ಹಿರಿಯ ನಟಿ ಶಬಾನಾ ಅಜ್ಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಆಸ್ಪತ್ರೆಯಲ್ಲಿ ಸುಮಾರು ಎರಡು ವಾರಗಳ ಚಿಕಿತ್ಸೆ ನಂತರ ಬಾಲಿವುಡ್ ನ ಹಿರಿಯ ನಟಿ ಶಬಾನಾ ಅಜ್ಮಿ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ನವದೆಹಲಿ: ಆಸ್ಪತ್ರೆಯಲ್ಲಿ ಸುಮಾರು ಎರಡು ವಾರಗಳ ಚಿಕಿತ್ಸೆ ನಂತರ ಬಾಲಿವುಡ್ ನ ಹಿರಿಯ ನಟಿ ಶಬಾನಾ ಅಜ್ಮಿ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ 2020 ರ ಜನವರಿ 18 ರಂದು ಖಲಾಪುರ ಟೋಲ್-ಪ್ಲಾಜಾ ಬಳಿ ತನ್ನ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದ್ದರಿಂದಾಗಿ ಶಬಾನಾ ಅಜ್ಮಿ ಗಾಯಗೊಂಡಿದ್ದರು.ಇದಾದ ನಂತರ ಅವರನ್ನು ನವೀ ಮುಂಬಯಿಯ ಕಾಮೋಥೆಯಲ್ಲಿರುವ ಮಹಾತ್ಮ ಗಾಂಧಿ ಮಿಷನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಎಂಜಿಎಂ-ಎಂಸಿಎಚ್) ಕರೆದೊಯ್ಯಲಾಯಿತು ಮತ್ತು ನಂತರ ಮುಂಬೈನ ಅಂಧೇರಿಯಲ್ಲಿರುವ ಕೋಕಿಲಾಬೆನ್ ಧಿರುಭಾಯ್ ಅಂಬಾನಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಸುಮಾರು 13 ದಿನಗಳವರೆಗೆ ದಾಖಲಾದ ನಂತರ, ಹಿರಿಯ ನಟಿಯನ್ನು ಇಂದು ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ನಟಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯಲು ಸಲಹೆ ನೀಡಲಾಗಿದೆ.ಕಾರು ಅಪಘಾತದಲ್ಲಿ ಶಬಾನಾ ಅಜ್ಮಿ ತೀವ್ರವಾಗಿ ಗಾಯಗೊಂಡಿದ್ದರು. ಪತಿ ಮತ್ತು ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಸಹ ಅಪಘಾತದ ಸಮಯದಲ್ಲಿ ಅವರೊಂದಿಗೆ ಪ್ರಯಾಣಿಸುತ್ತಿದ್ದರು.ಹಲವಾರು ಪ್ರಮುಖ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಶಬಾನಾ ಅಜ್ಮಿ ಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.