ಹಂಚಿಕೊಂಡ ಬೆನ್ನಲ್ಲೇ ಭಾರಿ VIRAL ಆಗಿದೆ ಈ ಖ್ಯಾತ ಬಾಲಿವುಡ್ ಬೆಡಗಿಯ VIDEO
ಲಾಕ್ಸ್ ಡೌನ್ ಅವಧಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸಕ್ರೀಯಳಾಗಿರುವ ಖ್ಯಾತ ಬಾಲಿವುಡ್ ಬೆಡಗಿ ಊರ್ವಶಿ ರೌತೆಲಾ ತನ್ನ ಇನ್ಸ್ತಾಗ್ರಾಂ ಮ್ ಖಾತೆಯ ಮೂಲಕ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸದ್ಯ ಅವಳ ಈ ವಿಡಿಯೋ ಭಾರಿ ವೈರಲ್ ಆಗಲಾಂಭಿಸಿದೆ.
ನವದೆಹಲಿ: ಸಾಮಾಜಿಕ ಮಾಧ್ಯಮಗಳ ಮೂಲಕ ತನ್ನ ಸುಂದರ ಭಾವಚಿತ್ರಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಂಡು ತನ್ನ ಅಭಿಮಾನಿಗಳನ್ನು ರಂಜಿಸುವ ಬಾಲಿವುಡ್ ನಟಿಯರಲ್ಲಿ ಖ್ಯಾತ ಬಾಲಿವುಡ್ ನಟಿ ಊರ್ವಶಿ ರೌತೆಲಾ ಕೂಡ ಒಬ್ಬರು. ಅಷ್ಟೇ ಅಲ್ಲ ಲಾಕ್ ಡೌನ್ ಅವಧಿಯಲ್ಲಿ ಇದರಿಂದ ತಾನೂ ಕೂಡ ಬೋರ್ ಆಗುವುದರಿಂದ ದೂರ ಉಳಿದು, ಅಭಿಮಾನಿಗಳ ಒತ್ತಡವನ್ನೂ ಕೂಡ ದೂರಗೊಳಿಸುತ್ತಿದ್ದಾಳೆ.
ಹಾಡಿನ ವಿಡಿಯೋ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಊರ್ವಶಿ
ಊರ್ವಶಿ ರೌತೆಲಾ ಇತ್ತೀಚೆಗಷ್ಟೇ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. 2016ರಲ್ಲಿ ಊರ್ವಶಿ ಅಭಿನಯಿಸಿದ 'ಸನಮ್ ರೇ' ಚಿತ್ರದ ಹಾಡಿನ ವಿಡಿಯೋ ತುಣುಕು ಇದಾಗಿದೆ. ಈ ಹಾಡನ್ನು ಇಂಟರ್ನೆಟ್ ಮೇಲೆ 600 ಮಿಲಿಯನ್ ಗೂ ಅಧಿಕ ಬಾರಿಗೆ ವಿಕ್ಷೀಸಲಾಗಿದೆ. ಹೀಗಾಗಿ ಊರ್ವಶಿ ಕೂಡ ತನ್ನ ಈ ವಿಡಿಯೋ ಅನ್ನು ಇನ್ಸ್ಟಾಗ್ರಾಮ್ ಮೇಲೆ ಥ್ರೋಬ್ಯಾಕ್ ಮಾಡಿದ್ದಾಳೆ.
ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಊರ್ವಶಿ ರೌತೆಲಾ ಹಂಚಿಕೊಂಡ ಈ ವಿಡಿಯೋ ಇದುವರೆಗೆ ಸುಮಾರು 23 ಲಕ್ಷಕ್ಕೂ ಅಧಿಕ ಬಾರಿಗೆ ವೀಕ್ಷಣೆಗೆ ಒಳಗಾಗಿದೆ. ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆ ಸೆಲಿಬ್ರಿಟಿ ಗಳೂ ಕೂಡ ತಮ್ಮ ತಮ್ಮ ಮನೆಯಲ್ಲಿ ಬಂಧಿಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರೀಯರಾಗಿದ್ದಾರೆ. ಈ ಹಿನ್ನೆಲೆ ಊರ್ವಶಿ ಕೂಡ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸತತವಾಗಿ ಬೋಲ್ಡ್ ಭಾವಚಿತ್ರ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇದ್ದಾಳೆ.