ಬೆಂಗಳೂರು: ಒಂದು ಸಿನಿಮಾಗೆ ಕಥೆ ಹೇಗೆ ಮುಖ್ಯವೋ, ಅದೇ ರೀತಿ ಟೈಟಲ್‌ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಹೀಗೆ ವಿಭಿನ್ನ ಟೈಟಲ್‌ ಅಡಿ, ವಿಭಿನ್ನ ಕಥೆ ಹೊಂದಿರುವ ಸಿನಿಮಾಗಳು ಬೆಳ್ಳಿತೆರೆ ಮೇಲೆ ಸಖತ್‌ ಸೌಂಡ್‌ ಮಾಡುತ್ತಿವೆ. ಕನ್ನಡದಲ್ಲಿ ಇಂತಹ ಸಾಲು ಸಾಲು ಸಿನಿಮಾಗಳು ಬೆಳ್ಳಿತೆರೆ ಮೇಲೆ ಮೋಡಿ ಮಾಡುತ್ತಿದ್ದು, ಈ ಸಾಲಿಗೆ ‘ಶ್ರೀರಂಗ’ ಕೂಡ ಸೇರ್ಪಡೆ ಆಗಿದೆ.


COMMERCIAL BREAK
SCROLL TO CONTINUE READING

ವೆಂಕಟ್ ಭಾರಧ್ವಾಜ್ ಸಾರಥ್ಯದಲ್ಲಿ ‘ಶ್ರೀರಂಗ’ ಸಿನಿಮಾ ಟ್ರೇಲರ್ ರಿಲೀಸ್ ಆಗಿದ್ದು, ಜುಲೈ 22ಕ್ಕೆ ಬೆಳ್ಳಿತೆರೆಗೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ವಿಭಿನ್ನ ಶೀರ್ಷಿಕೆ, ವಿಭಿನ್ನ ಪೋಸ್ಟರ್‌ಗಳ ಮೂಲಕ ಕುತೂಹಲ ಹೆಚ್ಚಿಸಿದ್ದ ವೆಂಕಟ್ ಭಾರಧ್ವಾಜ್ ಸಾರಥ್ಯದ ‘ಶ್ರೀರಂಗ’ ಟ್ರೇಲರ್ ನೋಡುಗರಿಗೂ ಇಷ್ಟವಾಗುತ್ತಿದೆ. ಕಾಮಿಡಿ ಜೊತೆ ಕ್ರೈಂ ಥ್ರಿಲ್ಲರ್ ಅಂಶವನ್ನು ‘ಶ್ರೀರಂಗ’ ಚಿತ್ರ ಒಳಗೊಂಡಿದೆ. ಹೀಗಾಗಿ ಟ್ರೇಲರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.


ಇದನ್ನೂ ಓದಿ: ಡಾ.ಪುನೀತ್ ರಾಜಕುಮಾರ್ ರ 'ಗಂಧದ ಗುಡಿ' ಅಕ್ಟೋಬರ್ 28ಕ್ಕೆ ಬಿಡುಗಡೆ


ತಾಂತ್ರಿಕ ವರ್ಗ ಮುಖ್ಯ


‘ಶ್ರೀರಂಗ’ ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ವೆಂಟಕ್ ಭಾರಧ್ವಾಜ್, ‘ಒಬ್ಬರ ಕೈಯಲ್ಲಿ ಸಿನಿಮಾ ಮಾಡಲು ಆಗುವುದಿಲ್ಲ. ತಾಂತ್ರಿಕ ವರ್ಗ, ಕಲಾ ವರ್ಗ ಎಲ್ಲರೂ ಕೂಡಿದಾಗ ಮಾತ್ರ ಸಿನಿಮಾ ಆಗುತ್ತೆ. ಶಂಕರ್ ರಾಮನ್ ಡೈಲಾಗ್ ಅದ್ಭುತವಾಗಿದೆ. ಸಿನಿಮಾದಲ್ಲಿ ಸುನಿಲ್ ವಾಯ್ಸ್ ಇದ್ದು, ಪ್ರತಿಯೊಬ್ಬರು ಬೆಂಬಲ ನೀಡಿ’ ಎಂದು ಮನವಿ ಮಾಡಿದರು.


Kiccha Sudeep: 13 ವರ್ಷಗಳ ಬಳಿಕ ‘ಅಭಿನಯ ಚಕ್ರವರ್ತಿ’ ಸುದೀಪ್ ದೆಹಲಿಗೆ ಹೋಗಿದ್ದೇಕೆ?


‘ಶ್ರೀರಂಗ’ ಸಿನಿಮಾದ ತಾಂತ್ರಿಕ ವರ್ಗವನ್ನು ನೋಡೋದಾದ್ರೆ, ಮಿಥುನ್ ಛಾಯಾಗ್ರಾಹಣ, ಚಂದನ್ ಸಂಕಲನ, ಶಂಕರ್ ರಾಮನ್ ಸಂಭಾಷಣೆ, ಸಮೀರ್ ಕುಲಕರ್ಣಿ ಸಂಗೀತ, ಕನ್ನಡದ ಟಾಪ್ ರ್ಯಾಪರ್ ವಿರಾಜ್ ಕನ್ನಡಿಗ, ಅವಿನಾಶ್ ಛೆಬ್ಬಿ, ಚೈತ್ರಾ ನಾಣಯ್ಯ ಹಾಡುಗಳಿಗೆ ಧ್ವನಿಯಾಗಿದ್ದಾರೆ. ರುತು ಕ್ರಿಯೇಷನ್ ನಡಿ ಸುಮಾ ಸಿಆರ್ ನಿರ್ಮಾಣ ಮಾಡಿದ್ದು, ಬಿಎಂ ದಿಲೀಪ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.