ನವದೆಹಲಿ: ಗಾಯಕಿ ನೇಹಾ ಕಕ್ಕರ್ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಿಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಅವರ ಮುಂದಿನ ಚಿತ್ರ 'ದೇ ದೇ ಪ್ಯಾರ್ ದೇ' ಹಾಡುಗಳಿಗೆ ಸ್ಟೆಪ್ ಹಾಕುವ ಜನರನ್ನು ಮನಸೂರೆಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಎರಡು ದಿನಗಳ ಹಿಂದೆ ತನ್ನ ಹೊಸ ಹಾಡು 'ಹಾಲೀ ಹಾಲೀ'ಗೆ ಜಬರ್ದಸ್ತ್ ಡ್ಯಾನ್ಸ್ ಮಾಡಿದ ನೇಹಾ ವೀಡಿಯೋಗೆ ಜನ ಎಷ್ಟು ಪ್ರಭಾವಿತರಾಗಿದ್ದಾರೆ ಎಂದರೆ ಇದುವರೆಗೂ 38,60,000ಕ್ಕೂ ಹೆಚ್ಚು ಜನ ವೀಡಿಯೋ ವೀಕ್ಷಿಸಿದ್ದಾರೆ.


ತನ್ನ ಅದ್ಭುತ ಧ್ವನಿ ಹಾಗೂ ಮಾತಿನ ಮೂಲಕ ಜನರ ಹೃದಯ ಮುಟ್ಟುವ ನೇಹಾ ಈ ವೀಡಿಯೋದಲ್ಲಿ ಸಖತ್ ಬಬ್ಲಿಯಾಗಿ ಕಾಣಿಸಿಕೊಂಡಿದ್ದಾರೆ. ಹಸಿರು ಮತ್ತು ಕಪ್ಪು ಬಣ್ಣದ ಉಡುಗೆ ತೊಟ್ಟು ಸ್ಟೆಪ್ ಹಾಕಿರುವ ನೇಹಾ ಕಕ್ಕರ್ ಸಖತ್ ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ. ಇವರ ಈ ಗೆಟಪ್ ನೋಡಿ ಜನ 'ಕ್ಯೂಟಿ ಪೈ' ಎನ್ನುತ್ತಿದ್ದಾರೆ.