Urvashi Rautela Post Targeting Rishabh Pant: ಕನ್ನಡ ಸಿನಿಪ್ರೇಕ್ಷಕರಿಗೆ ಐರಾವತ ಸಿನಿಮಾದ ಮೂಲಕ ಪರಿಚಯವಾದ ನಟಿ ಊರ್ವಶಿ ರೌಟೆಲಾ ಕ್ರಿಕೇಟಿಗ ರಿಷಭ್ ಪಂತ್‌ನಿಂದಲೇ ಸುದ್ದಿಯಾಗುತ್ತಿದ್ದರು. ಇದೀಗ ಈ ನಟಿ ಮತ್ತೊಮ್ಮೆ ರಿಷಭ್ ಪಂತ್‌ನನ್ನು ಕೆಣಕಿದ್ದಾರೆ. ಇತ್ತೀಚೆಗೆ ಈ ನಟಿ ಸಂದರ್ಶನವೊಂದರಲ್ಲಿ ಈ ಕ್ರಿಕೇಟಿಗನ ಬಗ್ಗೆ ಕೇಳಿದ ಪ್ರಶ್ನೆಗೆ ನೋ ಕಮೆಂಟ್ಸ್ ಅಂತ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಅಷ್ಟೇ ಅಲ್ಲದೆ ನಟಿ ಊರ್ವಶಿ ರೌಟೆಲಾ ಸೋಶಿಯಲ್‌ ಮಿಡಿಯಾದಲ್ಲಿ ವಿಡಿಯೊವೊಂದು ಹಂಚಿಕೊಂಡಿದ್ದು, ಈ ನಟಿ ಅದರಲ್ಲಿ  ಪರೋಕ್ಷವಾಗಿ ರಿಷಭ್ ಪಂತ್ ಕಾಲೆಳೆದಿದ್ದಾರೆ. ನಟಿ ಊರ್ವಶಿ ITIIMShaadi ಜಾಹಿರಾತಿನ ಝಲಕ್‌ವೊಂದನ್ನು ಶೇರ್‌ ಮಾಡಿರುವ ಅದರಲ್ಲಿ "ನನ್ನ ಬದುಕಿನಲ್ಲಿ ನಾನು ಇಲ್ಲಿಯವರೆಗೆ ಅನೇಕ ಜನರನ್ನ ನೋಡಿದ್ದೇನೆ. ಆ ಪೈಕಿ ಉದ್ಯಮಿಗಳು, ನಟರು, ಗಾಯಕರು ಮತ್ತು ಬ್ಯಾಟ್ಸ್‌ಮನ್‌ಗಳಿದ್ದಾರೆ. ಆದರೆ ಅದರಲ್ಲಿ ಕೆಲವರು ನನ್ನ ಎದೆ ಎತ್ತರಕ್ಕೂ ಇಲ್ಲ" ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.



ಇದನ್ನೂ ಓದಿ: South Actress: ಸಹ ನಟರು ಶ್ರೀದೇವಿಗೆ ಏಕೆ ಹೆದರುತ್ತಿದ್ದರು? ಅಸಲಿ ಸತ್ಯ ಇದು!!


ಬಹುಭಾಷಾ ನಟಿ ಊರ್ವಶಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಈ ನಟಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈಕೆಯನ್ನು ಟ್ರೋಲ್‌ ಮಾಡುತ್ತಾ ಕೆಲವರು ಸೋಶಿಯಲ್‌ ಮಿಡಿಯಾದಲ್ಲಿ ಈ ವಿಡಿಯೋಗೆ ಊವರ್ಶಿ ವೃತ್ತಿ ಜೀವನ, ರಿಷಭ್ ಪಂತ್ ಹಾಕಿಕೊಳ್ಳುವ ಬಗೆ ಬಗೆಯ ಬೂಟುಗಳಿಗೆ ಸಮ ಇಲ್ಲ ಎಂದು ಕಮೆಂಟ್‌ ಮಾಡುತಿದ್ದಾರೆ. ಇನ್ನೂ ರಿಷಬ್‌ ಪಂತ್‌ ಫ್ಯಾನ್ಸ್‌ ಅಂತೂ ಇವರನ್ನ ಆಟ ಆಡಲು ಬಿಡಿ, ಅವರ ಏಕ್ರಾಗತೆಯನ್ನ ಹಾಳು ಮಾಡಬೇಡಿ ಎಂದು ವಿನಂತಿಸಿದ್ದಾರೆ. 


ಬಾಲಿವುಡ್‌ ನಟಿ ಊರ್ವಶಿಗೆ ಹಲವರು  ಪ್ರಚಾರ ಕಡಿಮೆಯಾದಾಗೆಲ್ಲ ರಿಷಭ್ ಪಂತ್ ನೆನಪಾಗುವುದು ಎಂದು ವ್ಯಂಗಿಸಿದ್ದಾರೆ. ನಟಿ ಊರ್ವಶಿ ರೌಟೆಲಾ ಹಾಗೂ ರಿಷಬ್‌ ಪಂತ್‌ ಸುಮಾರು 2022 ರಿಂದ ಇಬ್ಬರು ಹಾವು ಮುಂಗುಸಿಯಂತೆ ಇಬ್ಬರು ಸೆಣಸಾಡುತ್ತಿದ್ದಾರೆ. ಒಟ್ಟಿನಲ್ಲಿ ನಟಿ ಊರ್ವಶಿಗೆ ಆಗಾಗ ಹಳೆಯ ಗೆಳೆಯನನ್ನ ನೆನಪು ಮಾಡಿಕೊಳ್ಳದೇ ಇದ್ದರೆ, ಕೆಣಕದೇ ಇದ್ದರೆ ನಿದ್ರೆ ಬರುವುದಿಲ್ಲವೆಂದು ಅನಿಸುತ್ತದೆ. ಆದರೆ ರಿಷಬ್‌ ಪಂತ್‌ ಸದ್ಯ ಅಪಘಾತದ ನಂತರ ಚೇತರಿಸಿಕೊಂಡು ಮತ್ತೆ ಮೈದಾನಕ್ಕೆ ಮರಳಿ ಐಪಿಎಲ್ ಧ್ಯಾನದಲ್ಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.