81ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಬಾಲಿವುಡ್ ಹಿರಿಯ ನಟ ಕಾದರ್ ಖಾನ್
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾದರ್ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ನ ಖ್ಯಾತ ನಟ, ಹಾಸ್ಯನಟ, ಮತ್ತು ಚಿತ್ರಕಥೆಗಾರ ಕಾದರ್ ಖಾನ್ ಕೆನಡಾದ ಟೊರೊಂಟೊದ ಆಸ್ಪತ್ರೆಯಲ್ಲಿ ಮಂಗಳವಾರ ತನ್ನ ಕೊನೆಯುಸಿರೆಳೆದಿದ್ದಾರೆ.
ಕಳೆದ ಹಲವಾರು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಕದರ್ ಖಾನ್ ಅವರ ಮಗ ಸರ್ಫರಾಜ್ ಕಾದರ್ ಖಾನ್ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಸುದ್ದಿ ಸಂಸ್ಥೆ ಐಎಎನ್ಎಸ್ ಪ್ರಕಾರ, ಸುಮಾರು 4 ಗಂಟೆಗೆ ಕೆನಡಾದ ಟೊರೊಂಟೊದಲ್ಲಿ ಬೆಳಿಗ್ಗೆ ಕಾದರ್ ಖಾನ್ ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಇಂದು ಟೊರೊಂಟೊದಲ್ಲಿ ಮಾಡಲಾಗುವುದು.
ವರದಿಗಳ ಪ್ರಕಾರ, 81ರ ಹರೆಯದ ಕಾದರ್ ಖಾನ್ ಪ್ರೋಗ್ರೆಸಿವ್ ಸೂಪರ್ನ್ಯೂಕ್ಲಿಯರ್ ಪಾಲಿಸಿ ಡಿಸಾರ್ಡರ್ ನಿಂದ ಬಳಲುತ್ತಿದ್ದರು.