours: ತನ್ನ ವಿಚಿತ್ರ ಫ್ಯಾಷನ್‌’ನಿಂದಲೇ ಜನರನ್ನು ಬೆರಗುಗೊಳಿಸುತ್ತಿರುವ ಉರ್ಫಿ ಜಾವೇದ್ ಅವರ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್ ಸಖತ್ ಸಂಚಲನ ಮೂಡಿಸಿವೆ. ಈ ಚಿತ್ರಗಳಲ್ಲಿ ನಟಿ ಹೊಸ ನಮೂನೆಯ, ಚಿತ್ರ ವಿಚಿತ್ರ ಉಡುಗೆ ಧರಿಸಿ ಕಾಣಿಸಿಕೊಂಡಿಲ್ಲ. ಆದರೆ ಪೂಜೆ ಮಾಡುತ್ತಿರುವುದು ಕಂಡುಬಂದಿದೆ. ನಟಿಯ ಪಕ್ಕದಲ್ಲಿ ಯುವಕನೊಬ್ಬ (ಮುಖಕ್ಕೆ ಹಾರ್ಟ್ ಇಮೋಜಿ ಹಾಕಲಾಗಿದೆ) ಕುಳಿತಿದ್ದಾನೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 2026ರವರೆಗೆ ಈ ರಾಶಿಗೆ ಕೋಟೇಶ್ವರ ಯೋಗ: ಉಕ್ಕಿ ಬರಲಿದೆ ಸರ್ವ ಸಂಪತ್ತು, ವ್ಯವಹಾರದಲ್ಲಿ ಬೆಳವಣಿಗೆ


ಈ ಫೋಟೋದಲ್ಲಿ ಉರ್ಫಿ ಜಾವೇದ್ ನೀಲಿ ಬಣ್ಣದ ಸೂಟ್ ಧರಿಸಿದ್ದಾರೆ. ತಲೆಯ ಮೇಲೆ ಸ್ಕಾರ್ಫ್ ಮತ್ತು ಹಣೆಯಲ್ಲಿ ತಿಲಕವಿದೆ. ಆಕೆಯ ನಗುಮುಖವನ್ನು ನೋಡಿದರೆ ನಟಿಗೆ ತುಂಬಾ ಸಂತೋಷವಾಗಿದೆ ಎಂದನಿಸುತ್ತಿದೆ.


ಉರ್ಫಿ ಜಾವೇದ್ ಮತ್ತು ಈ ವ್ಯಕ್ತಿ ಒಟ್ಟಿಗೆ ಪೂಜೆ ಮಾಡುತ್ತಿರುವುದನ್ನು ಫೋಟೋದಲ್ಲಿ ನೋಡಬಹುದಾಗಿದೆ. ಈ ಫೋಟೋವನ್ನು ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಉರ್ಫಿ ಜಾವೇದ್ ಹಿಂದೂ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಾರೆಯೇ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Bigg Boss Kannada 10: ‘ಬಿಗ್ಬಾಸ್’ ಮನೆಗೆ ಕಾಲಿಡಲಿರುವ ಸಂಭಾವ್ಯ ಸ್ಪರ್ಧಿಗಳು ಇವರೇ ನೋಡಿ


ವೈರಲ್ ಆಗುತ್ತಿರುವ ಫೋಟೋ..


ಉರ್ಫಿಯ ಎರಡು ಫೋಟೋಗಳು ವೈರಲ್ ಆಗುತ್ತಿವೆ. ಈ ಚಿತ್ರಗಳನ್ನು ನೋಡಿದ ಅನೇಕರು ಉರ್ಫಿ ಗುಟ್ಟಾಗಿ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಅವರಿಗೆ ಹೊಸ ಆರಂಭದ ಶುಭಾಶಯಗಳನ್ನೇ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ