urvashi rautela: ನಟಿ ಊರ್ವಶಿ ರೌಟೇಲಾ ಆಗ್ಗಾಗೆ ಸುದ್ದಿಯಲ್ಲಿರೋದು ಎಲ್ಲರಿಗೂ ಗೊತ್ತು.. ಈ ಬ್ಯೂಟಿ ಹೆಚ್ಚಾಗಿ ಅಫೇರ್‌ ವಿಚಾರವಾಗಿಯೇ ಮುನ್ನಲೆಗೆ ಬಂದಿರುತ್ತಾರೆ.. ಊರ್ವಶಿ ಹಾಗೂ ಪಂತ್ ಅರ ಲವ್‌ ರೂಮರ್ಸ್‌ ಬಹಳ ದಿನಗಳಿಂದಲೂ ಸದ್ದು ಮಾಡುತ್ತಿದೆ.. ಅವರಿಬ್ಬರೂ ತುಂಬಾ ಸಲ ಅಂತದ್ದೇನು ಇಲ್ಲ ಎಂದರೂ ಅವರಿಬ್ಬರ ಬಗೆಗಿನ ಚರ್ಚೆ ಮಾತ್ರ ನಿಂತಿಲ್ಲ.. ಆದರೆ ಇದೀಗ ಕೊನೆಗೂ ಊರ್ವಶಿ ರೌಟೇಲಾ ಈ ಸಂಬಂಧದ ಸುದ್ದಿಯ ಬಗ್ಗೆ ಮೌನ ಮುರಿದಿದ್ದಾರೆ.  


COMMERCIAL BREAK
SCROLL TO CONTINUE READING

 ಎನ್‌ಡಿಟಿವಿ ಜೊತೆ ಮಾತನಾಡಿದ ನಟಿ ಊರ್ವಶಿ "ನನ್ನನ್ನು ಆರ್‌ಪಿ (ರಿಷಭ್ ಪಂತ್) ಜೊತೆ ಜೋಡಿಸುವ ನಿರಂತರ ವದಂತಿಗಳಿಗೆ ಸಂಬಂಧಿಸಿದಂತೆ, ಈ ಮೀಮ್‌ಗಳು ಮತ್ತು ವದಂತಿಗಳು ಆಧಾರರಹಿತವೆಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇರಿಸಿಕೊಳ್ಳಲು ನಾನು ಬಯಸುತ್ತೇನೆ. ಸತ್ಯವೇನೆಂದರೇ ನಾನು ನನ್ನ ವೃತ್ತಿಜೀವನದ ಮೇಲೆ ಗಮನಸಿದ್ದೇನೆ" ಎಂದು ನಟಿ ಸ್ಪಷ್ಟವಾಗಿ ಮಾತನಾಡಿದ್ದಾರೆ..


ಇದನ್ನೂ ಓದಿ-ಒಂದೇ ಕೈಯಲ್ಲಿ ಸಿಕ್ಸರ್‌ ಸಿಡಿಸಿದ ರಿಷಬ್‌ ಪಂತ್!‌ ಶಾಕ್‌ನಿಂದ ನೋಡಿದ ಬಾಂಗ್ಲಾ ಬೌಲರ್: ವಿಡಿಯೋ


 ಅವರ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಕೆಲವರು ನಟಿಯನ್ನು ಟ್ರೋಲ್ ಮಾಡುತ್ತಿದ್ದರೆ, ಕೆಲವರು ರಿಷಬ್ ಪಂತ್ ಒಳ್ಳೆಯ ವ್ಯಕ್ತಿ ಎಂದು ಹೇಳುತ್ತಾರೆ. ಆದರೆ, ಇದಕ್ಕೆ ರಿಷಭ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾಲವೇ ಹೇಳಬೇಕು.


ಇನ್ನು ಊರ್ವಶಿ ರೌಟೇಲಾ ಅವರ 10 ವರ್ಷಗಳ ವೃತ್ತಿಜೀವನದಲ್ಲಿ ಒಂದೇ ಒಂದು ಹಿಟ್ ಚಿತ್ರ ನೀಡಿಲ್ಲ.. ಇವತ್ತಿಗೂ ಸಾಮಾಜಿಕ ಜಾಲತಾಣಗಳಲ್ಲಿ ಊರ್ವಶಿ ಹೆಸರು ರಿಷಬ್ ಪಂತ್ ಜೊತೆಗೆ ತಳುಕು ಹಾಕಿಕೊಳ್ಳುತ್ತಲೇ ಇದೆ.. ಆದರೂ ಇಬ್ಬರೂ ತಮ್ಮ ಸಂಬಂಧವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಪ್ರಸ್ತುತ, ಊರ್ವಶಿ ರೌಟೇಲಾ ತನ್ನ ಮುಂಬರುವ ಮೂರು ಯೋಜನೆಗಳಿಗೆ ಮುಖ್ಯಾಂಶಗಳಲ್ಲಿದ್ದಾರೆ.


ಇದನ್ನೂ ಓದಿ-Black Clothes: ಹೆಚ್ಚಾಗಿ ಕಪ್ಪು ಬಟ್ಟೆ ಧರಿಸುವವರ ವ್ಯಕ್ತಿತ್ವ ಹೀಗಿರುತ್ತದೆ...! ಆಶ್ಚರ್ಯವಾದ್ರೂ ಇದು ಸತ್ಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.