ಮುಂಬೈ: ಬಾಲಿವುಡ್ ಇಂಡಸ್ಟ್ರಿಗೆ ಕೊರೋನಾ ಎಂಟ್ರಿ ಆಗಿದೆ. ಇಂದು 'ಉರಿ ಸಿನಿಮಾ'ದ ನಾಯಕ ನಟ ವಿಕಿ ಕೌಶಲ್ ಗೆ  ಕೊರೋನಾ ಪಾಸಿಟಿವ್. 


COMMERCIAL BREAK
SCROLL TO CONTINUE READING

ಈ ಕುರಿತು ಇನ್ಸ್ಟಾ ಗ್ರಾಮ್ ನಲ್ಲಿ ಬರೆದುಕೊಂಡಿರುವ ವಿಕಿ ಕೌಶಲ್(Vicky Kaushal), ನನಗೆ ಕೋವಿಡ್-19 ಪಾಸಿಟಿವ್ ಆಗಿದೆ. ನಾನು ಹೋಂ ಕ್ವಾರಂಟೈನ್ ಆಗಿದ್ದೇನೆ. ಡಾಕ್ಟರ್ ಹೇಳಿದ ಹಾಗೆ ನಾನು ಮಾತ್ರೆ ಮತ್ತು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ . 


ನನ್ನ  ಸಂಪರ್ಕದಲ್ಲಿದ್ದ ಎಲ್ಲರೂ ಆದಷ್ಟು ಬೇಗ ಕೊರೋನಾ ಟೆಸ್ಟ್(Corona Test) ಮಾಡಿಸಿಕೊಳ್ಳಿ. ಹುಷಾರಾಗಿರಿ ಮತ್ತೆ ಆರೋಗ್ಯದ ಕಡೆ ಗಮನವಿರಲಿ ಎಂದು ವಿಕಿ ಕೌಶಲ್ ಬರೆದು ಪೋಸ್ಟ್ ಮಾಡಿದ್ದಾರೆ.


ಬಾಲಿವುಡ್ ನಟಿ ಭೂಮಿ ಪೆಡ್ನೇಕರ್(Bhumi Pednekar) ಗೂ ಕೂಡ ಕೊರೋನಾ ಪಾಸಿಟಿವ್ ಆಗಿದೆ. ಕೌಶಲ್ ಮತ್ತೆ ಪೆಡ್ನೇಕರ್ ಇಬ್ಬರು ಧರ್ಮ ಪ್ರೊಡಕ್ಷನ್ಸ್ ನಲ್ಲಿ ರೆಡಿಯಾಗುತ್ತಿರುವ 'ಮಿಸ್ಟರ್ ಲೆಲೆ" ಸಿನಿಮಾವನ್ನ  ನಿರ್ದೇಶಕ ಶಶಾಂಕ್ ಖೈತಾನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ  ಈ ವಿಷಯ ಸ್ಪಷ್ಟವಾಗಿದೆ. ನಂತರ ಇಬ್ಬರು ಹೋಂ ಕ್ವಾರಂಟೈನ್ ಆಗಿದ್ದರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.