Cini Couples: ಬೆಳ್ಳಿ ತೆರೆಯಲ್ಲಿ ಜೋಡಿಯಾಗಿ ನಟಿಸಿ ನಿಜ ಜೀವನದಲ್ಲಿಯೂ ಸಂಗಾತಿಯಾದ ಎಷ್ಟೋ ನಟ ನಟಿಯರ ಪಟ್ಟಿ ಇಲ್ಲಿದೆ..


COMMERCIAL BREAK
SCROLL TO CONTINUE READING

ನಾಗ ಚೈತನ್ಯ ಸಮಂತಾ: ಸಾಕಷ್ಟು ಹಿಟ್‌ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ.. ನಂತರ ಪ್ರೀತಿಸಿ ಮದುವೆಯಾದ ಜೋಡಿ ಇದು. ಆದರೆ ಈ ಸಂಬಂಧ ಹೆಚ್ಚು ಕಾಲ ಉಳಿಯದೇ ಅಕ್ಟೋಬರ್ 2, 2021 ರಂದು ವಿಚ್ಛೇದನ ಪಡೆದಿದ್ದಾರೆ. 


ಮಹೇಶ್ ಬಾಬು - ನಮ್ರತಾ: ವಂಶಿ ಚಿತ್ರದಲ್ಲಿ ಮಹೇಶ್ ಬಾಬು ಮತ್ತು ನಮ್ರತಾ ಕೂಡ ಒಟ್ಟಿಗೆ ನಟಿಸಿದ್ದರು. ಇದಾದ ನಂತರ ಇವರಿಬ್ಬರ ಪ್ರೀತಿ ಮದುವೆಯೊಂದಿಗೆ ಸುಖಾಂತ್ಯವಾಯಿತು. ಈ ಚಿತ್ರದಲ್ಲಿ ದಿವಂಗತ ಸೂಪರ್ ಸ್ಟಾರ್ ಕೃಷ್ಣ ಕೂಡ ನಟಿಸಿದ್ದಾರೆ. 


ಇದನ್ನೂ ಓದಿ-ʼಇಂಡಿಯನ್‌ 2ʼ ಇಂಟ್ರೋ ಔಟ್:‌ ಕಮಲ್‌ಗೆ ರಜನಿ ಸಾಥ್‌


ಪವನ್ ಕಲ್ಯಾಣ್ - ರೇಣು ದೇಸಾಯಿ: ‘ಬದ್ರಿ’ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದ ಈ ಇಬ್ಬರು.. ‘ಜಾನಿ’ ಸಿನಿಮಾದಲ್ಲಿಯೂ ನಟಿಸಿದ್ದರು. ನಂತರ ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿ ಆಮೇಲೆ ವಿವಾಹವಾಗಿ ಕೆಲವೇ ದಿನಗಳಲ್ಲಿ ವಿಚ್ಚೇಧನ ಪಡೆದರು.


ಸೂರ್ಯ - ಜ್ಯೋತಿಕಾ: ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಸೂರ್ಯ ಮತ್ತು ಜ್ಯೋತಿಕಾ ಮದುವೆಯಾಗಿ ಯಶಸ್ಸಿನ ಜೀವನ ನಡೆಸುತ್ತಿದ್ದಾರೆ.


ಸುಹಾಸಿನಿ - ಮಣಿರತ್ನಂ: ಮಣಿರತ್ನಂ ಕೂಡ ಸುಹಾಸಿಯನ್ನು ಪ್ರೀತಿಸಿ ಮದುವೆಯಾದರು. ಮಣಿರತ್ನಂ ನಿರ್ದೇಶಕರಾದರೆ... ಸುಹಾಸಿನಿ ನಾಯಕಿ 


ಅಂಬರೀಶ್ - ಸುಮಲತಾ: ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದ ಅಂಬರೀಶ್ ಸುಮಲತಾ ಕೂಡ ಪ್ರೀತಿಸಿ ಮದುವೆಯಾಗಿದ್ದರು. 


ಇದನ್ನೂ ಓದಿ-Lavanya Tripathi: ಮದುವೆಗೆ ಲಾವಣ್ಯ ಉಟ್ಟಿದ್ದ ರೇಷ್ಮೆ ಸೀರೆಯ ಬೆಲೆ ಎಷ್ಟು ಗೊತ್ತಾ?


ವಿಷ್ಣು ವರ್ಧನ್ - ಭಾರತಿ: ಕನ್ನಡದ ದಿವಂಗತ ಸೂಪರ್‌ಸ್ಟಾರ್ ವಿಷ್ಣು ವರ್ಧನ್ ಮತ್ತು ಭಾರತಿ ಕೂಡ ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ ನಂತರ ಪ್ರೀತಿಸಿ ಮದುವೆಯಾದರು. 


ಯಶ್ - ರಾಧಿಕಾ ಪಂಡಿತ್: ಯಶ್ ಸ್ಟಾರ್ ಹೀರೋ ಆಗುವ ಮುನ್ನ.. ರಾಧಿಕಾ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರೂ ಅನೇಕ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆ ನಂತರ ಇಬ್ಬರೂ ಜೀವನ ಸಂಗಾತಿಗಳಾದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.