Govinda Naam Mera : ಬಾಲಿವುಡ್‌ ನಟ ವಿಕ್ಕಿ ಕೌಶಲ್, ಭೂಮಿ ಪೆಡ್ನೇಕರ್ ಮತ್ತು ಕಿಯಾರಾ ಅಡ್ವಾಣಿಯ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಗೋವಿಂದಾ ನಾಮ್ ಮೇರಾ' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಡಿಸೆಂಬರ್ 16 ರಂದು ಸಿನಿಮಾ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಈ ಕುರಿತು ವಿಕ್ಕಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಚಿತ್ರದ ಪೋಸ್ಟರ್‌ ಹಂಚಿಕೊಂಡು ಸಿನಿಮಾದ ಬಿಡುಗಡೆ ದಿನಾಂಕವನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕಿಯಾರಾ ಮತ್ತು ಭೂಮಿಯನ್ನು ಒಳಗೊಂಡ ಹೊಸ ಪೋಸ್ಟರ್‌ ಅನ್ನು ಫ್ಯಾನ್ಸ್‌ ಮೆಚ್ಚಿಕೊಂಡಿದ್ದಾರೆ. ಪೋಸ್ಟ್‌ ಜೊತೆ, ʼಗೋವಿಂದಾ ನಾಮ್ ಮೇರಾ, ನಾಚ್ನಾ ಕಾಮ್ ಮೇರಾ. ಆ ರಹಾ ಹುನ್ ಜಲ್ದ್, ಅಪ್ನಿ ಕಹಾನಿ ಲೇ ಕರ್! 'ಗೋವಿಂದಾ ನಾಮ್ ಮೀರಾ' ಡಿಸೆಂಬರ್ 16 ರಿಂದ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ, ಎಂದು ಬರೆದಿದ್ದಾರೆ.


ಇದನ್ನೂ ಓದಿ: ಅಬ್ಬರಿಸಿದ ʼಬನಾರಸ್ʼ : ಫ್ಯಾನ್ಸ್‌ಗೆ ಧನ್ಯವಾದ ಸಲ್ಲಿಸಿದ ಝೈದ್ ಖಾನ್..!


ಶಶಾಂಕ್ ಖೈತಾನ್ ಅವರ ನಿರ್ದೇಶನದ ಈ ಕ್ರೈಂ ಥ್ರಿಲ್ಲರ್‌ ಸಿನಿಮಾದಲ್ಲಿ ವಿಕ್ಕಿ, ಗೋವಿಂದ್ ವಾಘಮಾರೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿಯರಾದ ಕಿಯಾರಾ ಮತ್ತು ಭೂಮಿ ಅವರ ಪಾತ್ರದ ಹೆಸರುಗಳು ಇನ್ನೂ ಬಹಿರಂಗವಾಗಿಲ್ಲ. ಆದರೆ, ಚಿತ್ರದಲ್ಲಿ ಕಿಯಾರಾ ವಿಕ್ಕಿ ಗೆಳತಿಯ ಪಾತ್ರದಲ್ಲಿ ನಟಿಸುತ್ತಿದ್ದು, ಭೂಮಿ ಗೋವಿಂದನ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.


ಕರಣ್ ಜೋಹರ್ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್ ಚಿತ್ರಕ್ಕೆ ಬೆಂಬಲ ನೀಡುತ್ತಿದೆ. ಪೋಸ್ಟರ್ ಅನ್ನು ಹಂಚಿಕೊಂಡ ಜೋಹರ್, ಕೊಲೆ, ನಿಗೂಢತೆ, ಹುಚ್ಚುತನ ಮತ್ತು ಮಸಾಲಾಗೆ ಸಿದ್ಧರಾಗಿ ಎಂದು ಬರಹಗಳ ಮೂಲಕ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ. ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರ ಹೆಸರಿಸದ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಸಾರಾ ಅಲಿ ಖಾನ್ ಜೊತೆ ವಿಕ್ಕಿ ನಟಿಸಲಿದ್ದಾರೆ. ಭೂಲ್ ಭುಲಯ್ಯ 2 ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಕಿಯಾರಾ ಪ್ರಸ್ತುತ ಕಾರ್ತಿಕ್ ಆರ್ಯನ್ ಜೊತೆ ಸತ್ಯಪ್ರೇಮ್ ಕಿ ಕಥಾ ಚಿತ್ರೀಕರಣದಲ್ಲಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.