ಮುಂಬೈ: ಪ್ರಿಯಾ ವಾರಿಯರ್ ಯಾರಿಗೆ ಗೊತ್ತಿಲ್ಲ ಹೇಳಿ,ಕೇವಲ ತನ್ನ ವೈರಲ್ ವಿಂಕ್ ನಿಂದಾಗಿಯೇ ಲಕ್ಷಾಂತರ ಅಭಿಮಾನಿಗಳನ್ನು ಸೃಷ್ಟಿಸಿದಾಕೆ.ಈಗ ಮಾಲಿವುಡ್ ಅಂಗಳದಲ್ಲಿ ಹೊಡೆದ ಆ ಕಣ್ಸನ್ನೆ ಈಗ ಬಾಲಿವುಡ್ ಗೆ ಶಿಫ್ಟ್ ಆಗಿದೆ.ಹಾಗಂತ ನಾವು ಈಗ ಬಾಲಿವುಡ್ ನಲ್ಲಿ ಪ್ರಿಯಾ ನಟಿಸುತ್ತಿರುವುದರ ಬಗ್ಗೆ ಹೇಳುತ್ತಿಲ್ಲ. ಬದಲಾಗಿ ಆಕೆಯ ಕಣ್ಸನ್ನೆಯನ್ನು ಈಗ ಬಾಲಿವುಡ್  ಬೆಡಗಿ ದಿಶಾ ಪಟಾನಿ ಕಾಪಿ ಮಾಡಿದ್ದಾಳೆ.



COMMERCIAL BREAK
SCROLL TO CONTINUE READING

ಈಗ ಆಕೆ ಪ್ರಿಯಾ ವಾರಿಯರ್ ನ ಫೇಮಸ್  ವೈರಲ್ ವಿಂಕ್ ನ್ನು ಕಾಪಿ ಮಾಡಿರುವ ವೀಡಿಯೋ ಮತ್ತು ಚಿತ್ರವನ್ನು ಆಕೆಯ ಅಭಿಮಾನಿಗಳ ಇನ್ಸ್ಟಾಗ್ರಾಂ ಪುಟದಲ್ಲಿ ಶೇರ್ ಮಾಡಲಾಗಿದೆ.




ದಿಶಾ ಪಟಾಣಿ ಈಗ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ನಟಿ. 2015 ರಲ್ಲಿ  ಪುರಿ ಜಗನ್ ನಾಥ್ ರ ತೆಲುಗು ಚಿತ್ರ ಲೊಫರ್ ಮೂಲಕ ಚಿತ್ರ ಜಗತ್ತಿಗೆ ಕಾಲಿಟ್ಟ ನಟಿ ಮುಂದೆ ಧೋನಿ ಜೀವನ ಕತೆ ಆಧರಿಸಿದ ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ  ಹಾಲಿವುಡ್ ನಲ್ಲಿ  ಜಾಕಿಜಾನ್ ಜೊತೆ ಕುಂಗ್ಫು ಯೋಗಾ ಚಿತ್ರದಲ್ಲಿ  ನಟಿಸಿದ್ದಾಳೆ.ಸದ್ಯ ಆಕೆ  ಟೈಗರ್ ಶ್ರಾಫ್  ಜೊತೆ ಡೇಟಿಂಗ್ ನಡೆಸುತ್ತಿದ್ದಾಳೆ.