ನೀವು ಅಪೌಷ್ಟಿಕತೆಯಿಂದ ಬಳಲುತ್ತಿದ್ದೀರಾ? ಎಂದು ಕೇಳಿದವನಿಗೆ ವಾಣಿ ನೀಡಿದ ಉತ್ತರ ಇದು
ಬಳಕೆದಾರನಿಗೆ ಖಡಕ್ ಉತ್ತರ ನೀಡಿರುವ ವಾಣಿ ಕಪೂರ್ ನನ್ನ ಬಳಿ ಏನೇ ಇದ್ದರೂ ಅದರಿಂದ ನಾನು ತುಂಬಾ ಖುಷಿಯಾಗಿದ್ದೇನೆ. ನಿಮಗೆ ಇಂಪ್ರೆಸ್ ಮಾಡುವ ಅಗತ್ಯತೆ ನನಗಿಲ್ಲ ಎಂದು ಹೇಳಿದ್ದಾರೆ.
ಮುಂಬೈ: ಹೃತಿಕ್ ರೋಶನ್ ಜೊತೆ 'ವಾರ್' ಚಿತ್ರದಲ್ಲಿ ಕಾಣಿಸಿಕೊಂಡ ವಾಣಿ ಕಪೂರ್ ಯಾವಾಗಲೂ ತಮ್ಮ ಗ್ರ್ಲಾಮರಸ್ ಲುಕ್ ನಿಂದ ಚರ್ಚೆಯಲ್ಲಿರುತ್ತಾರೆ. 'ಬೆಫಿಕ್ರೆ' ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ವಾಣಿ ಕಪೂರ್, ತನ್ನನ್ನು ಟ್ರೊಲ್ ಮಾಡಿರುವ ಇನ್ಸ್ಟಾಗ್ರಾಮ್ ಬಳಕೆದಾರನಿಗೆ ಖಡಕ್ ಉತ್ತರ ನೀಡಿದ್ದಾರೆ. ನಡೆದಿದ್ದು ಇಷ್ಟೇ, ಇತ್ತೀಚೆಗಷ್ಟೇ ವಾಣಿ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಭಾವಚಿತ್ರವೊಂದನ್ನು ಹಂಚಿಕೊಂಡಿದ್ದರು, ಈ ಫೋಟೋನಲ್ಲಿ ವಾಣಿ ಜಿಮ್ ಪೋಷಾಕಿನಲ್ಲಿ ಕಾಣಿಸಿಕೊಂಡಿದ್ದು, ತುಂಬಾ ಫಿಟ್ ಆಗಿ ಕಂಡುಬಂದಿದ್ದಾರೆ.
ವಾಣಿ ಈ ಫೋಟೋ ಹಂಚಿಕೊಳ್ಳುತ್ತಲೇ ಅವರ ಫೋಟೋಗೆ ಕಾಮೆಂಟ್ ಮಾಡಿರುವ ಓರ್ವ ಟ್ರೋಲರ್, "ನೀವು ಅಪೌಷ್ಟಿಕತೆಯಿಂದ ಬಳಲುತ್ತಿದ್ದೀರಾ?" ಎಂದು ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ವಾಣಿ, 'ನೀವು ನಿಮ್ಮ ಜೀವನದಲ್ಲಿ ಫಲ ನೀಡುವ ಕೆಲಸ ಯಾಕೆ ಮಾಡಬಾರದು? ದಯವಿಟ್ಟು ನೀವು ನಿಮ್ಮ ಜೊತೆ ಇಷ್ಟೊಂದು ನಿರ್ದಾಕ್ಷಿಣ್ಯವಾಗಿ ವ್ಯವಹರಿಸಬೇಡಿ. ಜೀವನ ತುಂಬಾ ಸುಂದರವಾಗಿದೆ. ದ್ವೇಷ ಹಬ್ಬಿಸುವುದನ್ನು ನಿಲ್ಲಿಸಿ" ಎಂದಿದ್ದಾರೆ. ಅತ್ತ ಫೋಟೋಗೆ ಕಾಮೆಂಟ್ ಮಾಡಿರುವ ಮತ್ತೋರ್ವ ಟ್ರೋಲರ್ "ನೀವು ಐಫೋನ್ ೧೧ ಯಾಕೆ ಖರೀದಿಸಬಾರದು?" ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿರುವ ವಾಣಿ, ಯಾಕೆ, "ನನ್ನ ಬಳಿ ಏನೇ ಇದ್ದರೂ, ಅದರಲ್ಲೇ ನಾನು ಖುಷಿಪಡುತ್ತೇನೆ. ನಿಮಗೆ ಇಂಪ್ರೆಸ್ ಮಾಡುವ ಅಗತ್ಯತೆ ನನಗಿಲ್ಲ" ಎಂದಿದ್ದಾರೆ. ವಾಣಿ ನೀಡಿರುವ ಈ ಉತ್ತರಗಳಿಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನೀವು ತುಂಬಾ ಕರೆಕ್ಟ ಆಗಿ ಹೇಳಿದ್ದೀರಿ ಎಂದಿದ್ದಾರೆ.
ವಾಣಿ ಅವರ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಬಾಲಿವುಡ್ ಗೆ ಪದಾರ್ಪಣೆ ಮಾಡಿ ಆರು ವರ್ಷಗಳು ಕಳೆದರೂ ಕೂಡ ವಾಣಿ, ಕೇವಲ ಮೂರು ಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ. ಸದ್ಯ ಅವರು ತಮ್ಮ ನಾಲ್ಕನೇ ಚಿತ್ರದ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದಾರೆ. ಸುಶಾಂತ್ ಸಿಂಗ್ ರಾಜಪುತ್ ಅವರು ಅಭಿನಯಿಸಿದ್ದ 'ಶುದ್ಧ ದೇಸಿ ರೋಮಾನ್ಸ್" ಚಿತ್ರದ ಮೂಲಕ ವಾಣಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ ಅವರು ರಣವೀರ್ ಸಿಂಗ್ ಅಭಿನಯದ 'ಬೆಫಿಕ್ರೆ' ಚಿತ್ರದಲ್ಲಿ ಕಾಣಿಸಿಕೊಂಡಿದ್ದು , ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನೆಲಕಚ್ಚಿತ್ತು. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಮತ್ತು ಹೃತಿಕ್ ರೋಶನ್ 'ವಾರ್' ಚಿತ್ರದಲ್ಲಿ ವಾಣಿ ಕಾಣಿಸಿಕೊಂಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಕತ್ ಕಲೆಕ್ಷನ್ ಮಾಡಿತ್ತು.
ವಾಣಿ ಬಾಲಿವುಡ್ ನಲ್ಲಿ ಮೆಲ್ಲಗೆ ಹೆಜ್ಜೆ ಇಡುತ್ತಿದ್ದಾರೆ. ಈ ಕುರಿತು ಮಾತನಾಡುವ ಅವರು, "ತಮ್ಮ ಜೀವನದಲ್ಲಿ ಅಸುರಕ್ಷತೆ ಇನ್ನೂ ತಮ್ಮ ಕದ ತಟ್ಟಿಲ್ಲ. ನಾನು ಮಾಡುವ ಕಾರ್ಯದಲ್ಲಿ ನೂರಕ್ಕೆ ನೂರರಷ್ಟು ಸಮರ್ಪಿತರಾಗುವುದು ನನ್ನ ಉದ್ದೇಶ ಹಾಗೂ ನಾನು ಅದನ್ನೇ ಶೃದ್ಧೆಯಿಂದ ಮಾಡುತ್ತಿರುವುದಾಗಿ" ಹೇಳುತ್ತಾರೆ.