ಮುಂಬೈ: ಹಿರಿಯ ನಟಿ ಡಿಂಪಲ್ ಕಪಾಡಿಯಾ ಅವರ ತಾಯಿ ಬೆಟ್ಟಿ ಕಪಾಡಿಯಾ ಅವರು ತಮ್ಮ 80 ನೇ ವಯಸ್ಸಿನಲ್ಲಿ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು ಸುದ್ದಿ ಮೂಲಗಳು ತಿಳಿಸಿವೆ 


COMMERCIAL BREAK
SCROLL TO CONTINUE READING

ಬೆಟ್ಟಿ ಕಪಾಡಿಯಾ ಅವರಿಗೆ ಉಸಿರಾಟದ ತೊಂದರೆ ಇರುವುದು ಪತ್ತೆಯಾದ ನಂತರ 20 ದಿನಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟ ಅಕ್ಷಯ್ ಕುಮಾರ್, ಟ್ವಿಂಕಲ್ ಖನ್ನಾ, ಡಿಂಪಲ್ ಮತ್ತು ಕರಣ್ ಕಪಾಡಿಯಾ ಅವರನ್ನು ಶನಿವಾರ ಆಸ್ಪತ್ರೆಯ ಹೊರಗೆ ಕಾಣಸಿಕೊಂಡಿದ್ದರು.


ಈ ವರ್ಷದ ಅಕ್ಟೋಬರ್‌ನಲ್ಲಿ ಬೆಟ್ಟಿಯ 80 ನೇ ಹುಟ್ಟುಹಬ್ಬವನ್ನು ಆಚರಿಸಲು ಕುಮಾರ್ಸ್ ಮತ್ತು ಕಪಾಡಿಯ ಪುಣೆಗೆ ತೆರಳಿದ್ದರು.  ಈ ಫೋಟೋವನ್ನು ಟ್ವಿಂಕಲ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. 


ಅನೇಕ ಸಂದರ್ಭಗಳಲ್ಲಿ, ಟ್ವಿಂಕಲ್ ಅವರು ಆಸ್ಪತ್ರೆಯ ಹೊರಗೆ ಕಂಡಿರುವ ಹಿನ್ನಲೆಯಲ್ಲಿ ಬಹುತೇಕರು ಅವರ ತಾಯಿ ಡಿಂಪಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವದಂತಿಗೆ ಕಾರಣವಾಯಿತು. ಆದರೆ  ಹಿರಿಯ ನಟಿ ಸಂದರ್ಶನವೊಂದರಲ್ಲಿ ಅವರು ಸಂಪೂರ್ಣವಾಗಿ ಉತ್ತಮವಾಗಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಿದ್ದರು.