ಬೆಂಗಳೂರು: ತಮ್ಮ ಅಮೋಘ ಅಭಿನಯ ಹಾಗೂ ಕಂಚಿನ ಕಂಠದ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರಕ್ಕೆ "ವಿಐಪಿ" ಎಂದು ಹೆಸರಿಡಲಾಗಿದೆ. ಮಕರ ಸಂಕ್ರಾಂತಿ ಹಬ್ಬದ ಪರ್ವಕಾಲದಲ್ಲಿ ಈ ನೂತನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ.


COMMERCIAL BREAK
SCROLL TO CONTINUE READING

ಕಲಾ ಸೃಷ್ಟಿ ಪ್ರೊಡಕ್ಷನ್ಸ್ ನಿರ್ಮಾಣದ, ಬ್ರಹ್ಮ ನಿರ್ದೇಶನದ ಈ ಚಿತ್ರವು ವಿಭಿನ್ನ ಕಥಾಹಂದರವನ್ನು ಹೊಂದಿದೆ. ಮತ್ತೊಂದು ವಿಶೇಷವೆಂದರೆ "ವಿಐಪಿ" ಅಭಿಮಾನಿಗಳು ವಸಿಷ್ಠ ಸಿಂಹ ಅವರಿಗೆ ರಾಯಲ್ ಸ್ಟಾರ್ ಎಂಬ ಬಿರುದು ನೀಡಿದ್ದಾರೆ. ವಸಿಷ್ಠ ಸಿಂಹ ಈ ಚಿತ್ರದಿಂದ ರಾಯಲ್ ಸ್ಟಾರ್ ವಸಿಷ್ಠ ಸಿಂಹ ಆಗಿ ಮಿಂಚಲಿದ್ದಾರೆ.


ಇದನ್ನೂ ಓದಿ: Bigg Boss Prathap: ಬೆಂಗಳೂರಿನಲ್ಲಿದೆ ಡ್ರೋನ್ ಪ್ರತಾಪ್ ದೊಡ್ಡ ಮನೆ.. ಹೇಗಿದೆ ನೋಡಿ!


ಬೆಂಗಳೂರಿನ ಸುತ್ತಮುತ್ತಾ "ವಿಐಪಿ" ಚಿತ್ರದ ಚಿತ್ರೀಕರಣ ಅದ್ದೂರಿಯಾಗಿ ಬಿರುಸಿನಿಂದ ಸಾಗಿದೆ. ಕೊಡಗು ಮತ್ತು ಸಕಲೇಶಪುರದಲ್ಲೂ ಚಿತ್ರೀಕರಣ ನಡೆಯಲಿದೆ. ಕಲಾಸೃಷ್ಠಿ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಈ ಚಿತ್ರಕ್ಕೆ ಅಫ್ಜಲ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ರಾಗಿಣಿ ಅಭಿನಯದ "ಸಾರಿ" ಕರ್ಮ ರಿಟರ್ನ್ಸ್ ಚಿತ್ರದ ನಿರ್ದೇಶಕ ಬ್ರಹ್ಮ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕ್ರೈಮ್ ಥ್ರಿಲ್ಲರ್ ಹಾಗೂ ರಿವೆಂಜ್ ಕಥಾಹಂದರ ಹೊಂದಿರುವ ಈ ಚಿತ್ರವು ಹಾಲಿವುಡ್ ಸ್ಟೈಲ್‍ನಲ್ಲಿ (ನಾನ್ ಲೀನಿಯರ್ ಸ್ಕ್ರೀನ್ ಪ್ಲೇ) ಮೇಕಿಂಗ್ ಇರಲಿದೆ. ಮೋಹನ್ ಕುಮಾರ್ "ವಿಐಪಿ" ಚಿತ್ರಕ್ಕೆ ಕಥೆ ಬರೆದಿದ್ದಾರೆ.


ಇದನ್ನೂ ಓದಿ: Emraan Hashmi : ಭಾರತದ ಅತ್ಯಂತ ದುಬಾರಿ 'ರೋಲ್ಸ್ ರಾಯ್ಸ್' ಖರೀದಿಸಿದ ಇಮ್ರಾನ್ ಹಶ್ಮಿ


ಅಫ್ಜಲ್ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.