ನವದೆಹಲಿ: ಬಾಲಿವುಡ್ ನಾಯಕರು ಕಂಗನಾ ರಣಾವತ್ ಜೊತೆ 'ಪಂಗಾ'(ಪೈಪೋಟಿ) ತೆಗೆದುಕೊಳ್ಳುವುದು ಹೊಸ ವಿಷಯವೇನಲ್ಲ. ಆದರೆ, ಈ ಬಾರಿ ಇದರಲ್ಲಿ ಒಂದು ಹೊಸ ಹೆಸರು ಶಾಮೀಲಾಗಿದ್ದು, ಈ ಬಾರಿ ಬೇರೆ ಯಾರೂ ಅಲ್ಲ, ನಮ್ಮ 'ಕೂಲಿ ನಂ.1', 'ಸ್ಟ್ರೀಟ್ ಡ್ಯಾನ್ಸರ್' ವರುಣ್ ಧವನ್ ಕಂಗನಾ ಜೊತೆ 'ಪಂಗಾ' ತೆಗೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಹೆದರಬೇಡಿ, ಇದು ವೈಯಕ್ತಿಕ 'ಪಂಗಾ' ಅಲ್ಲ. ಕೇವಲ ಪ್ರಚಾರಕ್ಕಾಗಿ ಮಾತ್ರ. ವಿಷಯ ಏನೂಂದ್ರೆ ಕಂಗನಾ ರಣಾವತ್ ಅವರ ಮುಂಬರುವ ಚಿತ್ರ 'ಪಂಗಾ'  ಹಾಗೂ ವರುಣ್ ಧವನ್ ಅವರ ಬಹುನಿರೀಕ್ಷಿತ ಚಿತ್ರ 'ಸ್ಟ್ರೀಟ್ ಡ್ಯಾನ್ಸರ್ 3ಡಿ' ಇದೀಗ ಬಾಕ್ಸ್ ಆಫೀಸ್ ನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿವೆ. ಎರಡೂ ಚಿತ್ರಗಳೂ ಬೆಳ್ಳಿ ಪರದೆಯ ಮೇಲೆ ಒಂದೇ ದಿನ ಬಿಡುಗಡೆಯಾಗಲಿವೆ. 



ಕಂಗನಾ ವಿಷಯಕ್ಕೆ ಬಂದರೆ, ಕಂಗನಾ ತಮ್ಮ ಸಂಪೂರ್ಣ ಚಿತ್ರದ ಜವಾಬ್ದಾರಿಯನ್ನು ತಮ್ಮ ಹೆಗಲಿಗೇರಿಸಿ ಮುನ್ನಡೆಯುತ್ತಾರೆ. ಓರ್ವ ನಟಿಯಾಗಿ ಕಂಗನಾ ತಮ್ಮ ಸಂಪೂರ್ಣ ಜವಾಬ್ದಾರಿ ನಿಭಾಯಿಸುತ್ತಾರೆ. ಆದರೆ, ಈ ವೃತ್ತಿಪರ ಹೋರಾಟದಲ್ಲಿ ವರುಣ್ ಧವನ್ ಕೂಡ ಯಾವುದೇ ಕೊರತೆ ಎದುರಾಗದಂತೆ ಕಾಳಜಿವಹಿಸುತ್ತಿದ್ದಾರೆ.



ಕಂಗನಾ ಅಭಿನಯದ 'ಪಂಗಾ' ಹಾಗೂ ವರುಣ್ ಧವನ್ ಮತ್ತು ಶ್ರದ್ಧಾ ಕಪೂರ್ ಅಭಿನಯದ 'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರಗಳು ಜನವರಿ 24, 2020ಕ್ಕೆ ಬಿಡುಗಡೆಯಾಗಲಿವೆ.