ರಿಶಬ್ ಪಂತ್ ಬೆನ್ನತ್ತಿ ಆಸ್ಟ್ರೇಲಿಯಾಗೆ ಹೊರಟ ನಟಿ ಊರ್ವಶಿ ರೌಟೆಲಾ...!
ಭಾರತದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ 2022 ರ T20 ವಿಶ್ವಕಪ್‌ನಲ್ಲಿ ಭಾಗವಹಿಸಲು ಟೀಮ್ ಇಂಡಿಯಾದೊಂದಿಗೆ ಈಗಾಗಲೇ ಆಸ್ಟ್ರೇಲಿಯಾಕ್ಕೆ ಬಂದಿಳಿದಿದ್ದಾರೆ.
ನವದೆಹಲಿ: ಭಾರತದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ 2022 ರ T20 ವಿಶ್ವಕಪ್‌ನಲ್ಲಿ ಭಾಗವಹಿಸಲು ಟೀಮ್ ಇಂಡಿಯಾದೊಂದಿಗೆ ಈಗಾಗಲೇ ಆಸ್ಟ್ರೇಲಿಯಾಕ್ಕೆ ಬಂದಿಳಿದಿದ್ದಾರೆ.
ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ (ಎಂಸಿಜಿ) ನಡೆಯಲಿರುವ ಪಂದ್ಯಾವಳಿಯ ಭಾರತದ ಮೊದಲ ಪಂದ್ಯವಾಗಿರುವ ಪಾಕಿಸ್ತಾನದ ವಿರುದ್ಧ ಆಡುವ 11 ರಲ್ಲಿ ಪಂತ್ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
ಆದರೆ ಈ ಮೊದಲು ಡೇಟಿಂಗ್ ಮಾಡಿ ಈಗ ಹಾವು ಮುಂಗುಸಿಯಂತಾಗಿರುವ ಪಂತ್-ರೌಟೆಲಾ ಮತ್ತೊಮ್ಮೆ ಡೇಟಿಂಗ್ ಮಾಡುತ್ತಿದ್ದಾರಾ? ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಹೌದು ಅಷ್ಟಕ್ಕೂ ಈ ಸಂಶಯ ಬರಲು ಅದಕ್ಕೆ ಸ್ಪಷ್ಟವಾದ ಕಾರಣವಿದೆ.
ಇದನ್ನೂ ಓದಿ: David Miller: ದಕ್ಷಿಣ ಆಫ್ರಿಕಾ ಕ್ರಿಕೆಟರ್ ಡೇವಿಡ್ ಮಿಲ್ಲರ್ ಪ್ರೀತಿಯ ಅಭಿಮಾನಿ ನಿಧನ
ಈಗ ಊರ್ವಶಿ ರೌಟೆಲಾ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಆಷ್ಟ್ರೇಲಿಯಾಗೆ ತೆರಳುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಖಾಸಗಿ ಸಂದರ್ಶನವೊಂದರಲ್ಲಿ ಪಂತ್ ಹೆಸರು ಪ್ರಸ್ತಾಪಿಸದೆ ಅವನು ಸಾಕಷ್ಟು ಬಾರಿ ತನ್ನನ್ನು ಭೇಟಿಯಾಗಲು ಕರೆಯುತ್ತಿದ್ದನು ಮತ್ತು ಹುಚ್ಚುತನದ ಪ್ರೀತಿಯನ್ನು ಹೊಂದಿದ್ದನ್ನು ಎಂದೆಲ್ಲಾ ಹೇಳಿ ಸಾಕಷ್ಟು ಸುದ್ದಿ ಮಾಡಿದ್ದಳು.
'ದೀದಿ' ಎಂದು ಕರೆದಿದ್ದರು. ಇದಕ್ಕೆ ಊರ್ವಶಿ 'ಚೋಟು ಭಯ್ಯಾ' ಎಂದು ಕರೆಯುವ ಮೂಲಕ ಉತ್ತರಿಸಿದರು.
ಇದನ್ನೂ ಓದಿ: ಮಂದಿರಾ ಬೇಡಿ ಕೇಳಿದ ಪ್ರಶ್ನೆಗೆ ಎಂಎಸ್ ಧೋನಿ ಕೊಟ್ಟ ಉತ್ತರ ನೋಡಿ: ಕ್ಯಾಪ್ಟನ್ ಕೂಲ್ ಇಷ್ಟೊಂದು ಫನ್ನಿನಾ?
ಈಗ ಏಕಾಏಕಿ ಊರ್ವಶಿ ರೌಟೆಲಾ ಏಕಾಏಕಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪಂತ್ ಹಾಗೂ ನಟಿ ರೌಟೆಲಾ ನಡುವಿನ ಸಂಬಂಧದ ವಿಚಾರವು ಈಗ ಮೀಮ್ಸ್ ಗಳ ಹಬ್ಬಕ್ಕೆ ಕಾರಣವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.