Vasishta Simha: ಕಂಚಿನ ಕಂಠದ ಗಾಯಕ, ಪ್ರತಿಭಾನ್ವಿತ ನಾಯಕ ವಸಿಷ್ಠ ಸಿಂಹ ಬತ್ತಳಿಕೆಯಲ್ಲಿರುವ ಬಹುನಿರೀಕ್ಷಿತ ʻLove..ಲಿʼ ಸಿನಿಮಾ ಅಂಗಳದಿಂದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ರಕ್ತಸಿಕ್ತ ಕೈಯಲ್ಲಿ ಲಾಂಗ್ ಹಿಡಿದು, ಮತ್ತೊಂದು ಕೈಯಲ್ಲಿ ಧಮ್ ಎಳೆಯುತ್ತಾ, ರಾ ಲುಕ್ ನಲ್ಲಿ ವಸಿಷ್ಠ ಸಿಂಹ ಎಂಟ್ರಿ ಕೊಟ್ಟಿದ್ದು, ಈ ಪೋಸ್ಟರ್ ಗೆ ಚಿತ್ರಾಭಿಮಾನಿಗಳು ಫಿದಾ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಕಳೆದ ಕೆಲ ದಿನಗಳ ಹಿಂದಷ್ಟೇ Love..ಲಿ ಚಿತ್ರದ ಇಂಟ್ರೊಡಕ್ಷನ್ ಸೀನ್ಸ್ ಅದ್ದೂರಿಯಾಗಿ ಮೂಡಿ ಮೂಡಿ ಬಂದಿರುವ ಬಗ್ಗೆ ಮಾಹಿತಿ‌ ಕೊಟ್ಟಿದ್ದ ಚಿತ್ರತಂಡ ಈಗ ಹೊಸ ಪೋಸ್ಟರ್ ವೊಂದನ್ನು ರಿಲೀಸ್ ಮಾಡುವ ಮೂಲಕ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.


ಇದನ್ನೂ ಓದಿ: Vikrant Rona: ‘ಗಡಂಗ್​ ರಕ್ಕಮ್ಮ’ ಎಂಟ್ರಿಗೆ ಡೇಟ್‌ ಫಿಕ್ಸ್.. ಇಲ್ಲಿದೆ ವಿಕ್ರಾಂತ್‌ ರೋಣ ಹೊಸ ಅಪ್‌ಡೇಟ್ಸ್‌


ಮಫ್ತಿ ಸಿನಿಮಾ ನಿರ್ದೇಶಕ ನರ್ತನ್‌ ಜೊತೆಗೆ ಕೆಲಸ ಮಾಡಿರುವ ಅನುಭವ ಇರುವ ಚೇತನ್‌ ಕೇಶವ್‌  ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು love..ಲಿ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ರವೀಂದ್ರ ಕುಮಾರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಹರೀಶ್‌ಕೊಂಬೆ ಕ್ಯಾಮೆರಾ, ಅನೂಪ್‌ ಸಿಳೀನ್‌ ಸಂಗೀತ ಸಂಯೋಜನೆ ಮಾಡಲಿದ್ದಾರೆ.


ಇದನ್ನೂ ಓದಿ:'ತುರ್ತು ನಿರ್ಗಮನ' ಸಿನಿಮಾದಿಂದ ಅಪ್ಪುಗೆ ಗಾನ ನಮನ...ಹೇಗಿದೆ 'ಜೀವ' ಹಾಡು ಕೇಳಿ ಈಗ?


ವಸಿಷ್ಠ ಸಿಂಹ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್​​ಗಳಿವೆ. ಜಯರಾಜ್​ ಜೀವನ ಆಧರಿಸಿ ‘ಹೆಡ್ ಬುಷ್’ ‘ಸಿಂಬಾ’, ‘ಓದೆಲಾ ರೈಲ್ವೇ ಸ್ಟೇಷನ್’ ಸೇರಿ ಹಲವು ಸಿನಿಮಾಗಳಲ್ಲಿ ವಸಿಷ್ಠ ಬ್ಯುಸಿಯಾಗಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.