VIDEO: ಹರಿಯಾಲಿ ತೀಜ್ ಸಂಭ್ರಮದಲ್ಲಿ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದ ಸಂಸದೆ ಹೇಮಮಾಲಿನಿ!
ಹಸಿರು ಮತ್ತು ಗುಲಾಬಿ ಬಣ್ಣದ ಶಾಸ್ತ್ರೀಯ ಭರತನಾಟ್ಯ ಉಡುಪು, ಆಭರಣಗಳನ್ನು ತೊಟ್ಟು ನೃತ್ಯ ಪ್ರದರ್ಶನ ನೀಡಿದರು. ಮೊದಲ ನೃತ್ಯ ಪ್ರದರ್ಶನದ ಬಳಿಕ ಗುಲಾಬಿ ಬಣ್ಣದ ಲೆಹಂಗಾ ಧರಿಸಿ ಮತ್ತೊಂದು ನೃತ್ಯ ಪ್ರದರ್ಶನ ನೀಡಿದರು.
ಮಥುರಾ: ಇಲ್ಲಿನ ಹರಿಯಾಲಿ ತೀಜ್ ಮುನ್ನಾ ದಿನದಂದು 'ಜುಲಾನ್ ಉತ್ಸವ'ದ ಸಂದರ್ಭದಲ್ಲಿ ವೃಂದಾವನದ ಶ್ರೀ ರಾಧಾ ರಾಮಣ ದೇವಸ್ಥಾನದಲ್ಲಿ ಬಿಜೆಪಿ ಸಂಸದೆ ಹೇಮಾ ಮಾಲಿನಿ ಶಾಸ್ತ್ರಿಯ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮನಸೂರೆಗೊಂಡರು.
ಹಸಿರು ಮತ್ತು ಗುಲಾಬಿ ಬಣ್ಣದ ಶಾಸ್ತ್ರೀಯ ಭರತನಾಟ್ಯ ಉಡುಪು, ಆಭರಣಗಳನ್ನು ತೊಟ್ಟು ನೃತ್ಯ ಪ್ರದರ್ಶನ ನೀಡಿದರು. ಮೊದಲ ನೃತ್ಯ ಪ್ರದರ್ಶನದ ಬಳಿಕ ಗುಲಾಬಿ ಬಣ್ಣದ ಲೆಹಂಗಾ ಧರಿಸಿ ಮತ್ತೊಂದು ನೃತ್ಯ ಪ್ರದರ್ಶನ ನೀಡಿದರು.
"ಹರಿಯಾಲಿ ತೀಜ್ ಸಂದರ್ಭದಲ್ಲಿ ಶ್ರೀ ಕೃಷ್ಣನಿಗಾಗಿ ರಾಧಾ ರಾಮನ ದೇವಸ್ಥಾನದಲ್ಲಿ ನೃತ್ಯ ಪ್ರದರ್ಶನ ನೀಡುತ್ತಿರುವುದು ಬಹಳ ಖುಷಿಯಾಗಿದೆ. ಮೊದಲ ಪ್ರದರ್ಶನದಲ್ಲಿ ಶ್ರೀ ಕೃಷ್ಣನನ್ನು ಭೇಟಿಯಾಗಲು ಕಾತುರಳಾದ ರಾಧೆಯ ಭಾವನೆಗಳನ್ನು ವ್ಯಕ್ತಪಡಿಸಿದೆ. ಎರಡನೇ ನೃತ್ಯದಲ್ಲಿ ತನ್ನನ್ನು ಒಬ್ಬ ಭಕ್ತೆಯಾಗಿ ಸ್ವಿಕರಿಸುವಂತೆ ಮೀರಾ ಶ್ರೀ ಕೃಷ್ಣನಲ್ಲಿ ಕೇಳುತ್ತಿರುವ ಭಾವವನ್ನು ವ್ಯಕ್ತಪಡಿಸಿದೆ. ಇಲ್ಲಿ ನೃತ್ಯ ಮಾದುವುದನ್ನು ನಾನು ಬಹಳ ಇಷ್ಟಪಡುತ್ತೇನೆ" ಎಂದು ಬಿಜೆಪಿ ಸಂಸದೆ ಮತ್ತು ನೃತ್ಯ ಕಲಾವಿದೆ ಹೇಮಮಾಲಿನಿ ತಿಳಿಸಿದರು.
ಹೇಮಾ ಮಾಲಿನಿ ಅವರು ನೃತ್ಯ ಪ್ರದರ್ಶನದ ಬಳಿಕ ಮೆಚ್ಚುಗೆಯಾಗಿ ಕೊಳಲು ಮತ್ತು ಸೀರೆಯನ್ನು ಪಡೆದರು. ಬಳಿಕ ಮಾತನಾಡಿದ ಹೇಮಮಾಲಿನಿ, ಈ ಕೊಳಲನ್ನು ತಮ್ಮ ಮನೆಯಲ್ಲಿರುವ ಶ್ರೀ ಕೃಷ್ಣನ ಮೂರ್ತಿಗೆ ಅರ್ಪಿಸುವುದಾಗಿ ಹೇಳಿದರು.