Zara Hatke Zara Bachke : ವಿಕ್ಕಿ - ಸಾರಾ ಸಿನಿಮಾಗೆ ಪ್ರೇಕ್ಷಕನ ಮೆಚ್ಚುಗೆ..! ವಾರಾಂತ್ಯದಲ್ಲಿ 22 ಕೋಟಿ ರೂ. ಗಳಿಕೆ
Zara Hatke Zara Bachke`s 2-day collection : ʼಜರಾ ಹಟ್ಕೆ ಜರಾ ಬಚ್ಕೆʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಚಿತ್ರವು ಸಿನಿ ರಸಿಕರ ಹೃದಯ ಗೆಲ್ಲುತ್ತಿದೆ. ಶನಿವಾರ ಈ ಸಿನಿಮಾ ಒಟ್ಟು 7.29 ಕೋಟಿ ಗಳಿಕೆ ಕಂಡಿದೆ.
Zara Hatke Zara Bachke boxoffice : ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ನಟನೆಯ ʼಜರಾ ಹಟ್ಕೆ ಜರಾ ಬಚ್ಕೆʼ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿ ಪ್ರೇಕ್ಷಕರ ಹೃದಯ ಗೆಲ್ಲುತ್ತಿದೆ. ಚಿತ್ರವು ಬಿಡುಗಡೆಯಾದ ಮೊದಲ ದಿನದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಕೇವಲ 5.49 ಕೋಟಿ ಸಂಗ್ರಹಿಸಿತ್ತು, ಆದರೆ ಎರಡನೇ ದಿನದಲ್ಲಿ ಅದು ಭಾರಿ ಜಿಗಿತವನ್ನು ಕಂಡಿತು. ಇದೀಗ 7.29 ಕೋಟಿ ಗಳಿಸುವ ಮೂಲಕ 22 ಕೋಟಿ+ ವಾರಾಂತ್ಯದ ಸಂಗ್ರಹದತ್ತ ಸಾಗುತ್ತಿದೆ.
ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ ಹಿನ್ನೆಲೆ ಚಿತ್ರ ನಿರ್ಮಾಪಕರಿಗೆ ಸಮಾಧಾನ ತಂದಿದೆ. ಈ ಚಿತ್ರ ಶನಿವಾರ 7.29 ಮಿಲಿಯನ್ ಕಲೆಕ್ಷನ್ ಮಾಡಿದೆ. ಜರಾ ಹಟ್ಕೆ ಜರಾ ಬಚ್ಕೆ ಒಂದು ವಿಭಿನ್ನ ಚಿತ್ರವಾಗಿದ್ದು, ಪರಿಪೂರ್ಣ ಕೌಟುಂಬಿಕ ಹಾಸ್ಯ ಎಂಟರ್ಟೈನರ್ ಸಿನಿಮಾ ಆಗಿದೆ. ವಿಕ್ಕಿ ಮತ್ತು ಸಾರಾ ನಡುವಿನ ಕ್ರ್ಯಾಕಿಂಗ್ ಕೆಮಿಸ್ಟ್ರಿ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ.
ಸಖತ್ ವೈರಲ್ ಆಗುತ್ತಿವೆ ಸಾನಿಯಾ ಹಾಟ್ ಫೋಟೋಸ್..! ನೋಡಿ
ಬಹಳ ಸಮಯದ ನಂತರ, ಅಭಿಮಾನಿಗಳು ಈ ರೀತಿಯ ಒಂದು ಕೌಟುಂಬಿಕ ಹಾಸ್ಯ ಸಿನಿಮಾವನ್ನು ಇಷ್ಟ ಪಟ್ಟು ವೀಕ್ಷಿಸತ್ತಿದ್ದಾರೆ. ಈ ಸಿನಿಮಾದ ಮೂಲಕ ವಿಕ್ಕಿ ಒಬ್ಬ ಉತ್ತಮ ನಟ ಎಂಬುವುದನ್ನು ಸಾಭೀತು ಪಡಿಸಿದ್ದಾರೆ. ಸಾರಾ ಒಂದೊಂದು ಚಿತ್ರದಲ್ಲೂ ನಟಿಯಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಜರಾ ಹಟ್ಕೆ ಜರಾ ಬಚ್ಕೆ ಚಿತ್ರದ ಕುರಿತು ಹೇಳುವುದಾದ್ರೆ, ಇದು ಒಂದು ಸಣ್ಣ ಪಟ್ಟಣದ ನವ-ಯುಗದ ದಂಪತಿಗಳ ಕಥೆಯಾಗಿದೆ. ಕಥೆಯ ತುಂಬಾ ಇಂಟ್ರಸ್ಟಿಂಗ್ ಆಗಿದೆ. ಕಪಿಲ್ ಮತ್ತು ಸೌಮ್ಯಾ ದಂಪತಿ ಪಾತ್ರದಲ್ಲಿ ವಿಕ್ಕಿ, ಸಾರಾ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ, ಬಾಕ್ಸ್ ಆಫೀಸ್ ಅತ್ಯಂತ ಅನಿರೀಕ್ಷಿತವಾಗಿದೆ, ಏಕೆಂದರೆ ಎಲ್ಲಾ ಉತ್ತಮ ಚಿತ್ರಗಳು ಯಶಸ್ವಿಯಾಗಲು ವಿಫಲವಾಗಿವೆ. ಪಠಾಣ್, ತು ಜೂಟಿ ಮೈ ಮಕ್ಕರ್, ದಿ ಕೇರಳ ಸ್ಟೋರಿ, ಮತ್ತು ಈಗ ವಿಕ್ಕಿ ಮತ್ತು ಸಾರಾ ಅವರ ಜರಾ ಹಟಕೆ, ಜರಾ ಬಚ್ಕೆ ಬಾಕ್ಸ್ ಆಫೀಸ್‌ನಲ್ಲಿ ಮಿಂಚುತ್ತಿವೆ. ಸದ್ಯ ಜರಾ ಹಟ್ಕೆ ಜರಾ ಬಚ್ಕೆ ನಿರ್ಮಾಪಕರು ಬಾಕ್ಸ್ ಆಫೀಸ್‌ನಲ್ಲಾಗುತ್ತಿರುವ ಬದಲಾವಣೆ ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ