ಬೆಂಗಳೂರು: ಫೆಬ್ರವರಿ 14.. ಈ ದಿನ ಪ್ರೀತಿಯಲ್ಲಿ ಬಿದ್ದಿರೋ ಜೋಡಿಗಳಿಗೆ ಒಂದು ರೀತಿಯಲ್ಲಿ ದಸರಾ ಹಬ್ಬ ಅಂದ್ರೆ ತಪ್ಪಿಲ್ಲ ನೋಡಿ. ಪ್ರೇಮಿಗಳ ದಿನದಂದು ಪರಸ್ಪರ ಪ್ರೀತಿಸೋ ಜೀವಗಳು ಭರ್ಜರಿ ಗಿಫ್ಟ್ ಕೊಡೋದು, ತಮ್ಮ ಪ್ರೀತಿಯನ್ನು ದೊಡ್ಡ ಮಟ್ಟದಲ್ಲಿ ಎಕ್ಸ್ಪ್ರೆಸ್ ಮಾಡೋದನ್ನು ನಾವು ಕಂಡಿರುತ್ತೇವೆ. ಹದಿಹರೆಯದ ವಯಸ್ಸಿನ ಹುಡುಗ-ಹುಡುಗಿಯರು ಮಾತ್ರ ಹೆಚ್ಚು ಸೀರಿಯಸ್ ಆಗಿ ತಗೋಳೋ ದಿನ ಅಂದ್ರೆ ಫೆಬ್ರವರಿ 14.


COMMERCIAL BREAK
SCROLL TO CONTINUE READING

ನಾವಿವತ್ತು ನಿಮಗೆ ಸ್ಯಾಂಡಲ್‍ವುಡ್‍ನಲ್ಲಿ ಪ್ರೀತಿಸಿ ಮದುವೆಯಾಗಿರೋ ಒಂದಷ್ಟು ಲವ್ಲೀ ಕಪಲ್‍ಗಳ ಬಗ್ಗೆ ನಿಮ್ಗೆ ಹೇಳ್ತಾ ಹೋಗ್ತಿವಿ ನೋಡಿ. ಯೆಸ್, KGF ಪಾರ್ಟ್ 1 ಮತ್ತು 2 ಮೂಲಕ ಇಡೀ ಪ್ರಪಂಚವನ್ನೇ ಗೆದ್ದ ನಮ್ಮ ಮೈಸೂರಿನ ಹುಡುಗ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಪ್ರೀತಿಸಿ ಮದುವೆಯಾಗಿ ಅದ್ಭುತ ಜೀವನವನ್ನು ನಡೆಸುತ್ತಿದ್ದಾರೆ. ಒಟ್ಟಿಗೆ ಬಣ್ಣದ ಬದುಕು ಶುರು ಮಾಡಿದ ಈ ಜೋಡಿ ಪ್ರೀತಿಯ ಬಲೆಯಲ್ಲಿ ಬಿದ್ದು ಕುಟುಂಬದ ಒಪ್ಪಿಗೆ ಪಡೆದು ಮದುವೆಯಾದರು. ಈ ಜೋಡಿಯನ್ನು ಇವತ್ತಿಗೂ ಪ್ರತಿಯೊಬ್ಬರೂ ಹೊಗಳುತ್ತಾರೆ. ಯಾಕಂದ್ರೆ ಈ ದಂಪತಿಯ ಪ್ರೀತಿ ಎಲ್ಲರಿಗೂ ಮಾದರಿಯಾಗೋ ರೀತಿಯಿದೆ.


ಇದನ್ನೂ ಓದಿ: Kabzaa Audio Release : ಕಬ್ಜ ಆಡಿಯೋ ರಿಲೀಸ್‌​ಗೆ ಬೃಹತ್​ ವೇದಿಕೆ ಸಿದ್ಧ.! ಎಲ್ಲಿ, ಯಾವಾಗ? ಇಲ್ಲಿ ನೋಡಿ..


ಪ್ರಿಯಾಂಕ ಉಪೇಂದ್ರ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಇವರಿಬ್ಬರೂ ಕೂಡ H2O ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಾರೆ. ಅದಾದ ಬಳಿಕ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದು ಮದುವೆ ಅನ್ನೋ ಬಂಧಕ್ಕೆ ಒಳಗಾಗಿ ಇವತ್ತಿಗೂ ಸುಖ ಜೀವನ ನಡೆಸುತ್ತಿದ್ದಾರೆ. ಇನ್ನು ರಕ್ಷಿತಾ ಟಾಪ್ ಲಿಸ್ಟ್‍ನಲ್ಲಿ ಇದ್ದ ನಟಿ. ಇವರು ಕೂಡ ಡೈರೆಕ್ಟರ್ ಪ್ರೇಮ್ ಅವರ ಜೊತೆ ಲವ್‍ನಲ್ಲಿ ಸಿಲುಕಿ ಒಂದಷ್ಟು ಕಡೆ ಪ್ರೇಮ ಪಕ್ಷಿಗಳಂತೆ ಓಡಾಡಿ ಕುಟುಂಬದ ಸಮ್ಮುಖದಲ್ಲಿ ಮ್ಯಾರೇಜ್ ಆಗೋ ಮೂಲಕ ಸಖತ್ ಆಗಿರೋ ಲೈಫ್ ಲೀಡ್ ಮಾಡುತ್ತಿದ್ದಾರೆ. ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಕೂಡ ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾದ ಜೋಡಿ.


ಪೋಷಕ ಪಾತ್ರಗಳಲ್ಲಿ ನಟಿಸಿ ಜೈ ಅನಿಸಿಕೊಂಡಿದ್ದ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಶಾಯಿ ಕೂಡ ಆ ಕಾಲದಲ್ಲೇ ಪ್ರೀತಿಸಿ ಮದುವೆಯಾದರು. ಮಗಳು ಮೇಘನಾ ರಾಜ್ ಕೂಡ ಚಿರು ಸರ್ಜಾರನ್ನು ಲವ್ ಮಾಡಿ ಮದುವೆಯಾದರು. ಆದರೆ ವಿಧಿಯಾಟಕ್ಕೆ ಚಿರು ಬಲಿಯಾಗಿಬಿಟ್ಟರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜಕುಮಾರ್ ಕೂಡ ಪ್ರೇಮದ ಬಲೆಗೆ ಸಿಲುಕಿ ಮದುವೆಯಾದ ಜೋಡಿ ಅನ್ನೋ ವಿಚಾರ ನಿಮ್ಗೆ ಗೊತ್ತೇ ಇದೆ. ಸಿನಿಮಾ ಸ್ಟೈಲ್‍ನಲ್ಲಿಯೇ ಲವ್ ಮಾಡಿದ ಜೋಡಿ ಅಂದ್ರೆ ನೆನಪಿರಲಿ ಪ್ರೇಮ್ ಮತ್ತು ಅವರ ಪತ್ನಿ ಅಂದ್ರೆ ತಪ್ಪಿಲ್ಲ. ಇವರ ಲವ್ ಸ್ಟೋರಿ ಯಾವ ಸಿನಿಮಾಗೂ ಕಮ್ಮಿ ಇಲ್ಲ ನೋಡಿ. ಈ ಕಪಲ್ ಇವತ್ತಿಗೂ ಅಷ್ಟೇ ಕ್ಯೂಟ್ ಆಗಿ ಸಂಸಾರ ನಡೆಸುತ್ತಿದ್ದಾರೆ.


ಇದನ್ನೂ ಓದಿ: ಮಧ್ಯ ರಾತ್ರಿವರೆಗೂ ಕ್ರೇಜಿಸ್ಟಾರ್ ರವಿಚಂದ್ರನ್ ಎದ್ದು ಕುಳಿತು ಚಿಂತಿಸೋ ವಿಚಾರ ಏನು ಗೊತ್ತಾ...?


ನವರಸ ನಾಯಕ ಜಗ್ಗೇಶ್ ಮತ್ತು ಪ್ರಮೀಳಾ ಅವರ ಪ್ರೇಮ್ ಕಹಾನಿ ಕೂಡ ಯಾವ ಸಿನಿಮಾಗೂ ಕಮ್ಮಿ ಇಲ್ಲ. ಈ ಕ್ಯೂಟ್ ಜೋಡಿ ಕೂಡ ಪ್ರೀತಿಸಿ ಹಸೆಮಣೆ ಏರಿದವರು. ಹೀಗೆ ಹೇಳ್ತಾ ಹೋದ್ರೆ ತುಂಬಾ ಜೋಡಿಗಳು ಚಂದನವನದಲ್ಲಿ ಸಿಗುತ್ತಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.