ಬೆಂಗಳೂರು : ಮಾಜಿ ಮಂತ್ರಿ ನಾಗೇಂದ್ರ ಹಾಗೂ ದದ್ದಲ್ ಮನೆಯಲ್ಲಿ ಇಡಿ ತಲಾಶ್ ಮುಂದುವರೆದಿದೆ. ಮಹತ್ವದ ದಾಖಲೆಗಳನ್ನು  ವಶಪಡಿಸಿಕೊಂಡಿರುವ ಅಧಿಕಾರಿಗಳು, ಅನೇಕ ಪ್ರಶ್ನೆಗಳನ್ನು ನಾಗೇಂದ್ರಗೆ ಕೇಳಿದ್ದಾರೆ. ಆದರೆ ಯಾವುದಕ್ಕೂ ಉತ್ತರವನ್ನು ಕೊಟ್ಟಿಲ್ಲ ನಾಗೇಂದ್ರ. ಇನ್ನೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ಹಣ ಯಾವೆಲ್ಲಾ ಕಂಪನಿಗಳಿಗೆ ಎಷ್ಟೆಷ್ಟು ಹಣ ವರ್ಗಾವಣೆ ಬಗ್ಗೆ ಡಿಟೈಲ್ಸ್ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಶಾಸಕ ಬಸವನಗೌಡ ದದ್ದಲ್ ಮನೆಗಳ ಮೇಲೆ ದಾಳಿ ಮುಂದುವರೆಸಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಿನ್ನೆಯಿಂದ ನಿರಂತರವಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ರಾಮ್ಕಿ ಅಪಾರ್ಟ್ ಮೆಂಟ್ ನ ನಿವಾಸದಲ್ಲಿ ಮೊಕ್ಕಂ ಹೂಡಿರುವ ಅಧಿಕಾರಿಗಳು ನಾಗೇಂದ್ರ ಬಳಸುತ್ತಿದ್ದ ಮೊಬೈಲ್ ಹಾಗೂ ಕಂಪ್ಯೂಟರ್ ನಲ್ಲಿನ ಡೇಟಾ ಸೇರಿ ಇನ್ನಿತರ ಡಿಜಿಟಲ್ ಸಾಕ್ಷ್ಯಾಧಾರಗಳು ಹಾಗೂ ಮಹತ್ವದ ದಾಖಲಾತಿಗಳನ್ನ ವಶಕ್ಕೆ ಪಡೆದು ಕೂಲಂಕುಶವಾಗಿ ಪರಿಶೀಲಿಸಿದ್ದಾರೆ.


ಇದನ್ನೂ ಓದಿ:ಪ್ರೊ.ಎಸ್ ಸಿ.ಶರ್ಮಾ ರವರಿಗೆ ಅಂತಾರಾಷ್ಟ್ರೀಯ ಫೆಲೋಶಿಪ್ ಗೌರವ


ಇನ್ನೊಂದೆಡೆ  ನಾಗೇಂದ್ರ ಮತ್ತಿಕೆರೆಯ ಐಸಿಐಸಿಐ ಬ್ಯಾಂಕ್ ಖಾತೆದಾರರಾಗಿರಾಗಿದ್ದು, ಕಳೆದ ಆರು ತಿಂಗಳಿಂದ ಹಣ ವರ್ಗಾವಣೆ ಮಾಹಿತಿಗಳನ್ನ ತರಿಸಿಕೊಂಡು ಸಿಕ್ಕಿರುವ ದಾಖಲಾತಿ ಪತ್ರಗಳಿಗೂ ತುಲನೆ ಮಾಡಿದ್ದಾರೆ. ಹಣದ ಮೂಲದ ಬಗ್ಗೆ ಮಾಜಿ ಸಚಿವರನ್ನ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಆದರೆ ನಾಗೇಂದ್ರ ಯಾವುದಕ್ಕೂ ಸರಿಯಾಗಿ ಉತ್ತರ ಕೊಟ್ಟಿಲ್ಲ ಎಂಬ ಮಾಹಿತಿ ಇದೆ. ಮತ್ತೊಂದು ಕಡೆ ಬಸನಗೌಡ ದದ್ದಲ್ ಗೂ ಅನೇಕ ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಕೇಳಿದ್ದಾರೆ. ಆದರೆ ಯಾವುದೇ ಸರಿಯಾದ ಉತ್ತರ ದದ್ದಲ್ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ.


ಇನ್ನೂ ಇದೇ‌ ಪ್ರಕರಣದಲ್ಲಿ ನಾಗೇಂದ್ರ ಪ್ಲ್ಯಾಟ್ ನಲ್ಲಿದ್ದ ನಾಗೇಂದ್ರ ಪಿಎ ಹರೀಶ್ ಹಾಗೂ ಪರ್ಸನಲ್ ಸೆಕ್ರೆಟರಿ ದೇವೇಂದ್ರಪ್ಪನನ್ನು ಇ.ಡಿ.‌ಅಧಿಕಾರಿಗಳು  ಕರೆದೊಯ್ದಿದ್ದಾರೆ. ಇವರ ಪಾತ್ರದ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ಮತ್ತೊಂದೆಡೆ ಬಸವನಗೌಡ ದದ್ದಲ್‌ ಸೇರಿ ಆಪ್ತರ ಮನೆಗಳ ಮೇಲೆ‌ ದಾಳಿ ನಡೆಸಿದ್ದ ಅಧಿಕಾರಿಗಳು ರಾಯಚೂರಿನಲ್ಲಿ ದದ್ದಲ್ ಪಿಎ ಆಗಿದ್ದ ಪಂಪಣ್ಣನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಸಂಬಂಧ ಬೆಂಗಳೂರು, ರಾಯಚೂರು ಹಾಗೂ ಬಳ್ಳಾರಿ ಸೇರಿದಂತೆ 18 ಕಡೆಗಳಲ್ಲಿ ದಾಳಿ ನಡೆಸಿದ್ದರು.


ಇದನ್ನೂ ಓದಿ: ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ದೂರಿಗೆ ತ್ವರಿತವಾಗಿ ಸ್ಪಂದಿಸಿ: ಇಂಧನ ಸಚಿವ ಕೆ.ಜೆ.ಜಾರ್ಜ್


ಇನ್ನೊಂದೆಡೆ ನಾಗೇಂದ್ರ ಹಾಗೂ ದದ್ದಲ್ ಅವರನ್ನ ವಿಚಾರಣೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ನೀಡಿರುವ ನೊಟೀಸ್ ಗೆ ಇಂದು ಸಹ ಗೈರಾಗುವುದು ದಟ್ಟವಾಗಿದೆ. ಇ.ಡಿ. ದಾಳಿಗೆ ಒಳಗಾಗಿರುವುದರಿಂದ ಎಸ್ಐಟಿ ವಿಚಾರಣೆ ಬರುವುದು ಅಸಾಧ್ಯವಾಗಿದೆ.‌ ಹೀಗಾಗಿ ಇ.ಡಿ. ದಾಳಿ ಬೆಳವಣಿಗೆ ನೋಡಿಕೊಂಡು ನೊಟೀಸ್ ನೀಡುವ ಬಗ್ಗೆ ಅಧಿಕಾರಿಗಳು ನಿರ್ಧರಿಸಲಿದ್ದಾರೆ.


ನಿಮಮದ ಕೋಟ್ಯಾಂತರ ರೂಪಾಯಿ ಹಣ ಹೈದ್ರಾಬಾದ್ ನ ಫಸ್ಟ್ ಬ್ಯಾಂಕ್ ಫೈನಾನ್ಸ್ ಬ್ಯಾಂಕ್ ಗೆ ವರ್ಗಾವಣೆಯಾಗಿದೆ.‌ನಂತರ ಇದೇ ವರ್ಷದ ಮಾರ್ಚ್ ತಿಂಗಳ 5 ರಿಂದ 30 ತಾರೀಖಿನಿನವರೆಗೆ 18 ಬೇರೆ ಬೇರೆ ಕಂಪನಿಗಳ ಅಕೌಂಟ್ ಗೆ ವರ್ಗಾವಣೆಯಾಗಿದೆ.. ಹಾಗಾದ್ರೆ ಅವು ಯಾವ ಖಾತೆಗಳು,ಮತ್ತು ಕಂಪನಿಗಳು,ಹಣ ಎಂಬುದನ್ನು ನೋಡುವುದಾದರೆ


ಮಾರ್ಚ್ 5 - ಜೈಲೆಂಟ್ ಟ್ರೈನಿಂಗ್ ಅಂಡ್ ಕನ್ಸಲ್ ಟಿಂಗ್ ಸರ್ವಿಸ್- 4, 97 ಕೋಟಿ
ಮಾರ್ಚ್ 5-  ಫೀಪ್ಯುಮ್ಸ್  ಮ್ಯಾನೇಜ್ ಮೆಂಟ್ 5.35 ಕೋಟಿ
ಮಾ.7 ಅಕಾರ್ಡ್ ಬಿಸಿನೆಸ್ ಸರ್ವೀಸ್ - 5.46 ಕೋಟಿ
ಮಾ.7 ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜಿಸ್ ಲಿಮಿಟೆಡ್ - 4. 53 ಕೋಟಿ
ಮಾರ್ಚ್ 7 - ಮನು ಎಂಟರ್ಪ್ರೈಸಸ್ - 5.01 ಕೋಟಿ 
ಮಾರ್ಚ್ 7-  ವೈಎಂ ಎಂಟರ್ ಪ್ರೈಸಸ್ - 4.98 ಕೋಟಿ
ಮಾರ್ಚ್ 11- ವೋಲ್ಟಾ ಟೆಕ್ನಾಲಜಿಸ್ ಸರ್ವೀಸಸ್ - 5.12 ಕೋಟಿ
ಮಾರ್ಚ್ 11 - ನಿತ್ಯಾ ಸೆಕ್ಯುರಿಟಿ ಸರ್ವೀಸ್ - 4. 47 ಕೋಟಿ
ಏಪ್ರಿಲ್ 23- V6 ಬ್ಯುಸಿನೆಸ್ ಸರ್ವಿಸಸ್‌‌‌ - 4.50 ಕೋಟಿ
ಮೇ - 6-  MQ Talequ ಸಾಫ್ಟ್ ವೇರ್ ಇಂಡಿಯಾ ಪ್ರೈವೇಟ್  ಲಿಮಿಟೆಡ್ - 5.10 ಕೋಟಿ
ಮಾರ್ಚ್ -30 - ಸಿಸ್ಟಮ್ ಅಂಡ್ ಸರ್ವಿಸಸ್ ಕಂಪೆನಿ - 4‌.55 ಕೋಟಿ.
ಮಾರ್ಚ್ 30 - ರಾಮ್ ಎಂಟರ್‌ಪ್ರೈಸಸ್ -  5.07 ಕೋಟಿ
ಮಾರ್ಚ್ 30- ಸ್ಕಿಲ್ ಮ್ಯಾಪ್ ಟ್ರೈನಿಂಗ್ & ಸರ್ವಿಸಸ್ ಪ್ರೈ. ಲಿಮಿಟೆಡ್ 4‌.84 ಕೋಟಿ
ಮಾರ್ಚ್ 30- ಸ್ವಾಪ್‌ ಡಿಸೈನ್ ಪ್ರೈವೇಟ್ ಲಿಮಿಟೆಡ್ 5.15 ಕೋಟಿ
ಮಾರ್ಚ್ 30 - ಜಿ.ಎನ್ ಇಂಡಸ್ಟ್ರೀಸ್ - 4.42 ಕೋಟಿ
ಮಾರ್ಚ್ - 30 - ನಾವೆಲ್ ಸೆಕ್ಯುರಿಟಿ ಸರ್ವಿಸಸ್ ಪ್ರೈ. ಲಿ. - 4‌.56 ಕೋಟಿ
ಮಾರ್ಚ್ 30- ಸುಜಲ್ ಎಂಟರ್‌ಪ್ರೈಸಸ್ - 5.63 ಕೋಟಿ
ಮಾರ್ಚ್ 30- ಗ್ರಾಬ್ ಎ ಗ್ರಬ್ ಸರ್ವಿಸಸ್ ಪ್ರೈ. ಲಿ. - 5.88 ಕೋಟಿ ರೂ ಹಣವನ್ನು ವರ್ಗಾವಣೆ ಮಾಡಲಾಗಿದೆ.


ಒಟ್ಟಿನಲ್ಲಿ ಇದುರುವರೆಗೂ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎನ್ನುತ್ತಿದ್ದ ನಾಗೇಂದ್ರ ಹಾಗೂ ಬಸನಗೌಡ ದದ್ದಲ್ ಈಗ ಇಡಿ ಕುಣಿಕೆಯಲ್ಲಿ  ಸಿಲುಕಿದ್ದಾರೆ. ಮುಂದೆ ಪ್ರಕರಣದಲ್ಲಿ ಇಬ್ಬರು ನಾಯಕರು ಭಾಗಿಯಾಗಿದ್ರು ಎಂಬುದು ಕನ್ಫರ್ಮ್ ಆದರೆ ಇಬ್ಬರನ್ನು ಅಧಿಕಾರಿಗಳು ಬಂಧಿಸುವುದಂತೂ ಸುಳ್ಳಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.