ಈ ಚಿತ್ರದ ಪ್ರೇರಣೆಯಿಂದ ವೇಗಾ 1308 ಸೌತ್ ಪಾವ್ ಎಂಬ ವಿಶೇಷ ಹೆಲ್ಮೆಟ್ ಲಾಂಚ್ ಮಾಡಿದೆ. ಇದು ಎಗಡೈ ಬಹಳಕೆದಾರರಿಗೆ ಬಹಳಷ್ಟು ಸುಲಭವಾಗಿದೆ. ಈ ಹೆಲ್ಮೆಟ್ ISI ಮತ್ತು DOT ಸರ್ಟಿಫೈಡ್ ಹೊಂದಿದೆ. ಖಾಸಗಿ ಹೋಟೆಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿ ಸಿನಿಮಾ ಬಗ್ಗೆ ಹಾಗೂ ವೇಗಾ ಹೆಲ್ಮೆಟ್ ತಮ್ಮ ಚಿತ್ರಕ್ಕೆ ಬೆಂಬಲವಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ. 


COMMERCIAL BREAK
SCROLL TO CONTINUE READING

ವೇಗಾ ಹೆಲ್ಮಟ್ ಕಂಪನಿ ಮನ್ಮತ್ ಶೆಟ್ಟಿ, ಒಂದು ದಿನಕ್ಕೆ 20 ಸಾವಿರ ಹೆಲ್ಮೆಟ್ ಕಂಪನಿ ಮಾರಾಟ ಮಾಡುತ್ತೇವೆ. ಎಡಗೈ ಬಳಸುವವರಿಗೆ ಸುಲಭವಾಗುವ ರೀತಿ ಹೊಸ ಹೆಲ್ಮೆಟ್ ತಯಾರಿಸಲಾಗಿದೆ. ನಾವು ದಿನನಿತ್ಯ ಹೊಸತನವನ್ನು ಕಲಿಯುತ್ತಿದ್ದೇನೆ. ಅದರಂತೆ ಈ ಪ್ರಾಜೆಕ್ಟ್ ಲಾಂಚ್ ಬಿಡುಗಡೆ ಮಾಡಲಾಗಿದೆ.  ಎಡಗೈ ಬಳಸುವ ಶೇಖಡ ಹತ್ತರಷ್ಟು ಮಂದಿಗೆ ಈ ಹೆಲ್ಮೆಟ್ ಉಪಯೋಗವಾಗಲಿದೆ‌ ಎಂದರು.


ನಿರ್ಮಾಪಕ ಗುರುದತ್ ಗಣಿಗ ಮಾತನಾಡಿ, ಐಡಿಯಾ ಎಲ್ಲಾ ಶುರುವಾಗಿದ್ದು, ಸಮರ್ಥ್ ಅವರಿಂದ. ಇದೊಂದು ವಿಭಿನ್ನ ಕಥೆ. ಈ ರೀತಿ ಸಿನಿಮಾ ಬೇರೆ ಇಂಡಸ್ಟ್ರಿಯಲ್ಲಿ ಬಂದಾಗ ವಾವ್ ಎನ್ನುತ್ತಾರೆ. ಇಂತಹ ಕಥೆಗೆ ನಿರ್ಮಾಪಕರು ಸಿಗಲ್ಲ. ಸ್ನೇಹಿತರು , ಇಡೀ ತಂಡದ ಬೆಂಬಲದಿಂದ ಇಲ್ಲಿವರೆಗೂ ಬಂದಿದ್ದೇವೆ. ನಿರ್ದೇಶಕರು ತುಂಬಾ ಚೆನ್ನಾಗಿ ಕಥೆ ಮಾಡಿದ್ದಾರೆ ಎಂದರು.


ನಿರ್ದೇಶಕ ಸಮರ್ಥ್ ಬಿ ಕಡಕೋಳ್,  ಲಾಕ್ ಡೌನ್ ಟೈಮ್ ನಲ್ಲಿ ಬರೆದ ಕಥೆ ಇದು. ಈ ಕಥೆ ಇಟ್ಕೊಂಡು ಸುಮಾರು ನಿರ್ಮಾಪಕ ಬಳಿ ಹೋದೆ.‌ ಕೊನೆಗೆ ಗುರು ಭೇಟಿಯಾದೆ. ನನ್ನ ಸ್ನೇಹಿತರು, ಮಂಜು ಸರ್ ಬೆಂಬಲದಿಂದ ಸಿನಿಮಾ ಆಗಿದೆ ಎಂದು ತಿಳಿಸಿದರು. 


ಇದನ್ನೂ ಓದಿ-ನಟ ಉಪೇಂದ್ರ ವಿರುದ್ದ 'ಅಟ್ರಾಸಿಟಿ ಕೇಸ್‌' ದಾಖಲು


ನಟ ದಿಗಂತ್ ಮಾತನಾಡಿ, ನಮ್ಮ ಸಿನಿಮಾಗೆ ಸಾಥ್ ಕೊಟ್ಟ ವೇಗಾದವರಿಗೆ ದೊಡ್ಡ ಧನ್ಯವಾದ. ದಿನಕ್ಕೆ 20 ಸಾವಿರ ಹೆಲ್ಮೆಟ್ ಮಾರಾಟವಾಗುತ್ತದೆ. ಅವರು ಹೆಲ್ಮೆಟ್ ಜೊತೆ ನಮ್ಮ ಸಿನಿಮಾ ಕಾರ್ಡ್ ಹಾಕಿ ಎಲ್ಲರಿಗೂ ಪ್ರಮೋಷನ್ ಮಾಡುತ್ತಿದ್ದಾರೆ. ಎಗಡೈ ಬಳಸುವವರಿಗೆ ವೇಗಾ ವಿಶೇಷ ಹೆಲ್ಮೆಟ್ ಲಾಂಚ್ ಮಾಡಿದೆ. ಎಡಗೈ ಅಪಘಾತಕ್ಕೆ ಕಾರಣ ಸಿನಿಮಾದ ಕಥೆ ಅದ್ಭುತವಾಗಿದೆ. ಒಂದೊಳ್ಳೆ ತಂಡದ ಜೊತೆ ಒಳ್ಳೆ ಪ್ರಯತ್ನ ಮಾಡಿದ್ದೇವೆ ಎಂಬ ಆಶೀರ್ವಾದ ಇರಲಿ ಎಂದರು.


ದೂದ್ ಪೇಡಾ ದಿಗಂತ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಕಾನ್ಸೆಪ್ಸ್ ‘ವೇಗ’ ಹೆಲ್ಮೆಟ್ ಕಂಪನಿಯವರಿಗೆ ಇಷ್ಟವಾಗಿದ್ದು, ಅವರು ಈ ವಿಶೇಷ ಹೆಲ್ಮೆಟ್ ಮೂಲಕ ಚಿತ್ರತಂಡದ ಜತೆ ಕೈಜೋಡಿಸಿದ್ದಾರೆ. ಅಂದಹಾಗೆ ಇಂಥದ್ದೊಂದು ಹೆಲ್ಮೆಟ್ ರೂಪಿಸಿ ಮಾರುಕಟ್ಟೆಗೆ ಬಿಡುಗಡೆ ಆಗುತ್ತಿರುವುದು ಇದೇ ಮೊದಲು. 


ಸಮರ್ಥ್ ಬಿ. ಕಡಕೊಳ್ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾಹಂದರ ಈ ಚಿತ್ರದಲ್ಲಿದೆ. ಹೆಸರೇ ಹೇಳುವಂತೆ ಇದು ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರ. ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ನವನಟಿ ಧನು ಹರ್ಷ ನಟಿಸುತ್ತಿದ್ದು, ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.


ಹೈಫನ್ ಪಿಕ್ಚರ್ಸ್ ಬ್ಯಾನರ್​​ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಈ ಸಿನಿಮಾಗಿದೆ.


ಇದನ್ನೂ ಓದಿ-Jailer: ನಿಲ್ಲದ ಜೈಲರ್‌ ಆರ್ಭಟ, ಪಾರ್ಟ್‌ 2ಕ್ಕೆ ಶಿವಣ್ಣನೇ ಬೇಕೆಂದ ತಮಿಳು ಮಂದಿ; ಕನ್ನಡಿಗರಿಗೆ ಇದೇ ಸಾರ್ಥಕಕ್ಷಣವೆಂದ ಫ್ಯಾನ್ಸ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.